/newsfirstlive-kannada/media/media_files/2025/12/07/gilli-nata-8-2025-12-07-13-23-23.jpg)
ಬಿಗ್​ ಬಾಸ್​ನಲ್ಲಿ ಎಲ್ಲಾ ಸ್ಪರ್ಧಿಗಳ ಆಟಕ್ಕೂ, ಗಿಲ್ಲಿ ಆಟಕ್ಕೂ ತುಂಬಾನೇ ವ್ಯತ್ಯಾಸ ಇದೆ. ಅದೇ ಕಾರಣಕ್ಕೆ ಗಿಲ್ಲಿ ಮೇಲೆ ಪುಕಾರು ಹೇಳದ ಎದುರಾಳಿಗಳು ಇಲ್ಲ. ಹಾಗೆಯೇ ಗಿಲ್ಲಿ ಮಾತಿಗೆ ನಗದ ಸ್ಪರ್ಧಿಗಳೂ ಇಲ್ಲ. ಇದರಿಂದ ಗಿಲ್ಲಿಗೆ ಒಳ್ಳೆಯದು, ಕೆಟ್ಟದ್ದು ಎರಡೂ ಆಗ್ತಿದೆ.
ಇದರ ಮಧ್ಯೆ ಗಿಲ್ಲಿ ಜೊತೆ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ ಅನ್ನೋದು ಗಿಲ್ಲಿ ಕಂಡರೆ ಆಗದ ಕೆಲವು ಸ್ಪರ್ಧಿಗಳ ಒಣ ಹುಳಿ. ಗಿಲ್ಲಿ ಜೊತೆ ಯಾರು ಹೆಚ್ಚು ಹೊತ್ತು ಕಳೆಯುತ್ತಾರೋ ಅವರ ವಿರುದ್ಧ ಮಾತುಗಳು ತೂರಿ ಬರುತ್ತವೆ. ಬಹುಶಃ ಗಿಲ್ಲಿ ಜೊತೆ ಇದ್ದವರೂ ಹೈಲೆಟ್ ಆಗ್ತಾರೆ ಅನ್ನೋದು ಅವರ ಲೆಕ್ಕಚಾರ ಆಗಿರಬಹುದು.
ಇದನ್ನೂ ಓದಿ:ಕ್ಯಾಪ್ಟನ್ ರೂಮ್​ಗೆ ಬೀಗ ಜಡಿದ ಕಿಚ್ಚ ಸುದೀಪ್.. ಇಲ್ಲಿ ಎಲ್ಲಾ ಗಿಲ್ಲಿಯಿಂದಲೇ..
ಇದೇ ವಿಚಾರವನ್ನು ಕಿಚ್ಚ ಸುದೀಪ್ ಸೂಕ್ಷ್ಮವಾಗಿ ಪ್ರಸ್ತಾಪಿಸಿ ಹೇಳಬೇಕಾಗಿರೋದನ್ನು ಹೇಳಿದ್ದಾರೆ. ನಿನ್ನೆಯ ಕಿಚ್ಚನ ಪಂಚಾಯ್ತಿಯಲ್ಲಿ ರಜತ್ ಮಾತನ್ನಾಡುತ್ತ.. ನಾನು ಗಿಲ್ಲಿ ಜೊತೆ ಮಾತನ್ನಾಡಲು ಶುರುಮಾಡಿದ ತಕ್ಷಣ, ಮನೆಯವರೆಲ್ಲರೂ ನಾನು ಗಿಲ್ಲಿ ಜೊತೆ ಇದ್ದೀನಿ ಎಂದು ಹೇಳ್ತಾರೆ. ಹಾಗಲ್ಲ ಸರ್, ನಾನು ಎಲ್ಲರ ಜೊತೆಗೂ ಇದ್ದೀನಿ. ನಾನು ಬೇರೆಯವರ ಜೊತೆ ಇರೋದನ್ನು ಯಾರೂ ನೋಟಿಸ್ ಮಾಡಲ್ಲ. ಗಿಲ್ಲಿ ಜೊತೆ ಇದ್ದರೆ ಮಾತ್ರ ಹೀಗೆ ಹೇಳ್ತಾರೆ ಎನ್ನುತ್ತಾರೆ..
ಆಗ ಮಧ್ಯ ಪ್ರವೇಶ ಮಾಡುವ ಸುದೀಪ್, ಈಗ ಏನು ಅರ್ಥ ಆಗ್ತಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಅದರ ಅರ್ಥ ಏನು ಅಂದರೆ ಗಿಲ್ಲಿ ಜೊತೆ ಯಾರೇ ಇದ್ದರೂ ಇಡೀ ಮನೆಗೆ ಪ್ರಾಬ್ಲಂ ಇದೆ. ಗಿಲ್ಲಿ ನೀವು ಇದನ್ನು ಒಪ್ಪುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸದೀಪ್ ಅವರ ಈ ಸ್ಟೇಟ್​ಮೆಂಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಗಿಲ್ಲಿಯ ಅಭಿಮಾನಿಗಳು ಇದನ್ನು ಹೇಗೆ ಅರ್ಥೈಸಿದ್ದಾರೆ ಅಂದರೆ ಗಿಲ್ಲಿ ಅನ್ನೋದು ಬರೀ ಹೆಸರಲ್ಲ, ಅದು ಬ್ರ್ಯಾಂಡ್ ಎಂದು ಟ್ರೋಲ್ ಮಾಡ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
#BBK12
— Cinema Premi✍🏻 (@karansharmain) December 7, 2025
MAIN HIGHLIGHT OF SATURDAY'S EPISODE:
Every week, Kichcha hyped Gilli in one or other way. But this was epic.💥😉🥳#BBKSeason12 | #GilliNata | #BBK12livepic.twitter.com/9V3GR2LenL
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us