/newsfirstlive-kannada/media/media_files/2025/11/02/mallamma-2025-11-02-22-43-59.jpg)
ಬಿಗ್​ಬಾಸ್​ ಮನೆಯಿಂದ ಮಲ್ಲಮ್ಮ ಅವರು ಹೊರ ಬಂದಿದ್ದಾರೆ. ಸಂಡೆ ವಿತ್ ಬಾದ್​ಶಾ ಸುದೀಪ್ ಎಪಿಸೋಡ್​ನಲ್ಲಿ ಕಿಚ್ಚ, ಮಲ್ಲಮ್ಮ ಔಟ್ ಆಗಿರೋದನ್ನು ಘೋಷಣೆ ಮಾಡಿದರು.
ಸುದೀಪ್ ಅವರು ಮನೆಯಲ್ಲಿ ಉಳಿದುಕೊಳ್ಳಲು ಸೇವ್ ಆಗಿರುವ ಒಬ್ಬೊಬ್ಬರ ಹೆಸರನ್ನು ಅನೌನ್ಸ್ ಮಾಡುತ್ತ ಬಂದರು. ಕೊನೆಯಲ್ಲಿ ಸಿಂಗರ್ ಮಾಳು ಹಾಗೂ ಮಲ್ಲಮ್ಮ ಉಳಿದುಕೊಂಡಿದ್ದರು. ನಂತರ ನಿಮ್ಮಲ್ಲಿ ಯಾರು ಮನೆಗೆ ಹೋಗ್ತಾರೆ ಅನ್ನೋದಕ್ಕೆ ವಿಟಿ ಪ್ಲೇ ಮಾಡ್ತೀವಿ. ಯಾರ ವಿಟಿ ಪ್ಲೇ ಆಗುತ್ತೆ ಅವರು ಮನೆಯಿಂದ ಹೊರ ಬರುತ್ತಾರೆ. ನಿಮ್ಮಿಬ್ಬರಲ್ಲಿ ಯಾರೇ ಔಟ್ ಆದರೂ, ಚೆನ್ನಾಗಿ ಆಡಿಕೊಂಡಿಲ್ಲ ಅನ್ಕೊಳ್ಳೋಕೆ ಹೋಗಬೇಡಿ. ಇಬ್ಬರೂ ಚೆನ್ನಾಗಿ ಆಡಿದ್ದೀರಿ ಎಂದು ಸುದೀಪ್ ಹೇಳಿದರು. ಮಲ್ಲಮ್ಮ ಮನೆಯಿಂದ ಹೊರ ಬರುವ ವೇಳೆ ಇತರೆ ಸ್ಪರ್ಧಿಗಳು ತಂಬಾ ಭಾವುಕರಾದರು.
ಮಲ್ಲಮ್ಮ ಉತ್ತರ ಕರ್ನಾಟಕದ ಅಪ್ಪಟ ಹಳ್ಳಿಯ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದು, ತಮ್ಮ ಮಾತಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದರು. ಅದೇ ಕಾರಣಕ್ಕೆ ಅವರಿಗೆ ಬಿಗ್​ಬಾಸ್​ ವೇದಿಕೆ ಅವಕಾಶ ನೀಡಿತ್ತು. ನಾಲ್ಕು ವಾರಗಳ ಕಾಲ ವೀಕ್ಷಕರ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಮಲ್ಲಮ್ಮ, ಇಂದು ಬಿಗ್​ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಮಲ್ಲಮ್ಮ ಅವರ ಸ್ಪೆಷಲ್ ಏನಪ್ಪ ಅಂದ್ರೆ ಮಾತೂ ಮಾತು. ಬರೀ ಮಾತು. ಅಂದ್ಹಾಗೆ ಬರೀ ಮಾತೊಂದೇ ಅಲ್ಲ. ಇಂದಿನ ಯುವಕರನ್ನೂ ಮೀರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್. ತಮ್ಮದೇ ಸ್ವಂತ ಇನ್​ಸ್ಟಾಗ್ರಾಮ್, ಯೂಟ್ಯೂಬ್ ಚಾನಲ್ ಹೊಂದಿದ್ದಾರೆ.
ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ.. ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ತಪ್ಪಾಯ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us