/newsfirstlive-kannada/media/media_files/2026/02/19/laksminivasa-kannada-serial-3-2026-02-19-14-31-56.jpg)
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಾರು ಊಹಿಸಿರದ ತಿರುವು ಸಿಕ್ಕಿದೆ.​ ಅಪಘಾತದಲ್ಲಿ ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದ ಶ್ರೀಕಾಂತ್ ಮರಳಿ ಬಂದಿದ್ದಾನೆ. ಹಾಗಾದ್ರೆ ಶ್ರೀಕಾಂತ್ ಇಷ್ಟುದಿನ ಎಲ್ಲಿದ್ದ? ಅಪಘಾತದಲ್ಲಿ ಹಾಗಿದಾದ್ರೂ ಏನು? ಇಷ್ಟು ದಿನ ಶ್ರೀಕಾಂತ್​ಗೆ ಮಗಳು ನೆನಪಾಗಲಿಲ್ವಾ? ಮುಂದೆ ಸಿದ್ದೇಗೌಡ್ರು ಜೈಲಿನಿಂದ ಹೊರ ಬರ್ತಾರ?
/filters:format(webp)/newsfirstlive-kannada/media/media_files/2026/02/19/laksminivasa-kannada-serial-1-2026-02-19-14-33-48.jpg)
ಈ ಹಿಂದೆ ಭಾವನಾ ಹಾಗೂ ಶ್ರೀಕಾಂತ್ ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಶ್ರೀಕಾಂತ್ ತಂಗಿಯ ಗಂಡ ರವಿಶಂಕರ್, ಶ್ರೀಕಾಂತ್ ಬರ್ತಿದ್ದ ಕಾರಿಗೆ ಆಕ್ಸಿಡೆಂಟ್ ಮಾಡಿಸಿದ್ದ. ಆಕ್ಸಿಡೆಂಟ್​ನಲ್ಲಿ ಶ್ರೀಕಾಂತ್ ಸತ್ತಿದ್ದಾನೆ ಅಂತಾ ಎಲ್ಲರೂ ಭಾವಿಸಿದ್ರು.. ಇದ್ರಿಂದ ಭಾವನ ಮದುವೆ ಕೂಡ ನಿಂತಿತ್ತು. ಬಳಿಕ ಭಾವನಾ, ಸಿದ್ದೇಗೌಡ್ರ ಮದುವೆ ನಡೆಯಿತು.
ಇದನ್ನೂ ಓದಿ:ಕ್ರಿಕೆಟ್ ಅಂಪೈರಿಂಗ್ ಮಾಡುತ್ತಿದ್ದಾಗ ಜೇನುನೊಣಗಳ ದಾಳಿ: ಅಂಪೈರ್ ದಾರುಣ ಸಾವು!!
/filters:format(webp)/newsfirstlive-kannada/media/media_files/2026/02/19/laksminivasa-kannada-serial-2-2026-02-19-14-33-04.jpg)
ಇದೀಗ ರವಿಶಂಕರ್ ಕುತಂತ್ರದಿಂದ ಶ್ರೀಕಾಂತ್ ಕಾರ್‌ನ್ನು ಅಪಘಾತ ಮಾಡಿದ ಆರೋಪವನ್ನ ಹೊತ್ತು ಸಿದ್ದೇಗೌಡ್ರು ಜೈಲು ಸೇರಿದ್ದಾರೆ. ಈ ವಿಚಾರವಾಗಿ ಕೋರ್ಟ್​ನಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ.. ಒಂದು ಕಡೆ ಸಿದ್ದೇಗೌಡ್ರನ್ನ ಬಿಡಿಸಲು ಭಾವನ ನೂರಾರು ಪ್ರಯತ್ನ ಮಾಡ್ತಿದ್ದಾಳೆ.. ಮತ್ತೊಂದು ಕಡೆ ಮಗಳು ಖುಷಿಗೆ ತಂದೆ ಶ್ರೀಕಾಂತ್​ ನೆನಪಾಗ್ತಿದೆ.
ಸಿದ್ದೇಗೌಡ್ರನ್ನು ಜೈಲಿಗೆ ಕಳಿಸಿದ ಬಳಿಕ, ನಾನು ಶ್ರೀಕಾಂತ್ ಆಸ್ತಿಯನ್ನು ಅನುಭವಿಸಿಕೊಂಡು ಇರೋಣ ಅಂತಾ ರವಿಶಂಕರ್ ಪ್ಲಾನ್​ ಮಾಡಿದ್ದ. ಆದ್ರೆ ಯಾರು ಊಹಿಸದ ತಿರುವೊಂದು ಬಂದಿದೆ. ಹೌದು ಎಲ್ಲರೂ ಅಪಘಾತದಲ್ಲಿ ಸತ್ತು ಹೋಗಿದ್ದಾನೆ ಅಂದುಕೊಂಡಿದ್ದ ಶ್ರೀಕಾಂತ್, ರವಿಶಂಕರ್​ ಕಳ್ಳಾಟವನ್ನ ಬಯಲು ಮಾಡಲು ಮರಳಿ ಬಂದಿದ್ದಾನೆ.
ಇದನ್ನೂ ಓದಿ: ಖ್ಯಾತ ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿಗೆ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ: ಫೆಬ್ರವರಿ 21 ರಂದು ಪ್ರದಾನ
/filters:format(webp)/newsfirstlive-kannada/media/media_files/2026/02/19/laksminivasa-kannada-serial-2026-02-19-14-33-29.jpg)
ಶ್ರೀಕಾಂತ್ ಬಂದೊಡನೇ ರವಿಶಂಕರ್​ನನ್ನೇ ಭೇಟಿಯಾಗಿದ್ದಾನೆ. ಶ್ರೀಕಾಂತ್​ನ್ನ ಕಂಡು ರವಿಶಂಕರ್​ ಶಾಕ್​ಗೆ ಒಳಗಾಗಿದ್ದಾನೆ. ಆದ್ರೂ ಭಾವ ನಿಮ್ಮನ್ನ ನೋಡಿ ಎಷ್ಟು ಖುಷಿಯಾಗ್ತಿದೆ ಗೊತ್ತಾ ಅಂತಾ ಶ್ರೀಕಾಂತ್​ನನ್ನ ನಂಬಿಸಿ ತನ್ನೋಡನೇ ಬರುವಂತೆ ಹೇಳಿ ಬಳಿಕ ಕಿಡ್ನ್ಯಾಪ್ ಮಾಡಿ ಸಾಯಿಸಲು ಪ್ಲಾನ್​ ಮಾಡ್ತಾನೆ. ಆದ್ರೆ ರವಿಶಂಕರ್​ ಪ್ಲಾನ್​, ಪ್ಲಾಪ್​​ ಆಗುತ್ತೆ.. ಕಾರಣ ಜಯಂತ್​ ಎಂಟ್ರಿ.. ಶ್ರೀಕಾಂತ್​ನನ್ನ ಕಿಡ್ನಾಪ್​ ಮಾಡಿದ್ದ ಜಾಗಕ್ಕೆ ಬಂದ ಜಯಂತ್, ಶ್ರೀಕಾಂತ್​ನನ್ನ ರಕ್ಷಿಸ್ತಾನೆ. ಇಬ್ಬರೂ ಸೇರಿಕೊಂಡು ಆ ಗೂಂಡಾಗಳನ್ನು ಹೊಡೆದು ಹಾಕ್ತಾರೆ.
ಒಟ್ನಲ್ಲಿ ಶ್ರೀಕಾಂತ್​ ಎಂಟ್ರಿಯಿಂದ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಹಾಗಂತಾ ಟ್ವಿಸ್ಟ್ ಇಷ್ಟಕ್ಕೆ ಮುಗಿದಿಲ್ಲ. ಮುಂದೆಯೂ ದೊಡ್ಡ ತಿರುವುಗಳು ಇವೆ.
ಇದನ್ನೂ ಓದಿ:ಕ್ರಿಕೆಟ್ ಅಂಪೈರಿಂಗ್ ಮಾಡುತ್ತಿದ್ದಾಗ ಜೇನುನೊಣಗಳ ದಾಳಿ: ಅಂಪೈರ್ ದಾರುಣ ಸಾವು!!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us