/newsfirstlive-kannada/media/media_files/2025/08/11/gowri1-2025-08-11-17-36-50.jpg)
ಪುಟ್ಟಗೌರಿ, ಮಂಗಳ ಗೌರಿ, ಶ್ರೀಗೌರಿ ಹೀಗೇ ಸಾಲು ಸಾಲು ಗೌರಿಗಳು ವೀಕ್ಷಕರ ಫೆವೆರೆಟ್ ಲಿಸ್ಟ್ನಲ್ಲಿ ಜಾಗ ಪಡೆದುಕೊಂಡಿವೆ. ಸದ್ಯ ಇದೇ ಹೆಸರಿನ ಮತ್ತೊಂದು ಹೊಸ ಧಾರಾವಾಹಿ ತೆರೆಗೆ ಬರೋದಕ್ಕೆ ಸಜ್ಜಾಗ್ತಿದೆ. ವಿಶೇಷ ಏನೆಂದರೆ ಮಂಗಳಗೌರಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಕಾವ್ಯಶ್ರೀ ವರ್ಷಗಳ ನಂತರ ಬಣ್ಣ ಹಚ್ತಿದ್ದಾರೆ. ಆಗ ಮಂಗಳ ಗೌರಿ, ಈ ಬಾರಿ ಕೂಡ ಗೌರಿ ರೂಪದಲ್ಲಿ ವೀಕ್ಷಕರ ಮನೆ ಪ್ರವೇಶ ಮಾಡ್ತಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
ಹೌದು, ಜೀ ಕನ್ನಡದ ಅವಳಿ ವಾಹಿನಿ ಜೀ ಪವರ್ನಲ್ಲಿ ಹೊಸ ಹೊಸ ಧಾರಾವಾಹಿಗಳು ಲಾಂಚ್ ಆಗೋಕೆ ತಾಯಾರಿ ಮಾಡಿಕೊಳ್ತಿವೆ. ಅದರಲ್ಲಿ ಗೌರಿ ಕೂಡ ಒಂದು. ಇನ್ನೂ ಗೌರಿ ಸ್ಟೋರಿಗೆ ಬರೋದಾದ್ರೇ ಇದೊಂದು ಅಕ್ಕ-ತಂಗಿ ಕಥೆ. ಗೌತಮಿಗೆ ದುಡ್ಡು ಆಸ್ತಿನೇ ಮುಖ್ಯ. ಗೌರಿಗೆ ಸಂಬಂಧ, ಪ್ರೀತಿನೇ ಸರ್ವಸ್ವ. ಅಕ್ಕತಂಗಿಯರ ಬದುಕಿನ ಹಾವು ಏಣಿ ಆಟದ ಕಥೆ ಗೌರಿ.
ಸ್ಟೋರಿ ಕಾಮನ್ ಅನಿಸಿದ್ರು, ಪ್ರೆಸೆಂಟ್ ಮಾಡ್ತಿರೋ ರೀತಿ ರಿಚ್ ಆಗಿದೆ. ಬಿಗ್ ಬಾಸ್ ಖ್ಯಾತಿಯ ಸಿರಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಇಷ್ಟು ದಿನ ಸೌಮ್ಯ ಸ್ವಭಾವದ ಪಾತ್ರಗಳನ್ನ ಮಾಡಿದ್ದ ಸಿರಿ ಅವರು ಇದೇ ಮೊದಲ ಬಾರಿಗೆ ಘಟವಾನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನೂ, ಗೌತಮಿ ಪಾತ್ರಕ್ಕೆ ಸುಶ್ಮಿತಾ ರಾಮಕಲಾ ಬಣ್ಣ ಹಚ್ಚಿದ್ದಾರೆ. ಇವ್ರು ಈ ಹಿಂದೆ 'ಪಾರು' ಧಾರಾವಾಹಿಯ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ನಂತರ ತೆಲುಗು, ತಮಿಳು ಭಾಷೆಗೆ ಎಂಟ್ರಿಕೊಟ್ಟ ನಟಿ, ಸದ್ಯ ಗೌತಮಿ ಪಾತ್ರದ ಮೂಲಕ ಮತ್ತೇ ಕನ್ನಡಕ್ಕೆ ಮರಳುತ್ತಿದ್ದಾರೆ. ಗೌರಿ ಪಾತ್ರದ ಕಾವ್ಯಶ್ರೀ ಧಾರಾವಾಹಿ ಬಗ್ಗೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಸರಿ ಕೂಡ ಎಂದಿನಂತೆ ಹೊಚ್ಚ ಹೊಸ ವಾಹಿನಿಯಲ್ಲಿ ಹೊಸ ಧಾರಾವಾಹಿಯಲ್ಲಿ ಮತ್ತೆ ಹೊಸ ರೂಪದಲ್ಲಿ ಗೌರಿಯ ಹೆಸರಿನಲ್ಲಿ ನಿಮ್ಮ ಟಿವಿಯಲ್ಲಿ ಬರುತಿದ್ದೇನೆ. ಪ್ರೀತಿ ತೋರಿಸಿ! ಹರಸಿ ಹಾರೈಸಿ ಪ್ರೋತ್ಸಾಹಿಸಿ ಎಂದಿದ್ದಾರೆ ನಟಿ. ಒಟ್ಟಿನಲ್ಲಿ ದೊಡ್ಡ ತಾರಾಬಳಗ ಇರೋ ಗೌರಿ ಶೀಘ್ರದಲ್ಲಿಯೇ ಜೀ ಪವರ್ ವಾಹಿನಿಯಲ್ಲಿ ವೀಕ್ಷಕರ ಮುಂದೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ