/newsfirstlive-kannada/media/media_files/2026/02/28/krishna-rukku-1-2026-02-28-13-46-49.jpg)
ಜೀ ಕನ್ನಡದಲ್ಲಿ ಕೃಷ್ಣ-ರುಕ್ಕು ಎಂಬ ಹೊಸ ಕಥೆ ಶುರುವಾಗ್ತಿದೆ. ಒಂದ್ಕಡೆ ಅಣ್ಣ ಹಾಗೂ ಪ್ರಿಯಕರನ ಸಾವಿಗೆ ಕಾರಣವಾದ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟ ತಂಗಿ. ಮತ್ತೊಂದ್ಕಡೆ ಅಕ್ಕನ ಸೇಡಿನ ವಿರುದ್ಧ ನಿಂತು ಗಂಡನ ಮನೆ, ತವರು ಮನೆ ಜವಬ್ದಾರಿ ವಹಿಸೋ ತಂಗಿ. ಕಥೆ ಚೆನ್ನಾಗಿದೆ ಅಲ್ವಾ, ಮುಂದೆ ಅಣ್ಣ ಹಾಗೂ ಪ್ರಿಯಕರನ ಸಾವಿಗೆ ಮೊದಲ ತಂಗಿ ಹೇಗೆ ಸೇಡು ತೀರಿಸಿಕೊಳ್ತಾಳೆ? ರುಕ್ಕು ಎಲ್ಲವನ್ನ ಎದುರಿಸಿ…ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ?
'ಕೃಷ್ಣ ರುಕ್ಕು’ ಮೊದಲ ಪ್ರೋಮೋದಲ್ಲಿ ನಾಯಕ-ನಾಯಕಿ ಫ್ಯಾಮಿಲಿನ ಪರಿಚಯ ಮಾಡಿಕೊಡಲಾಗಿತ್ತು. ನಾಯಕಿ ರಕ್ಕು ಮನೆಯಲ್ಲಿ ಅಮ್ಮ, ಅಣ್ಣ, ಅಕ್ಕ-ತಂಗಿ ಇರುವ ತುಂಬು ಕುಟುಂಬ. ಆಟೋ ಚಾಲಕನಾಗಿ ಕೆಲಸ ಮಾಡೋ ಅಣ್ಣ ಮಂಜು ಮನೆಯ ಜವಾಬ್ದಾರಿ ಹೊತ್ತಿರ್ತಾನೆ. ನಾಯಕನ ಕುಟುಂಬದಲ್ಲಿ ಇಬ್ಬರು ಅಣ್ಣಂದಿರು. ಅತ್ತಿಗೆ, ಅಪ್ಪ ಇರುವ ಶ್ರೀಮಂತ ಕುಟುಂಬ. ಆದ್ರೆ ನಾಯಕ ಕೃಷ್ಣ ಅಮ್ಮನನ್ನು ಕಳೆದುಕೊಂಡು, ಕುಡಿತಕ್ಕೆ ದಾಸನಾಗಿರ್ತಾನೆ. ಇದಿಷ್ಟು ಮೊದಲ ಪ್ರೋಮೊ ಆದ್ರೆ ಇದೀಗ ಎರಡನೇ ಪ್ರೋಮೋ ಕೂಡ ರಿಲೀಸ್​ ಆಗಿದೆ..
ಇದನ್ನೂ ಓದಿ: ಪ್ರಧಾನಿ ಮೋದಿಗೆ ರಶ್ಮಿಕಾ-ವಿಜಯ್ ಮದುವೆ ಆಮಂತ್ರಣ.. ಮಾರ್ಚ್ 4ರ ರಿಸೆಪ್ಷನ್‌ಗೆ ಬರ್ತಾರಾ ನಮೋ?
/filters:format(webp)/newsfirstlive-kannada/media/media_files/2026/02/28/krishna-rukku-2026-02-28-13-42-00.jpg)
ಮೊದಲ ಪ್ರೋಮೊಕ್ಕಿಂತ ಸಖತ್​ ಡಿಫರೆಂಟ್​ ಆಗಿದ್ದು, ಸಖತ್​ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಆಟೋ ಚಾಲಕನಾಗಿ ಕೆಲಸ ಮಾಡೋ ಮಂಜು ಮನೆಯ ಜವಾಬ್ದಾರಿ ಹೊತ್ತಿರ್ತಾನೆ. ಮಂಜುಗೆ ಮೂರು ಜನ ಮುದ್ದಾದ ತಂಗಿಯರು. ಅದರಲ್ಲಿ ಮಂಜು ಮೊದಲ ತಂಗಿಯ ಮದುವೆ ಫಿಕ್ಸ್ ಆಗಿರುತ್ತೆ. ಹೀಗಾಗಿ ಭಾವ-ಬಾಮೈದ ಖುಷಿಯಿಂದ ಕಾರ್ಡ್ ಹಂಚಲು ಆಟೋದಲ್ಲಿ ಹೋಗ್ತಾರೆ.
ಈ ನಡುವೆ ಸೂರ್ಯಪ್ರಕಾಶ್ ಕೃಷ್ಣನನ್ನ ಕರೆದುಕೊಂಡು ಬಾ ಅಂತಾ ಮತ್ತೊರ್ವ ಮಗನಿಗೆ ಕಾರ್ ಕೀ ಕೊಡ್ತಾನೆ.. ಬಾರ್ ಬಳಿ ಕಾರ್ ಬರ್ತಿದ್ದಾಗೆ, ಕೃಷ್ಣ ನಾನೇ ಕಾರ್ ಓಡಿಸ್ತೀನಿ ಅಂತ ಕೀ ತಗೊಂಡು ಹೊರಡೋಕೆ ಮುಂದಾಗ್ತಾನೆ. ಆದ್ರೆ ಕುಡಿದ ಮತ್ತಿನಲ್ಲಿ ಕೃಷ್ಣ ಆಟೋಗೆ ಡಿಕ್ಕಿ ಹೊಡೆಯುತ್ತಾನೆ.. ಇದ್ರಿಂದಾಗಿ ಭಾವ-ಬಾಮೈದ ಇಬ್ಬರೂ ಮಸಣ ಸೇರ್ತಾರೆ..
ರುಕ್ಕು , ಮನೆಯ ಜವಾಬ್ದಾರಿ ವಹಿಸಿಕೊಳ್ತಾಳೆ. ಆದ್ರೆ ರುಕ್ಕು ಅಕ್ಕ, ಪ್ರೀತಿ ಕೊಂದ ಸೂರ್ಯಪ್ರಕಾಶ್ ಮನೆಯನ್ನ ಹಾಳು ಮಾಡೇ ಮಾಡ್ತೀನಿ ಅಂತಾ ಶಪಥ ಮಾಡ್ತಾಳೆ. ಅದ್ರಂತೆ ಕೃಷ್ಣನ ಅಣ್ಣನನ್ನ ಮದುವೆಯಾಗಿ ಸೂರ್ಯಪ್ರಕಾಶ್ ಮನೆಗೆ ಬರ್ತಾಳೆ. ಅಚ್ಚರಿ ಎಂಬಂತೆ ಅದೇ ಮನೆಗೆ ರುಕ್ಕು ಸಹ ಕೃಷ್ಣನನ್ನು ಮದುವೆಯಾಗಿ ಬರ್ತಾಳೆ..
ಒಂದು ಕಡೆ ಕುಡಿತದ ಚಟಕ್ಕೆ ಒಳಗಾಗಿರೋ ಗಂಡ. ಇನ್ನೊಂದು ಕಡೆ ದೊಡ್ಮನೆ ಸೊಸೆಯಾಗಿ, ಅಕ್ಕನ ಸೇಡಿನ ವಿರುದ್ಧ ನಿಂತು ಗಂಡನ ಮನೆ , ತವರು ಮನೆ ರಕ್ಷಿಸೋ ಜವಬ್ದಾರಿ. ಇದಲ್ಲವನ್ನ ಎದುರಿಸಿ ರುಕ್ಕು ಕೃಷ್ಣನ ಬದುಕಿಗೆ ಬೆಳಕಾಗ್ತಾಳಾ ಅನ್ನೊದನ್ನ ಕಾದುನೋಡಬೇಕಾಗಿದೆ.. ಅಂದ್ಹಾಗೆ, ಇದೇ ಮಾರ್ಚ್ 9 ರಿಂದ 'ಕೃಷ್ಣ ರುಕ್ಕು’ ಪ್ರಸಾರವಾಗಲಿದೆ.
ಇದನ್ನೂ ಓದಿ: ಹೋಳಿ ಹಬ್ಬದಂದೇ ‘ಚಂದ್ರಗ್ರಹಣ’ ನೆರಳು; ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us