U19 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ.. ಸೌತ್​ ಆಫ್ರಿಕಾ ಸರಣಿಗೆ ವೈಭವ್​ ಕ್ಯಾಪ್ಟನ್..!

ಸೌತ್​ ಆಫ್ರಿಕಾ ಅಂಡರ್​ 19 ವಿರುದ್ಧದ ಸರಣಿಗೆ ಭಾರತ ಅಂಡರ್​ 19 ತಂಡ ಪ್ರಕಟವಾಗಿದೆ. ನಾಯಕ ಆಯುಷ್​ ಮ್ಹಾತ್ರೆ ಇಂಜುರಿಗೆ ತುತ್ತಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.

author-image
Ganesh Kerekuli
Vaibhav_Suryavanshi
Advertisment

ವೈಭವ್​ ಸೂರ್ಯವಂಶಿಗೆ ನಾಯಕನ ಪಟ್ಟ 

ಸೌತ್​ ಆಫ್ರಿಕಾ ಅಂಡರ್​ 19 ವಿರುದ್ಧದ ಸರಣಿಗೆ ಭಾರತ ಅಂಡರ್​ 19 ತಂಡ ಪ್ರಕಟವಾಗಿದೆ. ನಾಯಕ ಆಯುಷ್​ ಮ್ಹಾತ್ರೆ ಇಂಜುರಿಗೆ ತುತ್ತಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ. ಆಯುಷ್​ ಮ್ಹಾತ್ರೆ ಬದಲಾಗಿ 14 ವರ್ಷದ ಯುವ ಆಟಗಾರ ವೈಭವ್​ ಸೂರ್ಯವಂಶಿಗೆ ನಾಯಕತ್ವ ನೀಡಲಾಗಿದೆ. ಜನವರಿ 3ರಿಂದ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಮುಂಬರುವ ವಿಶ್ವಕಪ್​ ದೃಷ್ಟಿಯಿಂದ ಮಹತ್ವದ್ದಾಗಿದೆ.

U19 ವಿಶ್ವಕಪ್​ಗೆ ಟೀಮ್​ ಇಂಡಿಯಾ ಪ್ರಕಟ

ಮುಂಬರುವ ಪ್ರತಿಷ್ಠಿತ ಅಂಡರ್​ 19 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಲಾಗಿದ್ದು, ಆಯುಷ್​ ಮ್ಹಾತ್ರೆ ನಾಯಕನಾಗಿದ್ದಾರೆ. ವೈಭವ್​ ಸೂರ್ಯವಂಶಿ, ಕನಿಷ್ಕ್​ ಚೌಹಾಣ್​, ವಿಹಾನ್​ ಮಲ್ಹೋತ್ರ, ಅಭಿಜ್ಞಾನ್​ ಕುಂದು ತಂಡದಲ್ಲಿರೋ ಪ್ರಮುಖ ಆಟಗಾರರಾಗಿದ್ದಾರೆ. ಜನವರಿ 15ಕ್ಕೆ ನಡೆಯೋ ಯುಎಸ್​ಎ ವಿರುದ್ಧದ ಪಂದ್ಯದೊಂದಿಗೆ ಭಾರತ ತಂಡದ ಅಭಿಯಾನ ಆರಂಭವಾಗಲಿದೆ. 

vaibhav suryavanshi

ಶ್ರೇಯಸ್​ ಅಯ್ಯರ್​ ಭರ್ಜರಿ ಬ್ಯಾಟಿಂಗ್​ ಅಭ್ಯಾಸ

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​​ಗೆ ಕಸರತ್ತು ಮುಂದುವರೆಸಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ಗೆ ಬಂದಿರೋ ಶ್ರೇಯಸ್​​, ಫಿಟ್​ನೆಸ್​ ಟೆಸ್ಟ್​ಗೆ ಒಳಗಾಗಿದ್ದಾರೆ. ಇದೇ ವೇಳೆ ನೆಟ್ಸ್​ನಲ್ಲಿ ಕೆಲ ಕಾಲ ಬ್ಯಾಟಿಂಗ್​ ನಡೆಸಿದ್ದಾರೆ. ​ಯುವ ವೇಗಿಗಳ ಬೌಲಿಂಗ್​ಗೆ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಂಭೀರ ಇಂಜುರಿಗೆ ತುತ್ತಾಗಿದ್ದ ಶ್ರೇಯಸ್​, ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡೋ ಸಾಧ್ಯತೆಯಿದೆ. 

ಇದನ್ನೂ ಓದಿ: 35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!

SHREYAS_IYER

WPLಗೆ ಮುಂಬೈ ಇಂಡಿಯನ್ಸ್​ ಸಿದ್ಧತೆ ಆರಂಭ

ಮಹಿಳಾ ಪ್ರೀಮಿಯರ್​ ಲೀಗ್​ಗೆ ಮುಂಬೈ ಇಂಡಿಯನ್ಸ್​ ತಂಡದ ಸಿದ್ಧತೆ ಆರಂಭವಾಗಿದೆ. ಸಫೋರ್ಟ್​ ಸ್ಟಾಫ್ಸ್​ ಹಾಗೂ ಆಟಗಾರ್ತಿಯರು ಒಬ್ಬೊಬ್ಬರಾಗಿ ತಂಡವನ್ನ ಕೂಡಿಕೊಳ್ತಿದ್ದಾರೆ. ಹೆಡ್​ ಕೋಚ್​ ಲೀಸಾ ನೈಟ್ಲಿ, ಮೆಂಟರ್​ ಜೂಲಾನ್​ ಗೋಸ್ವಾಮಿ ಸೇರಿದಂತೆ ಹಲವು ಆಟಗಾರ್ತಿಯರು ಮುಂಬೈನಲ್ಲಿ ತಂಡ ಕೂಡಿಕೊಂಡಿದ್ದಾರೆ. ಇಂದಿನಿಂದ ಮುಂಬೈ ತಂಡ ಅಭ್ಯಾಸದ ಕಣಕ್ಕಿಳಿಯೋ ಸಾಧ್ಯತೆಯಿದೆ. ಜನವರಿ 9ರಿಂದ ಟೂರ್ನಿ ಆರಂಭವಾಗಲಿದೆ. 

ಮುಂಬೈ ಟೀಮ್​ಗೆ RCB ಗರ್ಲ್ಸ್​ ರಾಯಲ್ ಚಾಲೆಂಜ್.. ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಸ್ಮೃತಿ ಮಂದಾನ

ಬ್ರೇಟ್​ ಲೀಗೆ ಹಾಲ್​ ಆಫ್​ ಫೇಮ್​ ಗೌರವ

ಆಸ್ಟ್ರೇಲಿಯಾ ತಂಡದ ದಿಗ್ಗಜ ವೇಗಿ ಬ್ರೇಟ್​ ಲೀ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಕ್ರಿಕೆಟ್​ ಆಸ್ಟ್ರೇಲಿಯಾ ಬ್ರೇಟ್​ ಲೀಗೆ ಹಾಲ್​ ಆಫ್​ ಫೇಮ್​ ಘೋಷಿಸಿದೆ. ಆಸಿಸ್​ ಪರ 76 ಟೆಸ್ಟ್​ ಪಂದ್ಯವನ್ನಾಡಿದ್ದ 310 ವಿಕೆಟ್​ ಕಬಳಿಸಿದ್ರೆ, ಏಕದಿನ ಕ್ರಿಕೆಟ್​ನಲ್ಲಿ 221 ಪಂದ್ಯವನ್ನಾಡಿ 221 ವಿಕೆಟ್ ಕಬಳಿಸಿದ್ರು. 1999, 2009 ಹಾಗೂ 2007ರ ಏಕದಿನ ವಿಶ್ವಕಪ್​ ಗೆಲುವಿನಲ್ಲಿ ಬ್ರೇಟ್​ ಲೀ ಪ್ರಮುಖ ಪಾತ್ರವಹಿಸಿದ್ರು. 

ಕಿರನ್​ ಪೋಲಾರ್ಡ್​ ಸ್ಫೋಟಕ ಬ್ಯಾಟಿಂಗ್​ 

ವೆಸ್ಟ್​ ಇಂಡೀಸ್​ ತಂಡದ ಬ್ಯಾಟ್ಸ್​ಮನ್​ ಕಿರನ್​ ಪೊಲಾರ್ಡ್​​ ಇಂಟರ್​​ನ್ಯಾಷನಲ್​ ಲೀಗ್​ ಟಿ20 ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ್ದಾರೆ. ದುಬೈ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 30 ರನ್​ಗಳಿಸಿ ಮಿಂಚಿದ್ದಾರೆ. 15ನೇ ಓವರ್​ನಲ್ಲಿ ಅಬ್ಬರಿಸಿದ ಪೊಲಾರ್ಡ್​ 4 ಸಿಕ್ಸರ್​, ಒಂದು ಬೌಂಡರಿ ಹಾಗೂ 2 ರನ್​ಗಳಿಸಿದ್ರು. ಜೊತೆಗೆ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ 300 ಸಿಕ್ಸರ್​ ಸಿಡಿಸಿದ ಸಾಧನೆಯನ್ನೂ ಮಾಡಿದ್ರು. 

ಇದನ್ನೂ ಓದಿ:ಪಂತ್​ಗೆ ಒಬ್ಬರಲ್ಲ, ಇಬ್ಬರು ವಿಲನ್! ಮುಂದಿನ ದಾರಿ ಯಾವುದಯ್ಯ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Vaibhav Suryavanshi T20 world cup
Advertisment