ಅಗರ್ಕರ್ ಲೆಕ್ಕಾಚಾರ ಉಲ್ಟಾ, ಪಲ್ಟಾ -ಕೊಹ್ಲಿ ಕೊಟ್ಟ ಏಟಿಗೆ ‘ಗಂಭೀರ’..!

2027ರ ವಿಶ್ವಕಪ್​ ಆಡೋಕೆ ಕೊಹ್ಲಿ ಕಮಿಟ್​​ ಆಗಿಲ್ಲ. ಟೀಮ್​ ಇಂಡಿಯಾ ಚೀಫ್​ ಸೆಲೆಕ್ಟರ್​​ ಅಜಿತ್​​ ಅಗರ್ಕರ್​ 2 ತಿಂಗಳ ಹಿಂದೆ ನೀಡಿದ ಹೇಳಿಕೆಯಿದು. ಆ ಹೇಳಿಕೆಗೆ ಈಗ ಕೊಹ್ಲಿ ಬ್ಯಾಟ್​ನಿಂದಲೇ ಆನ್ಸರ್​ ಕೊಟ್ಟಿದ್ದಾರೆ. ಕೊಹ್ಲಿಯ ಪವರ್​ಫುಲ್​ ಪಂಚ್​ ಅಗರ್ಕರ್​​ ಲೆಕ್ಕಾಚಾರ ಪಂಚರ್​ ಆಗಿದೆ.

author-image
Ganesh Kerekuli
ಪಾಂಡ್ಯ ಬಿಟ್ಟು ಸೂರ್ಯಕುಮಾರ್​ಗೆ T20 ಕ್ಯಾಪ್ಟನ್ಸಿ ಕೊಟ್ಟಿದ್ಯಾರು.. ರೋಹಿತ್, ಗಂಭೀರ್ ಅಲ್ಲವೇ ಅಲ್ಲ!
Advertisment
  • ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ ಕೊಹ್ಲಿ
  • ಆಂಧ್ರ ವಿರುದ್ಧ ಆರ್ಭಟ.. 83 ಎಸೆತಕ್ಕೆ ಶತಕ
  • 2 ತಿಂಗಳು, 6 ಪಂದ್ಯ, 3 ಶತಕ, 3 ಅರ್ಧಶತಕ

ರಿಟೈರ್​ಮೆಂಟ್​​​ ರೂಮರ್ಸ್, ಬಿಸಿಸಿಐನಿಂದ ಸೈಡ್​ಲೈನ್​ ತಂತ್ರ, ಟೀಕೆಗಳು-ಟಿಪ್ಪಣಿಗಳು. ಕಳೆದೊಂದು ವರ್ಷದಲ್ಲಿ ಕ್ರಿಕೆಟ್​ ಲೋಕದ ಸುಲ್ತಾನ, ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ವಿರುದ್ಧ ನಡೆದಿದ್ದು ಒಂದಾ? ಎರಡಾ? ಸ್ವತಃ ಸೆಲೆಕ್ಷನ್​​​ ಕಮಿಟಿಯ ಮುಖ್ಯಸ್ಥ ಅಜಿತ್​ ಅಗರ್ಕರೇ ವಿರಾಟ್​ ಕೊಹ್ಲಿ ವಿಶ್ವಕಪ್​ ಆಡೋ Non-Committal batter ಎಂಬ ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟಿದ್ರು. ಅಕ್ಟೋಬರ್​ನಲ್ಲಿ ಓಪನ್​ ಸ್ಟೇಟ್​ಮೆಂಟ್ ಕೊಟ್ಟಿದ್ದ ಅಗರ್ಕರ್​ಗೆ ಡಿಸೆಂಬರ್​ನಲ್ಲಿ ಕಿಂಗ್​ ಕೊಹ್ಲಿ ಪಂಚ್​ ಕೊಟ್ಟಿದ್ದಾರೆ. ನನ್ನ ಆಟ ಮುಗಿದಿಲ್ಲ ಅಂತಾ ಇಡೀ ವಿಶ್ವಕ್ಕೆ ಸಾರಿದ್ದಾರೆ. 

ಧೂಳೆಬ್ಬಿಸಿದ ಕಿಂಗ್​ ಕೊಹ್ಲಿ​

ವಿರಾಟ್​ ಕೊಹ್ಲಿ ಸೈಡ್​ಲೈನ್​ ಮಾಡೋಕೆ ನಡೆದ ತಂತ್ರ ಒಂದಾ? ಎರಡಾ? ಬಿಸಿಸಿಐ ಡೊಮೆಸ್ಟಿಕ್​ ಕ್ರಿಕೆಟ್​ ಆಡಬೇಕು ಅನ್ನೋ ಕಡ್ಡಾಯ ರೂಲ್ಸ್​ನ ತಂದಿದ್ದು ಅದ್ರ ಭಾಗವೇ ಅನ್ನೋದು ಓಪನ್​ ಸೀಕ್ರೆಟ್​.ಒಂದು ಕೈ ನೋಡಿಯೇ ಬಿಡ್ತೀನಿ ಎಂದು ಸವಾಲು ಸ್ವೀಕರಿಸಿದ ಕೊಹ್ಲಿ, ಮುಟ್ಟಿ ನೋಡಿಕೊಳ್ಳುವಂತಹ ಆನ್ಸರ್​ ಕೊಟ್ಟಿದ್ದಾರೆ. ಸುದೀರ್ಘ ಅಂತರದ ಬಳಿಕ ದೇಶಿ ಕ್ರಿಕೆಟ್​ಗೆ ಮರಳಿದ ವಿರಾಟ್​, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ್ದಾರೆ.

ಇದನ್ನೂ ಓದಿ: ದೆವ್ವ ಹಿಡಿದಿದೆ ಅಂತ ಕಟ್ಟಿಗೆಯಿಂದ ಹೊಡೆದು ಅತ್ತಿಗೆ ಸಾಯಿಸಿದ ಬಾಮೈದರು..!

Kohli

ನಿನ್ನೆ ನಡೆದ ವಿಜಯ್​ ಹಜಾರೆ ಟೂರ್ನಿಯ 2ನೇ ಪಂದ್ಯದಲ್ಲೂ ವಿರಾಟ್​ ಕೊಹ್ಲಿ ಬ್ಯಾಟ್​ ಭರ್ಜರಿ ಸೌಂಡ್​ ಮಾಡಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ನಡೆದ ಗುಜರಾತ್​​ ವಿರುದ್ಧದ ಪಂದ್ಯದಲ್ಲಿ ಕಿಂಗ್​ ಕೊಹ್ಲಿ ಕಮಾಲ್​ ಮಾಡಿದ್ರು. ಬೌಂಡರಿಗಳನ್ನ ಬಾರಿಸಿ ಬೌಲರ್​ಗಳ ಬೆವರಿಳಿಸಿದ ವಿರಾಟ್​, ಜಸ್ಟ್​ 29 ಎಸೆತಕ್ಕೆ ಹಾಫ್​​ ಸೆಂಚುರಿ ಚಚ್ಚಿ ಬಿಸಾಕಿದ್ರು. ಒಟ್ಟು  61 ಎಸೆತಗಳಲ್ಲಿ 77 ರನ್​ಗಳಿಸಿದ ಕೊಹ್ಲಿ, 13 ಬೌಂಡರಿ, 1 ಸಿಕ್ಸರ್​ ಸಿಡಿಸಿ ಮಿಂಚಿದ್ರು. ಈ ಮೂಲಕ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಸತತ 6ನೇ ಬಾರಿ 50ರ ಗಡಿ ದಾಟಿದ ದಾಖಲೆ ಬರೆದಿದ್ರು. 

83 ಎಸೆತಕ್ಕೆ ಶತಕ 

13 ವರ್ಷಗಳ ಬಳಿಕ ವಿಜಯ್​ ಹಜಾರೆ ಕಣಕ್ಕೆ ಮರಳಿದ ಮೊದಲ ಪಂದ್ಯದಲ್ಲೇ ಕೊಹ್ಲಿ ಆರ್ಭಟಿಸಿದ್ರು. ಬೆಂಗಳೂರಿನಲ್ಲೇ ನಡೆದ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿದ್ರು. ಜಸ್ಟ್​ 83 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ದ ಕೊಹ್ಲಿ, 101 ಎಸೆತಗಳಲ್ಲಿ 131 ರನ್​ ಚಚ್ಚಿದ್ರು. ಇದೇ ಇನ್ನಿಂಗ್ಸ್​​ನೊಂದಿಗೆ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ವೇಗವಾಗಿ 16 ಸಾವಿರ ರನ್​ಗಳಿಸಿದ ಬ್ಯಾಟರ್​ ಎಂಬ ಸಾಧನೆ ಮಾಡಿದ್ರು. 

ಇದನ್ನೂ ಓದಿ: ಕಿವೀಸ್​ ODI ಸರಣಿಗೆ ತಂಡ ಪ್ರಕಟ ವಿಳಂಬ.. ಆಯ್ಕೆ ಸಮಿತಿಗೆ ಆಗಿರೋ ಅಡ್ಡಿ ಏನು?

Virat kohli (4)

ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ಪರ ಹೈಯೆಸ್ಟ್​ ರನ್​ ಗೆಟರ್​ ಅನಿಸಿದ್ದ ವಿರಾಟ್​ ಕೊಹ್ಲಿ, ಐಪಿಎಲ್​ ಮಧ್ಯದಲ್ಲೇ ಟೆಸ್ಟ್​ಗೆ ಸಡನ್​ ಆಗಿ ನಿವೃತ್ತಿ ಘೋಷಿಸಿದ್ರು. ಅದಾದ ಬಳಿಕನೇ ನೋಡಿ ಕೊಹ್ಲಿಯನ್ನ ವಿಶ್ವಕಪ್​ ತಂಡದಿಂದ ಡ್ರಾಪ್ ಮಾಡೋ ಚರ್ಚೆ ಆರಂಭವಾಗಿದ್ದು. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸ ಕೊಹ್ಲಿ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿತ್ತು. ಆದ್ರೆ, ಸರಣಿಯ ಮೊದಲ 2 ಪಂದ್ಯಗಳಲ್ಲಿ ಶಾಕಿಂಗ್​ ರೀತಿಯಲ್ಲಿ ಡಕೌಟ್​ ಆದ್ರು. ಆದ್ರೆ, ಆ ನಂತರದ 6 ಪಂದ್ಯಗಳಲ್ಲಿ ಪ್ರೈಮ್​ ಫಾರ್ಮ್​ ನೆನಪಿಸಿದ್ದಾರೆ. 

ಆಸಿಸ್​ ವಿರುದ್ಧದ ಕೊನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ರನ್​ ಬೇಟೆ ಆರಂಭಿಸಿದ ಕೊಹ್ಲಿ ರನ್​ ಹೊಳೆಯನ್ನೇ ಹರಿಸ್ತಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಸಾಲಿಡ್​ ಸೆಂಚುರಿ ಬಾರಿಸಿದ ಕೊಹ್ಲಿ, 3ನೇ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ರು. ಇದೀಗ ವಿಜಯ್​ ಹಜಾರೆಯಲ್ಲಿ 1 ಸೆಂಚುರಿ, 1 ಹಾಫ್​ ಸೆಂಚುರಿ ಗಳಿಸಿದ ಕೊಹ್ಲಿ, ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಸತತ 6ನೇ ಬಾರಿಗೆ 50 ರನ್​ ಗಡಿ ದಾಟಿದ ಸಾಧನೆ ಮಾಡಿದ್ದಾರೆ. 

ಅಕ್ಟೋಬರ್​ 25ರಿಂದ ಡಿಸೆಂಬರ್​ 26. ಕಳೆದ 2 ತಿಂಗಳ ಅವಧಿಯಲ್ಲಿ 6 ಪಂದ್ಯಗಳನ್ನಾಡಿದ ಕೊಹ್ಲಿ, 3 ಸೆಂಚುರಿ, 3 ಹಾಫ್​ ಸೆಂಚುರಿ ಚಚ್ಚಿ ಬಿಸಾಕಿದ್ದಾರೆ. ರನ್​ ಹೊಳೆಯನ್ನೇ ಹರಿಸಿ ವಿಶ್ವಕಪ್​ಗೆ ನಾನ್​ ರೆಡಿ ಅನ್ನೋ ಖಡಕ್​ ಸಂದೇಶವನ್ನ ಸೆಲೆಕ್ಟರ್ಸ್​ಗೆ ಕಳಿಸಿದ್ದಾರೆ. ಕೊಹ್ಲಿ ಆಟಕ್ಕೆ ಅಭಿಮಾನಿಗಳಂತೂ ಸಂಭ್ರಮದ ಕಡಲಲ್ಲಿ ತೇಲಾಡಿದ್ದಾರೆ.

ಇದನ್ನೂ ಓದಿ: ಉದ್ಯಮಿಯಿಂದ 10 ಕೋಟಿ ರೂ. ಸುಲಿಗೆಗೆ ಯತ್ನ : ಇಬ್ಬರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Virat Kohli Gautam Gambhir Ajit Agarkar
Advertisment