/newsfirstlive-kannada/media/media_files/2025/09/29/namratha_mokshitha-2025-09-29-19-23-27.jpg)
ದಸರಾ ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಮೈಸೂರು ಅಂತೂ ಲೈಟಿಂಗ್ಸ್​​ನಿಂದ ಜಗಮಗಿಸುತ್ತಿದ್ದು ಜನರಿಂದ ತುಂಬಿ ಹೋಗಿದೆ. ಅರಮನೆ, ರಾಜಬೀದಿ, ಝೂ, ಪ್ರತಿ ರಸ್ತೆಗಳು, ಬೀದಿಗಳು ಅಲಂಕಾರದಿಂದ ಕಂಗೊಳಿಸುತ್ತಿವೆ. ಈ ಸಂಭ್ರಮ ಕಿರುತೆರೆ ನಟಿಯರಲ್ಲೂ ಮೂಡಿದೆ. ನವರಾತ್ರಿ ಸಂಭ್ರಮ ಕನ್ನಡ ಕಿರುತೆರೆ ಸ್ಟಾರ್ಸ್​ ಕಳೆ ಹೆಚ್ಚಿಸಿದೆ. ವಿಭಿನ್ನ ರೀತಿಯ ಫೋಟೋಶೂಟ್​ಗಳ ಮೂಲಕ ಎಲ್ಲ ನಟಿಯರು ಗಮನ ಸೇಳಿತಿದ್ದಾರೆ.
ಸ್ಟೈಲ್​, ಟ್ರೆಂಡ್​ಗೆ ತಕ್ಕ ಹಾಗೇ ಫೋಟೋ ಶೂಟ್​ ಮಾಡಿಸೋದರಲ್ಲಿ ನಮ್ರತಾ ಗೌಡ ನಂಬರ್​ ಒನ್​. ಸಂಪ್ರದಾಯಕ ಲಂಗ ದಾವಣಿ ತೊಟ್ಟು, ತಾವರೆ ಮುಡಿದು ಕಂಗೋಳಿಸಿದ್ದಾರೆ.
ಮುದ್ದು ಚಲುವೆ ಮೋಕ್ಷಿತಾ ಫೋಟೋಸ್​ ನೋಡಿದರೆ ನೀವೂ ಪಕ್ಕಾ ಫಿದಾ ಆಗ್ತೀರ. ಇವರು ಕೂಡ ಲಂಗ ದಾವಣಿ ತೊಟ್ಟಿದ್ದು, ಇಳಕಲ್​ ಸೀರೆ ಮಾದರಿಯಲ್ಲಿದೆ ಔಟ್​ಫಿಟ್​. ಅರಣ್ಯದ ಅರಗಿಣಿ ಅಂತೆ ಮಿಂಚಿದ್ದಾರೆ ನಟಿ.
ಆಸೆ ಧಾರಾವಾಹಿಯಲ್ಲಿ ರೋಹಿಣಿ ಪಾತ್ರ ಮೂಲಕ ಮನೆ ಮಾತಾಗಿರೋ ನಟಿ ಅಮೃತಾ ರಾಮಮೂರ್ತಿ. ದೇವಿ ಕಾನ್ಸೆಪ್ಟ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಕೆದರಿದ ಕೇಶ ರಾಶಿ, ಕೈಯಲ್ಲಿ ತ್ರಿಶೂಲ ಹಿಡಿದು ನವರಸಗಳನ್ನ ಅಭಿವ್ಯಕ್ತಿಸಿದ್ದಾರೆ.
ಚಂದನಾ ಅನಂತಕೃಷ್ಣ.. ಯಾವ್ದೇ ಫೋಟೋಶೂಟ್ ಮಾಡಿಸಿದರು, ಅಲ್ಲಿ ನೃತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತೆ. ಅದರಲ್ಲೂ ದೇವಿಯ ಆರಾಧನೆ ಅಂದರೆ ಕೇಳ್ಬೇಕಾ? ನವಶಕ್ತಿಯ ವೈಭವನೇ ನೃತ್ಯದಲ್ಲಿ ತೋರಿಸ್ಬಿಡ್ತಾರೆ. ಇಲ್ಲಿ 2 ರೀತಿಯ ಫೋಟೋಶೂಟ್​ ಮಾಡಿಸಿದ್ದಾರೆ. ಸೀರೆ ಧರಿಸಿ, ಬಳೆ, ಅರಿಶನ ಕುಂಕುಮದ ಜೊತೆಗೆ ಹೆಣ್ತನವನ್ನ ಸಾರಿದರೇ, ಮೊತ್ತೊಂದರಲ್ಲಿ ನೃತ್ಯದ ಮೂಲಕ ಜಗನ್ಮಾತೆಯನ್ನ ಆರಾಧಿಸಿದ್ದಾರೆ.
ಆಸೆ ಧಾರಾವಾಹಿಯಲ್ಲಿ ಶ್ರುತಿ ಪಾತ್ರ ಮಾಡ್ತಿರೋ ಇಂಚರಾ ಜೋಶಿ ಲುಕ್​ ಚಂದಕ್ಕಿಂತ ಚಂದ. ಕಮಲದ ಮೊಗದ ಈ ಚಲುವೆ ಕೈಯಲ್ಲಿ ಅರಳಿದೆ ತಾವರೆ. ಶ್ವೇತ ವರ್ಣದ ಸೀರೆಯಲ್ಲಿ ಸಾಕ್ಷಾತ್​ ಮಹಾಲಕ್ಷ್ಮೀಯಂತೆ ಭಾಸವಾಗ್ತಾರೆ.
ಇನ್ನೂ ಅಣ್ಣಯ್ಯ ಧಾರಾವಾಹಿಯ ಅತ್ತೆ-ಸೊಸೆ ವಿಭಿನ್ನದಲ್ಲಿ ಭಿನ್ನ. ಹೌದು, ರಶ್ಮಿ ಹಾಗೂ ನೀಲ. ರಶ್ಮಿ ಪಾತ್ರ ಮಾಡ್ತಿರೋದು ಪ್ರತೀಕ್ಷಾ. ನೀಲಾ ಪಾತ್ರ ಮಾಡ್ತಿರೋದು ಶ್ರುತಿ. ಇಬ್ಬರೂ ಡಿಫ್ರೆಂಟ್​ ಆ್ಯಂಗಲ್​ನಲ್ಲಿ ನವರಾತ್ರಿ ಸಂಭ್ರಮಿಸಿದ್ದಾರೆ. ಮೊದಲಿಗೆ ಪ್ರತಿಕ್ಷಾ ಪೋಟೋಶ್​ ನೋಡೋಣ.. ಬಬ್ಲಿಯಾಗಿ ಮುದ್ದಾಗಿ ಕಾಣೋ ರಶ್ಮಿ ಅಲಿಯಾಸ್​ ಪ್ರತೀಕ್ಷಾ ವೆಸ್ಟರ್ನ್​ ಗೌನ್​ ತೊಟ್ಟು, ಜ್ವಾಲೆಯ ಮುಂದೆ ಝಗಮಗಿಸಿದ್ದಾರೆ.
ನೀಲಾ ಪಾತ್ರಧಾರಿ ಶ್ರುತಿ ಅವರು ಪಾತ್ರಕ್ಕೆ ತದ್ವಿರುದ್ಧ. ಹಳ್ಳಿ ಮಹಿಳೆಯ ಪಾತ್ರವನ್ನ ಲೀಲಾಜಾಲವಾಗಿ ಅಭಿನಯಿಸೋ ಮಾಡ್ರನ್​ ನಟಿ. ನೃತ್ಯದ ಮೂಲಕ ದೇವಿ ಶಕ್ತಿಯನ್ನ ಆರಾಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ