/newsfirstlive-kannada/media/media_files/2025/10/08/adv-2025-10-08-14-55-12.jpg)
ಬೆಂಗಳೂರು: ಕೊಳಚೆ ನೀರನ್ನು ಸಂಸ್ಕರಿಸದೆ ಚರಂಡಿಗೆ ಬಿಟ್ಟ ಹಿನ್ನಲೆ ನಿನ್ನೆ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವೆಲ್ಸ್ ಸ್ಟೂಡಿಯೋಸ್ ಪರ ವಕೀಲ ವಿಶ್ವಾಸ್ ಗೌಡ ಹೈಕೋರ್ಟ್​ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದಾರೆ.
ಅಕ್ಟೋಬರ್ 6ರಂದು ನೋಟಿಸ್​ ನೀಡಿ 7 ರಂದು ಬೀಗ ಹಾಕಿದ್ರು. ಹೀಗಾಗಿ ನಾವು ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ವಿ, ಆದ್ರೀಗ ರಾಮನಗರ ಜಿಲ್ಲಾಧಿಕಾರಿ ಹತ್ತು ದಿನಗಳ ಕಾಲ ಕಾಲಾವಕಾಶ ನೀಡಿದ ಹಿನ್ನಲೆ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಏನಿದು ಪ್ರಕರಣ..?
ಬಿಗ್‌ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್‌ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್​​ ಜೋನ್​​​ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್‌ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ನಿನ್ನೆ ರಾಮನಗರ ತಾಲೂಕು ಆಡಳಿತ ಜಾಲಿವುಡ್‌ನ ಸೀಲ್ ಮಾಡಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ಇಂದು ಬೆಳಗ್ಗೆ ಜಾಲಿವುಡ್ ಸ್ಟುಡಿಯೋ ಸಿಬ್ಬಂದಿ ರಾಮನಗರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿತ್ತು. ಈ ವೇಳೆ, ನಾವು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನ ಪಾಲನೆ ಮಾಡ್ತೇವೆ. ವೆಲ್ಸ್ ಸ್ಟುಡಿಯೋದಲ್ಲಿ ನೂರಾರು ಜನ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಏಕಾಏಕಿ ಬೀಗ ಹಾಕಿರುವ ಕಾರಣ ನೂರಾರು ಜನರ ಭವಿಷ್ಯ ಅತಂತ್ರವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಿಗ್ ಬಾಸ್ ಶೋ ನಡೆಸಲಾಗುತ್ತಿದೆ. ಹಠಾತ್ ಸ್ಥಗಿತಗೊಳಿಸಿದ ಕಾರಣ ನಷ್ಟವಾಗಿದೆ. ನೀವು 15 ದಿನಗಳ ಕಾಲಾವಕಾಶ ಕೊಡಬೇಕು. 15 ದಿನದೊಳಗೆ ಎಲ್ಲಾ ಅನುಮತಿಗಳನ್ನ ಪಡೆದುಕೊಳ್ಳುತ್ತೇವೆ ಎಂದು ಮನವಿ ಮಾಡಿಕೊಂಡಿತ್ತು.
ಮನವಿಯನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಾಲಿವುಡ್ ಸ್ಟುಡಿಯೋ 10 ದಿನ ಕಾಲಾವಕಾಶ ಕೇಳಿದೆ. ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದೆ. ಮನವಿ ಪುರಸ್ಕರಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆ ಮನವಿಯನ್ನು ವರ್ಗಾವಣೆ ಮಾಡಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದು ಯಶವಂರ್ ವಿ ಗುರುಕರ್ ಹೇಳಿದ್ದರು. ಇದೀಗ ಮಾಲೀನ್ಯ ನಿಯಂತ್ರಣ ಮಂಡಳಿ ಜಾಲಿವುಡ್​ಗೆ ಬಿಗ್ ರಿಲೀಫ್ ನೀಡಿದೆ. ಬಿಗ್​ಬಾಸ್ ಶೋ ಎಂದಿನಂತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.