ಸೀರಿಯಲ್ ಅಭಿಮಾನಿಗಳಿಗೆ 2 ಗುಡ್​ನ್ಯೂಸ್​.. ಮೌನ ಗುಡ್ಡಮನೆಗೆ ಒಲಿದ ಲಕ್..!

ಈ ಸ್ಟೋರಿಯಲ್ಲಿ ಎರಡು ಗೂಡ್ ನ್ಯೂಸ್ ಇದೆ. ಒಂದು ಹೊಸ ಸೀರಿಯಲ್ ಲಾಂಚ್ ಆಗ್ತಿದೆ. ಇನ್ನೊಂದು ನೀವು ಮೆಚ್ಚಿರೋ ಹೀರೋಯಿನ್ ಆ ಸೀರಿಯಲ್‌ನ ನಾಯಕಿಯಾಗಿದ್ದಾರೆ. ಇದಿಷ್ಟೇ ಅಲ್ಲ, ಮತ್ತಷ್ಟು ರೋಚಕ ವಿಚಾರಗಳು ಇವೆ.

author-image
Ganesh Kerekuli
mouna guddemane (2)
Advertisment

ಈ ಸ್ಟೋರಿಯಲ್ಲಿ ಎರಡು ಗೂಡ್ ನ್ಯೂಸ್ ಇದೆ. ಒಂದು ಹೊಸ ಸೀರಿಯಲ್ ಲಾಂಚ್ ಆಗ್ತಿದೆ. ಇನ್ನೊಂದು ನೀವು ಮೆಚ್ಚಿರೋ ಹೀರೋಯಿನ್ ಆ ಸೀರಿಯಲ್‌ನ ನಾಯಕಿಯಾಗಿದ್ದಾರೆ. ಇದಿಷ್ಟೇ ಅಲ್ಲ, ಮತ್ತಷ್ಟು ರೋಚಕ ವಿಚಾರಗಳು ಇವೆ. 

ಕೃಷ್ಣ ರುಕ್ಕು ಪ್ರೋಮೋ ಲಾಂಚ್ ಆದಾಗ, ಇದೊಂದು ಹೊಸ ಸೀರಿಯಲ್‌ ಅಂತಾ ಬಹುತೇಕರು ಅಂದ್ಕೊಂಡಿರ್ತಾರೆ. ಹೌದು ಅದರಲ್ಲಿ ಏನೂ ತಪ್ಪಿಲ್ಲ ಬಿಡಿ. ಇದು ಹೊಸ ಧಾರವಾಹಿಯೇ ಆದ್ರೆ ಇದರಲ್ಲಿ ಸ್ಪೆಷಾಲಿಟಿ ಒಂದಿದೆ. ಅದೇನೂ ಗೊತ್ತಾ?

ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಗೆ ಜೆಡಿಎಸ್ ಬಾಗಿಲು ಬಂದ್‌! ಜಿಟಿಡಿ ಹೆಸರು ಅನ್ನು ಎತ್ತಬೇಡಿ ಎಂದ ಕುಮಾರಸ್ವಾಮಿ

Mouna Guddemane (1)

ಈ ಸೀರಿಯಲ್‌ನ ನಾಯಕಿಯಾಗಿ ಮೌನ ಗುಡ್ಡೆ ಮನೆ ಆಯ್ಕೆಯಾಗಿದ್ದಾರೆ. ಇದರಲ್ಲಿ ನಿಜಕ್ಕೂ ಆಶ್ಚರ್ಯ ಪಡುವಂತಹ ವಿಚಾರಗಳಿವೆ. ಅದೇನಂದ್ರೆ, ಯೂಶಲೀ, ಒಂದು ಹಿಟ್ ಸೀರಿಯಲ್ ಕೊಟ್ಟ ನಂತರ ತಕ್ಷಣವೇ ಲೀಡ್ ಕ್ಯಾರೆಕ್ಟರ್ ಸಿಗೋದಿಲ್ಲ. ಇದಕ್ಕೆ ಇಂಡಸ್ಟ್ರಿಯವರೇ ಹಾಕಿಕೊಂಡಿರೋ ಒಂದಷ್ಟು ಅಘೋಷಿತ ರೂಲ್ಸ್‌ಗಳಿವೆ. ಈ ಹಿಂದೆ ನಡದಿರೋದು ಕೂಡ ಇದೆಯೇ.

ರಾಮಾಚಾರಿ ಅನ್ನೋ ಸೂಪರ್ ಡೂಪರ್ ಹಿಟ್ ಧಾರವಾಹಿಯಲ್ಲಿ ಚಾರು ಪಾತ್ರ ಮಾಡಿದ್ದ ಮೌನಗುಡ್ಡೆ ಮನೆ ಜನರ ಮನಸ್ಸು ಗೆದ್ದಿದ್ದರು. ಒಂದು ಕ್ಯಾರೆಕ್ಟರ್‌ ಜನರಿಗೆ ತುಂಬಾ ವರ್ಷ ಇಷ್ಟವಾಗಿ, ಮನಸ್ಸಿನಲ್ಲಿ ಕುಳಿತ್ತಿದ್ರೆ, ಆ ಪಾತ್ರ ನಿರ್ವಹಿಸಿದ ನಟ ನಟಿಯರಿಗೆ ತಕ್ಷಣವೇ ಹೊಸ ಧಾರವಾಹಿ ಆಫರ್ ಸಿಗೋದಿಲ್ಲ. ಕಾರಣವಿಷ್ಟೇ... ಆ ಪಾತ್ರ ಜನರ ಮನಸ್ಸಿನಿಂದ ದೂರವಾಗಬೇಕು. ಅದಾಕ್ಕಾಗಿ ವರ್ಷಗುಗಟ್ಟಲೇ ಟೈಮ್‌ ಬೇಕು. ಒಂದು ವೇಳೆ ತಕ್ಷಣವೇ ಮಾಡಿದ್ರೆ, ಜನರಿಗೆ ಇದು ಯಾವ ಪಾತ್ರ ಅನ್ನೋ ಕನ್‌ಫ್ಯೂಶನ್ ಕ್ರಿಯೇಟ್ ಆಗುತ್ತೆ ಅನ್ನೋದು ಇಂಡಸ್ಟ್ರಿಯವರೇ ಮಾಡಿಕೊಂಡು ಬಂದಿದ್ದ ರೂಲ್ಸ್.

ಈ ಹಿಂದೆ ಹಿಟ್ ಸೀರಿಯಲ್ ಕೊಟ್ಟಿದ್ದ, ಹೀರೋ ಹೀರೋಯಿನ್‌ಗಳು ಸಾಕಷ್ಟು ಟೈಮ್‌ ಬೆಂಚ್‌ ಕಾದಿರುವ ಉದಾಹರಣೆಗಳು ಇವೆ.  ಆದ್ರೆ ಈ ವಿಚಾರದಲ್ಲಿ ಮೌನ ಗುಡ್ಡೆ ಮನೆ ವೆರಿ ಲಕ್ಕಿ.  ಈ ಪಾತ್ರದಲ್ಲೂ ಚಾರು ಮಿಂಚಲಿ ಅನ್ನೋದು ನಮ್ಮ ಆಶಯ.

ಇದನ್ನೂ ಓದಿ: T20 world cup: ಭಾರತದ ಮುಂದಿನ ಪಂದ್ಯ ಯಾವಾಗ? ಕಂಪ್ಲೀಟ್ ಡಿಟೇಲ್ಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Mouna Guddemane Kannada Serial
Advertisment