/newsfirstlive-kannada/media/media_files/2025/10/07/ashwini-and-rakshita-2025-10-07-11-18-09.jpg)
ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ.
ಕುಶಲ ಕಲಾ ವೃಂದದಿಂದ ಕಂಪ್ಲೆಂಟ್ ಕೊಡಲು ನಿರ್ಧಾರ ಮಾಡಿದೆ. ಅಶ್ವಿನಿ ಗೌಡ ವಾರದ ಕಥೆಯಲ್ಲಿ ಸುದೀಪ್ ಎದುರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು. ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ಜಗಳ ಆಡುತ್ತಿದ್ದರು. ಜೋರಾಗಿ ಕಿತ್ತಾಡುವಾಗ ಕಾವ್ಯ ಪರ ಬ್ಯಾಟ್ ಬೀಸಲು ರಕ್ಷಿತಾ ಶೆಟ್ಟಿ ಬಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ನಲ್ಲಿ ರೋಚಕ ಟ್ವಿಸ್ಟ್ : ಸೂರಜ್ ಸೇಡಿಗೆ ಅಭಿಷೇಕ್ ಟಾರ್ಗೆಟ್!
ಆಗ ರಕ್ಷಿತಾ ಶೆಟ್ಟಿ ನಿಮ್ಮ ಧಾರಾವಾಹಿಯನ್ನು ಹೊರಗೆ ಮಾಡಿ. ಬಿಗ್​ಬಾಸ್ ಮನೆಯಲ್ಲಿ ಅಲ್ಲ ಎಂದು ಕೂಗಿದ್ದಾರೆ. ಅದಕ್ಕೆ ಅಶ್ವಿನಿ ಗೌಡ, ಬೆಟ್ಟು ಮಾಡುತ್ತ ಕಲಾವಿದರಿಗೆ ಅವಮಾನ ಮಾಡಬೇಡ ಎಂದು ರಕ್ಷಿತಾ ಕಡೆ ತಿರುಗಿದ್ದಾರೆ. ನಿಂಗೆ ಅದ್ರಲ್ಲೇ ಹೊಡೀತಾರೆ ಹುಷಾರ್ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಗೌಡ, ಮಾಡ್ತೀನಿ, ಮಾಡ್ತೀನಿ ಎಂದು ಜೋರಾಗಿ ಕೂಗಿದ್ದಾರೆ.
/filters:format(webp)/newsfirstlive-kannada/media/media_files/2025/10/29/ashwini-and-jahnvi-1-2025-10-29-16-25-05.jpg)
ಈ ವಿಚಾರದ ಬಗ್ಗೆ ಕಾವ್ಯ ಶೈವ ಸುದೀಪ್ ಎದುರು ಸ್ಪಷ್ಟನೆ ನೀಡಿದ್ದಾರೆ. ನಾನು ಜಗಳ ಆಡಬೇಕಾದರೆ ರಕ್ಷಿತಾ ಬಂದಿದ್ದು ನಿಜ. ಇದು ಸೀರಿಯಲ್ ಅಲ್ಲ, ನಾಟಕವಾಡಬೇಡಿ ಎಂಬ ಉದ್ದೇಶದಲ್ಲಿ ರಕ್ಷಿತಾ ಹೇಳಿದ್ದಾರೆ. ಆದರೆ ಅಶ್ವಿನಿ ಅವರು ಆ ಸ್ಟೇಟ್​ಮೆಂಟ್ ಅನ್ನು ತಿರುಚಿರೋದನ್ನು ಕಣ್ಣಾರೆ ನೋಡಿದೆ. ಕಲಾವಿದರ ಬಗ್ಗೆ ಕಮ್ಮಿ ಮಾತಾಡ್ತಾ ಇದ್ದೀಯಾ.. ಕಲಾವಿದರನ್ನ ಕೆಳಗೆ ಇಟ್ಟು ಮಾತಾಡ್ತೀಯಾ ಎಂದು ಹೇಳಿದರು. ಆದರೆ ರಕ್ಷಿತಾ ಮಾತಾಡಿದ್ದ ಉದ್ದೇಶವೇ ಬೇರೆ ಆಗಿತ್ತು ಎಂದು ಕಾವ್ಯ ಹೇಳಿದ್ದಾರೆ. ಇದೀಗ ಅಶ್ವಿನಿ ಗೌಡ ಮಾಡಿದ ಆರೋಪಕ್ಕೆ ಸಂಬಂಧಿಸಿ ಕುಶಲ ಕಲಾ ವೃಂದ ರಕ್ಷಿತಾ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ನೇಹಾ-ಚಂದನ್ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ್ದು ಹೇಗೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us