/newsfirstlive-kannada/media/media_files/2025/08/11/manasa-2025-08-11-14-15-25.jpg)
ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರೋ ಯುವನಟ ಎಂದರೆ ಅದು ರಾಘವೇಂದ್ರ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ರಾಗಿಣಿ ಎಂಬ ಹೆಸರನ್ನು ಪಡೆದುಕೊಂಡಿದ್ದರು ರಾಘವೇಂದ್ರ. ಇವರ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಏಕೆಂದರೆ ರಾಘು ಅವರು ಫೇಮಸ್​ ಆಗಿದ್ದೇ ರಾಗಿಣಿ ಎಂಬ ಹೆಸರಿನ ಮೂಲಕ.
ಇದನ್ನೂ ಓದಿ:‘ಗಜ’ನಿಗೆ ಕೋಪ ತರಿಸಿದ ಟೂರಿಸ್ಟ್​.. ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದವನ ಮೇಲೆ ಕಾಡಾನೆ ಅಟ್ಯಾಕ್
/newsfirstlive-kannada/media/post_attachments/wp-content/uploads/2025/07/gicchi-gili-gili-raghavendra1.jpg)
ಈ ವಿಚಾರ ಹೇಳೋದಕ್ಕೆ ಒಂದು ಕಾರಣವಿದೆ. ಹೌದು, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಈ ಇಬ್ಬರು ಫೇಮಸ್​ ಆದ್ರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ಸದಾ ಜೋಡಿಯಾಗಿ ರೀಲ್ಸ್​ ಮಾಡಿ ಅಲ್ಲು ಫೇಮಸ್ ಆಗಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಇಬ್ಬರು ಮಧ್ಯೆ ಅಕ್ಕ-ತಮ್ಮನ ಬಾಂಧವ್ಯ ಇದೆ.
/newsfirstlive-kannada/media/post_attachments/wp-content/uploads/2025/06/manasa5.jpg)
ಸೋಷಿಯಲ್​ ಮೀಡಿಯಾದಲ್ಲಿ ರಾಘವೇಂದ್ರ ಹಾಗೂ ಮನಸಾ ಮದುವೆ ಆಗುತ್ತಾರೆ. ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸುತ್ತೇವೆ ಎಂಬ ವಂದತಿ ಹಬ್ಬಿತ್ತು. ಈ ಬಗ್ಗೆ ಖುದ್ದು ನಟಿ ಮಾನಸಾ ಅವರೇ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಮಾನಸಾ, ನನ್ನ ಹಾಗೂ ರಾಘು ಬಗ್ಗೆ ಗಾಳಿ ಸುದ್ದಿ ಹಬ್ಬಿದೆ. ನಾವಿಬ್ಬರು ಮದುವೆ ಆಗ್ತಾ ಇದ್ದೀವಿ, ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸುತ್ತೇವೆ ಅಂತ ಹೇಳಿದ್ದಾರೆ. ಅದನ್ನು ಹೇಳಿದವರೇ ಬಾಡೂಟ ಹಾಕಿಸಬೇಕು. ಇದು ಸತ್ಯವಲ್ಲ. ನಾನು ಅವನು ಅಕ್ಕ ತಮ್ಮ. ಸುಮಾರು ವರ್ಷಗಳಿಂದ ನಾವು ಜೊತೆಗೆ ಕೆಲಸ ಮಾಡುತ್ತ ಬಂದಿದ್ದೇವೆ. ನಾವು ಒಬ್ಬರಿಗೊಬ್ಬರು ಸಪೋರ್ಟ್​ ಮಾಡಿಕೊಂಡು ಇದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us