ಚೆನ್ನೈ, ರಾಜಸ್ಥಾನ್​​ ಕೋಚ್​ ಸಂಭಾವನೆ 5 ಕೋಟಿ! RCB ಎಷ್ಟು ಕೋಟಿ ಕೊಡುತ್ತೆ..?

IPL-19ಗೆ ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಆಟಗಾರರ ರಿಟೇನ್, ರಿಲೀಸ್ ಮತ್ತು ಟ್ರೇಡ್ ಮುಕ್ತಾಯಗೊಂಡಿದೆ. ಮಿನಿ ಹರಾಜಿಗಾಗಿ ಕಾಯುತ್ತಿರುವ ಫ್ರಾಂಚೈಸಿ ಮಾಲೀಕರು ಹೊಸ ಸಪೋರ್ಟ್ ಸ್ಟಾಫ್​​​​​​​​​ ಆಯ್ಕೆ ಸಹ ನಡೆಸಿದ್ದಾರೆ. ಐಪಿಎಲ್ ಕೋಚ್​ಗಳಿಗೆ ಪ್ರತಿ ಸೀಸನ್​ಗೆ ಸಿಗೋ ಸಂಭಾವನೆ ಎಷ್ಟು?

author-image
Ganesh Kerekuli
Updated On
RCB
Advertisment
  • ಮುಂಬೈ ಇಂಡಿಯನ್ಸ್, ಲಕ್ನೌ ಕೋಚ್​ಗೆ 4 ಕೋಟಿ ಸ್ಯಾಲರಿ
  • 3.5 ಕೋಟಿ ಪಡೆಯುತ್ತಿರುವ ಆರ್​ಸಿಬಿ, ಪಂಜಾಬ್ ಕೋಚ್
  • ಹೈದ್ರಾಬಾದ್, ಗುಜರಾತ್ ಕೋಚ್​ಗೆ ತಲಾ 3 ಕೋಟಿ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ಗೆ  ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಆಟಗಾರರ ರಿಟೇನ್, ರಿಲೀಸ್ ಮತ್ತು ಟ್ರೇಡ್ ಮುಕ್ತಾಯಗೊಂಡಿದೆ. ಮಿನಿ ಹರಾಜಿಗಾಗಿ ಕಾಯುತ್ತಿರುವ ಫ್ರಾಂಚೈಸಿ ಮಾಲೀಕರು ಹೊಸ ಸಪೋರ್ಟ್ ಸ್ಟಾಫ್​​​​​​​​​ ಆಯ್ಕೆ ಸಹ ನಡೆಸಿದ್ದಾರೆ. ಅಷ್ಟಕ್ಕೂ ಐಪಿಎಲ್ ಕೋಚ್​ಗಳಿಗೆ ಪ್ರತಿ ಸೀಸನ್​ಗೆ ಸಿಗೋ ಸಂಭಾವನೆ ಎಷ್ಟು? 

ಐಪಿಎಲ್. ಇದು ಮಿಲಿಯನ್ ಡಾಲರ್ ಟೂರ್ನಿ. ಇಲ್ಲಿ ಲಕ್ಷಗಳಿಗೆ ಬೆಲೆ ಇಲ್ಲ. ಇಲ್ಲೇನಿದ್ರೂ ಕೋಟಿಗಳದ್ದೇ ದರ್ಬಾರ್. ಇಂಡಿಯನ್ ಪೈಸಾ ಲೀಗ್​​ನಲ್ಲಿ ಆಟಗಾರರಷ್ಟೇ ಅಲ್ಲ. ತಂಡದ ಸಪೋರ್ಟಿಂಗ್ ಸ್ಟಾಫ್ ಸಹ ಕೋಟಿ ಕೋಟಿ ಹಣ ಸಂಭಾವನೆ ಪಡೆಯುತ್ತಾರೆ. ಒಂದೊಂದು ಫ್ರಾಂಚೈಸಿ ಒಂದೊಂದು ಲೆಕ್ಕದಲ್ಲಿ, ಕೋಚ್​​ಗಳಿಗೆ ಸ್ಯಾಲರಿ ಫಿಕ್ಸ್ ಮಾಡಿರುತ್ತದೆ. ಕೇವಲ ಒಂದುವರೆ ತಿಂಗಳಿಗೆ ಕೋಚ್​ಗಳ ಅಕೌಂಟ್​​​ಗೆ, ಕೋಟಿ ಕೋಟಿ ಹಣ ಬಂದು ಬೀಳುತ್ತದೆ. 

ಚೆನ್ನೈ, ರಾಜಸ್ಥಾನ್​​ ಕೋಚ್​ ಸಂಭಾವನೆ 5 ಕೋಟಿ!

ಚೆನ್ನೈ ಸೂಪರ್​ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಜರ್ನಿಯೇ, ಕನ್ಸಿಸ್ಟೆನ್ಸಿ ಮತ್ತು ಎಕ್ಸಲೆನ್ಸ್. ಸಿಎಸ್​​ಕೆ ತಂಡಕ್ಕೆ 5 ಟ್ರೋಫಿ ಗೆಲ್ಲಿಸಿಕೊಟ್ಟಿರುವ ಫ್ಲೆಮಿಂಗ್, 10 ಬಾರಿ ತಂಡವನ್ನ ಐಪಿಎಲ್ ಫೈನಲ್​​​​​​​​​ ಪ್ರವೇಶಿಸಿದ್ದಾರೆ. ನ್ಯೂಜಿಲೆಂಡ್​ನ ಈ ಅನುಭವಿ ಕೋಚ್ ಸೀಸನ್​​ಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

ಇದನ್ನೂ ಓದಿ: Super six: ಟೀಂ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್; ಫೀಲ್ಡಿಗೆ ಇಳಿದ ಸ್ಟಾರ್​ ಬ್ಯಾಟರ್​!

stephen fleming

ಕುಮಾರ್ ಸಂಗಕ್ಕರ. ರಾಜಸ್ಥಾನ್ ರಾಯಲ್ಸ್ ತಂಡದ ರಾಯಲ್ ಕೋಚ್. ಆರ್​ಆರ್ ಕೋಚ್ ಕೋಚ್ ಆಗಿ ಸಂಗಕ್ಕರ, ಯುವ ಪಡೆಗೆ ಶಕ್ತಿ ತುಂಬಿದ್ದಾರೆ. ಆರ್​ಆರ್ ಕೋಚಿಂಗ್ ಸ್ಟಾಫ್ ಅಪ್​ಗ್ರೇಡ್ ಮಾಡಿರುವ ಸಂಗಕ್ಕರ, ಹೊಸ ನಾಯಕನೊಂದಿಗೆ ನೂತನ ಸೀಸನ್ ಎದುರು ನೋಡ್ತಿದ್ದಾರೆ. ರಾಹುಲ್ ದ್ರಾವಿಡ್ ಬಳಿಕ ಆರ್​ಆರ್​ಗೆ ಮರಳಿರುವ ಸಂಗಾಕ್ಕರ, ಸೀಸನ್-19ರಲ್ಲಿ 5 ಕೋಟಿ ಸಂಭಾವನೆ ಪಡೆಯಲಿದ್ದಾರೆ.  

4 ಕೋಟಿ ಸ್ಯಾಲರಿ..!

2017ರಲ್ಲಿ ಮುಂಬೈ ಇಂಡಿಯನ್ಸ್ ಕಾಲಿಟ್ಟಿದ್ದ ಮಹೇಲಾ ಜಯವರ್ಧನೆ 3 ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್. ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ, ಮ್ಯಾಚ್ ಟ್ಯಾಕ್ಟಿಸ್ ಮತ್ತು ಟೀಮ್ ಯ್ಯೂನಿಟ್ ಬಿಲ್ಡ್ ಮಾಡೋದ್ರಲ್ಲಿ ಚತುರ. ಅಂಬಾನಿ ಬಗ್ರೆಡ್ ಕೋಚ್ ಆಗಿ ಮಹೇಲಾ 4 ಕೋಟಿ ಸ್ಯಾಲರಿ ಪಡೆಯುತ್ತಿದ್ದಾರೆ. 

ಇದನ್ನೂ ಓದಿ: ಕೊಹ್ಲಿ ಅಬ್ಬರಕ್ಕೆ ದಾಖಲೆಗಳು ಪುಡಿಪುಡಿ.. ಕಳೆದ 5 ಇನ್ನಿಂಗ್ಸ್​ನಲ್ಲಿ ಬೇರೆಯದ್ದೇ ಇತಿಹಾಸ..!

jayavardhane

ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್, ಲಕ್ನೌ ಸೂಪರ್​ಜೈಂಟ್ಸ್​ ತಂಡದ ಹೆಡ್ ಕೋಚ್. 2024ರಲ್ಲಿ ಎಲ್​ಎಸ್​​ಜಿ ತಂಡ ಸೇರಿಕೊಂಡ ಲ್ಯಾಂಗರ್, ಆಟಗಾರರಲ್ಲಿ ಡಿಸಪ್ಲಿನ್ ಮತ್ತು ಫೋಕಸ್ಡ್ ಕೋಚಿಂಗ್ ಫಿಲಾಸಫಿ ತಂದವರು. ಸದ್ಯ ತಂಡದಲ್ಲಿ ಗೆಲುವಿನ ವಾತಾವರಣ ಸೃಷ್ಠಿ ಮಾಡಿ ಟ್ರೋಫಿ ಗೆಲ್ಲೋಕೆ ಮುಂದಾಗಿರುವ ಲ್ಯಾಂಗರ್ ಸ್ಯಾಲರಿ, 4 ಕೋಟಿ.

3.5 ಕೋಟಿ ಪಡೆಯುತ್ತಿರುವ ಆರ್​ಸಿಬಿ, ಪಂಜಾಬ್ ಕೋಚ್

ಐಪಿಎಲ್​ನ ಹೈಪ್ರೊಫೈಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದಿದೆ. ಅದು ಅನುಭವಿ ಕೋಚ್ ಌಂಡಿ ಫ್ಲವರ್ ಮಾರ್ಗದರ್ಶನದಲ್ಲಿ. ವಿಭಿನ್ನ ಕೋಚಿಂಗ್ ಸ್ಟೈಲ್ ಮತ್ತು ಮೆಂಟಲ್ ಟಫ್ನೆಸ್​​ಗೆ ಹೆಚ್ಚು ಒತ್ತು ಕೊಡೋ ಜಿಂಬಾಬ್ವೆ ಮೂಲದ ಫ್ಲವರ್, ಸೀಸನ್​ಗೆ 3.5 ಕೋಟಿ ಫೀಸ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಭಾವಿ ಪತಿ ಜೊತೆ ರಂಜನಿ ರಾಘವನ್ ಜಾಲಿ ಜಾಲಿ!

ಶುಭ್ಮನ್​​ ಗಿಲ್​​ ವಿವಾದಾತ್ಮಕ ತೀರ್ಪಿನ ಬಗ್ಗೆ ರಿಕಿ ಪಾಂಟಿಂಗ್​​ ಹೇಳಿದ್ದೇನು..?

ಐಪಿಎಲ್​​ಗೆ ಸಖತ್ ಸೂಟ್ ಆಗೋ ಕೋಚ್ ಅಂದ್ರೆ ಅದು ಆಸಿಸ್​​​ನ ಮಾಜಿ ನಾಯಕ ರಿಕಿ ಪಾಂಟಿಂಗ್. ಪಾಟಿಂಗ್ ನ್ಯಾಚ್ಯುರೆಲ್ ಕ್ಯಾರೆಕ್ಟರೇ ಅಗ್ರೆಸಿವ್. ಹಾಗಾಗಿ ಈ ಫಾರ್ಮೆಟ್​​ಗೆ ರಿಕಿ, ಹೇಳಿ ಮಾಡಿಸಿದ ಕೋಚ್. ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ಅನುಭವ ಹೊಂದಿರುವ ಪಾಟಿಂಗ್, ಮುಂಬರುವ ಸೀಸನ್​​ನಲ್ಲಿ ಪಂಜಾಬ್ ಕಿಂಗ್ಸ್​​​ಗೆ ಟ್ರೋಫಿ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಸದ್ಯ ಪಂಜಾಬ್ ಕಿಂಗ್ಸ್, ಪಾಂಟಿಂಗ್​ಗೆ 3.5 ಕೋಟಿ ಫೀಸ್ ನೀಡ್ತಿದೆ.   

ಗುಜರಾತ್ ಕೋಚ್​ಗೆ ತಲಾ 3 ಕೋಟಿ

ಸನ್​​ರೈಸರ್ಸ್ ಹೈದ್ರಾಬಾದ್ ಕೋಚ್ ಡೇನಿಯಲ್ ವೆಟ್ಟೋರಿ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಇಬ್ಬರೂ ತಲಾ 3 ಕೋಟಿ ಪೇಮೆಂಟ್ ಪಡೆಯುತ್ತಿದ್ರೆ, ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ನೂತನ ಕೋಚ್ ಅಭಿಷೇಕ್ ನಾಯರ್ 2 ಕೋಟಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೇಮಾಂಗ್ ಬದಾನಿ 1.5 ಕೋಟಿ ಪಡೆಯುತ್ತಿರುವ ಕೋಟಿ ಬೆಲೆಯ ಕೋಚ್​ಗಳಾಗಿದ್ದಾರೆ. ತಂಡಕ್ಕೆ ಆಟಗಾರರು ಎಷ್ಟು ಮುಖ್ಯಾನೋ, ಕೋಚ್ ಮತ್ತು ಸಪೋರ್ಟಿಂಗ್ ಸ್ಟಾಫ್ ಕೂಡ ಅಷ್ಟೇ ಮುಖ್ಯ. ಹಾಗಾಗಿ ಕೋಚ್​ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 6 ಸೆಟ್ ಒಡವೆ, ಇನ್ನೋವಾ ಕಾರ್‌ ವರದಕ್ಷಿಣೆಗಾಗಿ ಬೇಡಿಕೆ : ಮದುವೆಯಾದ ಒಂದೇ ತಿಂಗಳಿಗೆ ನವ ವಧು ಆತ್ಮಹ*ತ್ಯೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL IPL 2026 auction IPL 2026
Advertisment