35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!

ಕರ್ನಾಟಕ ತಂಡದ ಎಡಗೈ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್​ಗೆ ಅನ್ಯಾಯ ಆಗ್ತಿದ್ಯಾ? ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅತ್ಯುತಮ ಪ್ರದರ್ಶನ ನೀಡಿದ್ರೂ ಪಡಿಕ್ಕಲ್​​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಯಾಕೆ ಸಿಕ್ತಿಲ್ಲ!

author-image
Ganesh Kerekuli
Team india (8)
Advertisment
  • ವೈಟ್​ಬಾಲ್ ಕ್ರಿಕೆಟ್​ನಲ್ಲಿ ಪಡಿಕ್ಕಲ್ ಮಿಂಚಿನ ಆಟ..!
  • ನ್ಯೂಜಿಲೆಂಡ್ ಏಕದಿನ ಸರಣಿಗೆ ಪಡಿಕ್ಕಲ್​ಗೆ ಚಾನ್ಸ್..?
  • ಟಾಪ್ ಆರ್ಡರ್​​ಗೆ ಪಡಿಕ್ಕಲ್ ದಿ ಬೆಸ್ಟ್ ಬ್ಯಾಟರ್..!

ಕರ್ನಾಟಕ ತಂಡದ ಸ್ಟೈಲಿಶ್​ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್, ಗುಡ್​ನ್ಯೂಸ್ ನಿರೀಕ್ಷೆಯಲ್ಲಿದ್ದಾರೆ. ಹೊಸ ವರುಷ, ಹೊಸ ಹರುಷದಲ್ಲಿರುವ ಪಡಿಕ್ಕಲ್​​​ರನ್ನ, ಆಯ್ಕೆಗಾರರು ಕಣ್ತೆರೆದು ನೋಡುತ್ತಾರಾ? ಸಾಲಿಡ್ ಫಾರ್ಮ್​ನಲ್ಲಿ ಬ್ಯಾಟಿಂಗ್ ನಡೆಸ್ತಿರುವ ಪಡಿಕ್ಕಲ್​​ಗೆ ಪ್ರಮೋಷನ್ ನೀಡ್ತಾರಾ? ವರ್ಷವಿಡೀ ಪಟ್ಟ ಶ್ರಮಕ್ಕೆ ಇನ್ನಾದ್ರೂ ಫಲ ಸಿಗುತ್ತಾ ಅಂತ, ಪಡಿಕ್ಕಲ್ ಕಾಯ್ತಿದ್ದಾರೆ.

ಪ್ರತಿಷ್ಟಿತ ವಿಜಯ್ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್ ಜಬರ್​ದಸ್ತ್ ಪ್ರದರ್ಶನ ನೀಡ್ತಿದ್ದಾರೆ. ಜಾರ್ಖಂಡ್​ ವಿರುದ್ಧದ ಮೊದಲ ಪಂದ್ಯದಲ್ಲೇ ಅತ್ಯಾದ್ಭುತ ಶತಕ ಸಿಡಿಸಿದ ಪಡಿಕ್ಕಲ್, ಕೇರಳ ವಿರುದ್ಧವೂ ಶತಕ ಸಿಡಿಸಿ ಮಿಂಚಿದ್ರು. ವಿಜಯ್ ಹಜಾರೆಯಲ್ಲಿ ಪಡಿಕ್ಕಲ್ ರನ್ ಯಾತ್ರೆ ಮುಂದುವರೆಸುತ್ತಿದ್ದಾರೆ.

ಇದನ್ನೂ ಓದಿ:ರವಿ ಶಾಸ್ತ್ರಿ ಮೇಲೆ ಕಣ್ಣಿಟ್ಟ ಇಂಗ್ಲೆಂಡ್ ಕ್ರಿಕೆಟ್! ಮಹತ್ವದ ಜವಾಬ್ದಾರಿ ಹೆಗಲೇರುವ ಸಾಧ್ಯತೆ..!

‘ನೀವು ಬ್ಯಾಟ್ ಮಾಡಿ, ಬೌಲಿಂಗ್ ಮಾಡ್ತೇನೆ’ ಎಂದ ಪಡಿಕ್ಕಲ್ -ಸವಾಲ್ ಹಾಕಿದ್ದು ಯಾರಿಗೆ..? VIDEO

ಲಿಸ್ಟ್ 'ಎ' ಕ್ರಿಕೆಟ್​ನಲ್ಲಿ ದೇವದತ್ ಪಡಿಕ್ಕಲ್ ಮುಂದೆ, ಸೂಪರ್​ಸ್ಟಾರ್ ಕ್ರಿಕೆಟಿಗರು ಏನೇನು ಇಲ್ಲ.! ಕೊಹ್ಲಿ, ರೋಹಿತ್ ಶರ್ಮಾ ಎಲ್ಲರೂ, ಕರ್ನಾಟಕ ಬ್ಯಾಟರ್ ಮುಂದೆ ಸೈಲೆಂಟ್ ಆಗಿದ್ದಾರೆ. ಆಡಿರೋ 35 ಲಿಸ್ಟ್ 'ಎ' ಪಂದ್ಯಗಳಲ್ಲಿ ಪಡಿಕ್ಕಲ್,​​​​​​​​​​​​​​​​​ 11 ಶತಕ ಮತ್ತು 12 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಡಿಕ್ಕಲ್ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 84.

ಪಡಿಕ್ಕಲ್ ಮಿಂಚಿನ ಆಟ..!

ವಿಜಯ್ ಹಜಾರೆ ಟೂರ್ನಿಯಲ್ಲಿ ಅಷ್ಟೇ ಅಲ್ಲ. ಅದಕ್ಕೂ ಮುನ್ನ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ, ಪಡಿಕ್ಕಲ್ ಪರಾಕ್ರಮ ನಡೆಸಿದ್ದಾರೆ. ವೈಟ್​ಬಾಲ್ ಕ್ರಿಕೆಟ್​ನಲ್ಲಿ ಕನ್ನಡಿಗ ದರ್ಬಾರ್ ನಡೆಸಿದ್ದಾರೆ. 50 ಓವರ್ ಫಾರ್ಮೆಟ್ ಮತ್ತು ಟಿ-ಟ್ವೆಂಟಿ ಫಾರ್ಮೆಟ್​ಗೆ ಪಡಿಕ್ಕಲ್ ಹೇಳಿ ಮಾಡಿಸಿದ ಬ್ಯಾಟರ್. ಸಿಕ್ಕ ಅವಕಾಶಗಳಲ್ಲಿ ಎಡಗೈ ಬ್ಯಾಟರ್ ಮಿಂಚು ಹರಿಸಿದ್ದಾರೆ.

ಇದನ್ನೂ ಓದಿ:  ಅಗರ್ಕರ್ ಲೆಕ್ಕಾಚಾರ ಉಲ್ಟಾ, ಪಲ್ಟಾ -ಕೊಹ್ಲಿ ಕೊಟ್ಟ ಏಟಿಗೆ ‘ಗಂಭೀರ’..!

padikkal karun nair

ಡೊಮೆಸ್ಟಿಕ್ ಕ್ರಿಕೆಟ್​ನಲ್ಲೊ ದರ್ಬಾರ್ ನಡೆಸಿರೋ ಪಡಿಕ್ಕಲ್, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗೋ ನಿರೀಕ್ಷೆಯಲ್ಲಿದ್ದಾರೆ. ಟಿ-ಟ್ವೆಂಟಿ ವಿಶ್ವಕಪ್ ಆಡುವ ಪಡಿಕ್ಕಲ್ ಕನಸು ನನಸಾಗಲಿಲ್ಲ. ಆದ್ರೆ ಟೆಸ್ಟ್, ಟಿ-ಟ್ವೆಂಟಿ ಆಡಿರುವ ಪಡಿಕ್ಕಲ್, ಇದೀಗ ODI ಕ್ರಿಕೆಟ್​​ಗೂ ಡೆಬ್ಯೂ ಮಾಡೋ ಕನಸು ಕಾಣ್ತಿದ್ದಾರೆ. ಆದ್ರೆ ಸೆಲೆಕ್ಟರ್ಸ್​, ಪಡಿಕ್ಕಲ್​ಗೆ ಮಣೆ ಹಾಕ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

ದೇವದತ್ ಪಡಿಕ್ಕಲ್ ಆರಂಭಿಕನಾಗಿ ಸಕ್ಸಸ್ ಕಂಡಿದ್ದಾರೆ. ಟಾಪ್ ಥ್ರಿಯಲ್ಲೂ ದೇವ್ ಬ್ಯಾಟಿಂಗ್ ಮಾಡಿ, ಸೈ ಎನಿಸಿಕೊಂಡಿದ್ದಾರೆ. ಹೇಗಿದ್ರೂ 2027ರ ಏಕದಿನ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಿಕೆಟ್​​ಗೆ ಗುಡ್​ಬೈ ಹೇಳ್ತಾರೆ. ಸೋ, ಪಡಿಕ್ಕಲ್​​​​ ದಿಗ್ಗಜರನ್ನ ರೀಪ್ಲೇಸ್ ಮಾಡೋ ಬೆಸ್ಟ್ ಪ್ಲೇಯರ್ ಆಗಬಹುದು. ಹಾಗಾಗಿ ಈಗಿನಿಂದಲೇ ಪಡಿಕ್ಕಲ್​​​ರನ್ನ ಏಕದಿನ ತಂಡದಲ್ಲಿ ಬ್ಯಾಕ್​ಅಪ್ ಆಗಿ ಬಳಸಿಕೊಳ್ಳಬೇಕು. 

ಇದನ್ನೂ ಓದಿ: ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!

ಕರ್ನಾಟಕ ಬ್ಯಾಟರ್ ಪಡಿಕ್ಕಲ್, ಏಕದಿನ ತಂಡದಲ್ಲಿ ಅವಕಾಶ ಪಡೆಯೋಕೆ ಅರ್ಹ ಆಟಗಾರ. ಆದ್ರೆ ಸೆಲೆಕ್ಟರ್ಸ್​, ಪಡಿಕ್ಕಲ್ ಆಟವನ್ನ ಎರಡೂ ಕಣ್ಣುಗಳನ್ನ ತೆರೆದು ನೋಡಬೇಕಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

devdutt padikkal
Advertisment