Advertisment

ಮೋಕ್ಷಿತಾ ಪೈ ಬರ್ತ್​ಡೇ ಫೋಟೋಸ್​.. ಸರಳ, ಸುಂದರವಾಗಿ ಕಾಣಿಸಿದ ಬಿಗ್​ಬಾಸ್ ಬ್ಯೂಟಿ!

ಮೋಕ್ಷಿತಾ ಪೈ ಅವರು ಶೇರ್ ಮಾಡಿರುವಂತಹ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳ ಮನ ಗೆಲ್ಲುತ್ತಿವೆ. ಸೀಸನ್​ 11ರಲ್ಲಿ ಮೋಕ್ಷಿತಾ ಪೈ ತುಂಬಾ ಸರಳವಾಗಿ ವೀಕ್ಷಕರಿಗೆ ಕಾಣಿಸುತ್ತಿದ್ದರು.

author-image
Bhimappa
MOKSHITHA_PAI
Advertisment

ಪಾರು ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ಹಾಗೂ ಬಿಗ್ ಬಾಸ್ ಸೀಸನ್​- 11ರ ಟಾಪ್ 5ನೇ ಫೈನಲಿಸ್ಟ್ ಮೋಕ್ಷಿತಾ ಪೈ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಸದ್ಯ ಇದೀಗ ತಮ್ಮ ಬರ್ತ್​ಡೇ ಫೋಟೋಗಳನ್ನು ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Advertisment

Mokshita Pai(9)

ಬಣ್ಣ ಬಣ್ಣದ ಫ್ರಾಕ್​​​​​ನಲ್ಲಿ ಮೋಕ್ಷಿತಾ ಫೋಟೋಶೂಟ್  ಮಾಡಿಸಿದ್ದಾರೆ.  ಹೆಚ್ಚು ಆಭರಣವನ್ನು ಧರಿಸದೆ ತಮ್ಮ  ಮುಗುಳು ನಗೆಯಿಂದಲ್ಲೇ  ಜನರ ಮನ ಸೆಳೆದಿದ್ದಾರೆ. ತಾನು ಉಪಯೋಗಿಸಿದ ಎಲ್ಲಾ ವಸ್ತು ಮಾಹಿತಿಯನ್ನು ಟ್ಯಾಗ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

Mokshita Pai(7)

ಸದ್ಯ ಮೋಕ್ಷಿತಾ ಪೈ ಅವರು ಶೇರ್ ಮಾಡಿರುವಂತಹ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳ ಮನ ಗೆಲ್ಲುತ್ತಿವೆ. ಸೀಸನ್​ 11ರಲ್ಲಿ ಮೋಕ್ಷಿತಾ ಪೈ ತುಂಬಾ ಸರಳವಾಗಿ ವೀಕ್ಷಕರಿಗೆ ಕಾಣಿಸುತ್ತಿದ್ದರು. ಯಾವುದೇ ಬ್ರಾಂಡೆಡ್ ಬಟ್ಟೆ ಹಾಕದೇ, ಹೆಚ್ಚು ಮೇಕಪ್ ಮಾಡದೇ ಇರುತ್ತಿದ್ದರಿಂದ ಎಲ್ಲರಿಗೂ ಬೇಗನೇ ಇಷ್ಟವಾಗಿದ್ದರು. 

Mokshita Pai(5)

ಅಕ್ಟೋಬರ್ 22 ರಂದು ತನ್ನ ಬರ್ತ್​​ಡೇಯನ್ನು ಯಾವುದೇ ಆಡಂಬರ ಇಲ್ಲದೆ ಸರಳವಾಗಿ ಆಚರಿಸಿಕೊಂಡಿದ್ದಾರೆ. ಕಳೆದ ವರ್ಷವಾದರೆ ತನ್ನ ಹುಟ್ಟು ಹಬ್ಬವನ್ನು ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಆಚರಿಸಿಕೊಂಡಿದ್ದರು.

Advertisment

ಇದನ್ನೂ ಓದಿ:BBK12; ನೀನು ದೊಡ್ಡ ಡ್ರಮ್​.. ಕಾವ್ಯಗಾಗಿ ಗಿಲ್ಲಿ ನಟ- ರಿಷಾ ಮಧ್ಯೆ ಮಾತಿನ ಮಲ್ಲಯುದ್ಧ..!

Mokshita Pai

ಈ  ವರ್ಷ ಅವರ ಹುಟ್ಟು ಹಬ್ಬವನ್ನು ತಮ್ಮ ಕುಟುಂಬದ ಜೊತೆ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಮೋಕ್ಷತಾ ಪೈ ಅವರ ಇನ್​ಸ್ಟಾ ಫೋಟೋಗಳಿಗೆ ಸಾಕಷ್ಟು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು ಶುಭಾಶಯಗಳನ್ನು ಕೋರಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada Serial mokshitha pai
Advertisment
Advertisment
Advertisment