/newsfirstlive-kannada/media/media_files/2025/08/06/bb7-malayalam-2025-08-06-07-41-08.jpg)
ಕನ್ನಡ ಬಿಗ್ಬಾಸ್ ಸೀಸನ್ 12 ಶುರುವಾಗೋದಕ್ಕೆ ಕೆಲವು ದಿನಗಳು ಬಾಕಿ ಇವೆ. ಈ ಬಗ್ಗೆ ಬಿಗ್ಬಾಸ್ ಟೀಮ್ ಅಧಿಕೃತ ಮಾಹಿತಿ ನೀಡಬೇಕಿದೆ. ಸದ್ಯದಲ್ಲೇ ಬಿಗ್ಬಾಸ್ ಪ್ರೋಮೋಗಳು ರಿಲೀಸ್ ಆಗಲಿವೆ. ಹೀಗಾಗಿ ಬಿಗ್ಬಾಸ್ ಶೋ ಕಣ್ತುಂಬಿಕೊಳ್ಳೋದಕ್ಕೆ ವೀಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: Raksha Bandhan: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ಈ ಮಧ್ಯೆ ಮಲಯಾಳಂನಲ್ಲಿ ಬಿಗ್ಬಾಸ್ ಸೀಸನ್ 7 ಶುರುವಾಗಿದೆ. ಈ ಮಲಯಾಳಂ ಬಿಗ್ಬಾಸ್ಗೆ ಸಲಿಂಗ ಜೋಡಿ ಎಂಟ್ರಿ ಕೊಟ್ಟಿದೆ. ಈ ಸ್ಟಾರ್ ಸಲಿಂಗ ಜೋಡಿಯನ್ನು ಸೂಪರ್ ಸ್ಟಾರ್ ಮೋಹನ್ ಲಾಲ್ ವೇದಿಕೆಗೆ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದಾರೆ.
ಮಲಯಾಳಂನಲ್ಲಿ ಬಿಗ್ಬಾಸ್ ಸೀಸನ್ 7 ನಿರೂಪಣೆಯನ್ನು ಸೂಪರ್ ಸ್ಟಾರ್ ಮೋಹನ್ ಲಾಲ್ ವಹಿಸಿಕೊಂಡಿದ್ದಾರೆ. ಈ ಬಾರಿಯ ಸೀಸನ್ 7ಕ್ಕೆ ಆಧಿಲಾ ನಜ್ರನ್ ಮತ್ತು ಫಾತಿಮಾ ನೋರಾ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
ಯಾರು ಈ ಆಧಿಲಾ ನಜ್ರನ್ ಮತ್ತು ಫಾತಿಮಾ ನೋರಾ..?
ಸಲಿಂಗ ಜೋಡಿಯಾದ ಆಥಿಲಾ ನಜ್ರನ್ ಮತ್ತು ಫಾತಿಮಾ ನೋರಾ ಕೇರಳದವರು. ಪೋಷಕರ ಒತ್ತಾಯದಿಂದ ಬೇರ್ಪಟ್ಟ ನಂತರ ಹೈಕೋರ್ಟ್ ಮೆಟ್ಟಿಲೇರಿ, ಕಳೆದ ಮೇ ತಿಂಗಳಲ್ಲಿ ಕೋರ್ಟ್ ತೀರ್ಪಿನಿಂದ ಮತ್ತೆ ಒಂದಾಗಿದ್ದರು. ಇದಾದ ಬಳಿಕ ಇತ್ತೀಚೆಗಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಆಧಿಲಾ ನಜ್ರನ್ ಮತ್ತು ಫಾತಿಮಾ ನೋರಾ ಪ್ರೀತಿಗೆ ಎರಡು ಕುಟುಂಬಗಳ ವಿರೋಧವಿತ್ತು. ಸೌದಿ ಅರೇಬಿಯಾದಲ್ಲಿ 10ನೇ ತರಗತಿ ಓದುತ್ತಿದ್ದಾಗ ಆಧಿಲಾ, ನೋರಾಳನ್ನು ಭೇಟಿ ಮಾಡುತ್ತಾಳೆ. ಎಲ್ಲರಂತೆಯೇ ಇಬ್ಬರ ಸ್ನೇಹ ಆರಂಭವಾಗುತ್ತದೆ. ಆದರೆ, ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿ ಮತ್ತೊಂದು ಹಂತಕ್ಕೆ ಹೋಗುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇಬ್ಬರ ಪಾಲಕರು ಕೂಡ ಫ್ರೆಂಡ್ಸ್ ಆಗಿರುವುದರಿಂದ ಆಧಿಲಾ ಮತ್ತು ನೋರಾಳನ್ನು ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್‌ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಶಿಕ್ಷಣ ಮುಗಿದ ಬಳಿಕವೂ ಉಳಿದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧಾರ ಮಾಡುವ ಅಧಿಲಾ ಮತ್ತು ನೋರಾ, ಡಿಗ್ರಿ ಪೂರ್ಣಗೊಳಿಸಿದ ಬಳಿಕ ಇಬ್ಬರ ವಿಚಾರವನ್ನು ಕುಟುಂಬದ ಮುಂದೆ ಪ್ರಸ್ತಾಪಿಸುತ್ತಾರೆ.
ಆದ್ರೆ ಅವರು ತಿಳಿಸುವ ಮುನ್ನವೇ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ತಿಳಿಯುತ್ತದೆ. ಬಳಿಕ ಒಂದೇ ಕಾಲೇಜಿಗೆ ಇಬ್ಬರನ್ನು ಸೇರಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆ. ಇಬ್ಬರನ್ನು ಬೇರೆ ಬೇರೆ ಕಾಲೇಜಿಗೆ ಕಳುಹಿಸುತ್ತಾರೆ. ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ಈ ಮೂಲಕವಾದರೂ ಈ ಇಬ್ಬರು ದೂರವಾಗುತ್ತಾರೆ ಅಂತ ಪೋಷಕರು ಭಾವಿಸುತ್ತಾರೆ. ಆದರೆ, ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂಪರ್ಕ ಬೆಳೆಸುತ್ತಾರೆ. ಅಲ್ಲದೆ, ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು ಮತ್ತು ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ. ಪೋಷಕರ ವಿರೋಧದ ನಡುವೆಯೂ ನ್ಯಾಯಾಲಯ ಮೆಟ್ಟಿಲೇರುತ್ತಾರೆ. ಆಗ ನಡೆದ ಎಲ್ಲ ಘಟನೆಯನ್ನು ಆಧಿಲಾ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಳು. ಅಂತಿಮವಾಗಿ ಕೋರ್ಟ್ ಮೇ.31ರಂದು ಇಬ್ಬರು ಒಟ್ಟಿಗೆ ಬಾಳಬಹುದಾಗಿದೆ ಎಂದು ಆದೇಶ ನೀಡುತ್ತದೆ. ಈ ಮೂಲಕ ಅಧಿಲಾ ಮತ್ತು ನೋರಾ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ