/newsfirstlive-kannada/media/media_files/2025/08/10/mokshitha-pai-2025-08-10-18-03-22.jpg)
ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ನಾಲ್ಕು ಹೀರೋಗಳನ್ನು ಇಟ್ಟುಕೊಂಡು ಸ್ಟೋರಿ ಮಾಡಿದೆ ತಂಡ.
ಶ್ರೀಗಂಧ ಗುಡಿ ಟೈಟಲ್​ನೊಂದಿಗೆ ಹೊಸ ಧಾರಾವಾಹಿ ಲಾಂಚ್​ ಆಗ್ತಿದೆ.
ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್​ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?
ಬಿಗ್​ ಬಾಸ್​ ಖ್ಯಾತಿಯ ಶಿಶಿರ್, ಪಾರು ಖ್ಯಾತಿಯ ಗಗನ್​, ನಮ್ಮನೆ ಯುವರಾಣಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ಖ್ಯಾತಿಯ ಜಯಂತ್​ ಹಾಗೂ ಲಕ್ಷ್ಮೀ ನಿವಾಸ ಖ್ಯಾತಿಯ ಭವಿಷ್ಯ್​ ಅಭಿನಯಿಸ್ತಿರೋ ನಾಲ್ವರು ಅಣ್ಣ ತಮ್ಮನ ಕಥೆ.
/filters:format(webp)/newsfirstlive-kannada/media/media_files/2025/08/10/shreegandhadagudi1-2025-08-10-18-05-22.jpg)
ತಂದೆ ಕುಡುಕ ತಾಯಿ ಇಲ್ಲದ ಮನೆಯಲ್ಲಿ ಪ್ರತಿ ದಿನ ರಣರಂಗ. ಈ ಮನೆಗೆ ಒಂದು ಹೆಣ್ಣು ಬಂದ್ರೇ ಎಲ್ಲಾ ಸರಿ ಹೋಗುತ್ತೆ ಅನ್ನೋ ನಂಬಿಕೆ. ಆದ್ರೇ ಆ ಹೆಣ್ಣು ಯಾರು? ಇಂತಹ ಮನೆಗೆ ಸೊಸೆಯಾಗಿ ಬರ್ತಾಳಾ? ಇದು ಸ್ಟೋರಿ ಲೈನ್​.
/filters:format(webp)/newsfirstlive-kannada/media/media_files/2025/08/10/shreegandhadagudi-2025-08-10-18-05-22.jpg)
ತಮಿಳು ಭಾಷೆಯ ಅಯ್ಯನರ್​ ತುನೈ ಧಾರಾವಾಹಿಯ ರಿಮೇಕ್​ ಶ್ರೀಗಂಧದ ಗುಡಿ. ಹೌದು, ಈಗಾಗಲೇ ತಮಿಳು ಭಾಷೆಯಲ್ಲಿ ಈ ಸ್ಟೋರಿ ಜನಪ್ರಿಯತೆ ಪಡೆದಿದೆ. ಅದೇ ಕಥೆಯನ್ನ ಕನ್ನಡಕ್ಕೆ ತರಲಾಗಿದೆ.
/filters:format(webp)/newsfirstlive-kannada/media/post_attachments/wp-content/uploads/2025/02/mokshitha1-1.jpg)
ಸದ್ಯ ಪ್ರೋಮೋ ರಿಲೀಸ್​ ಆಗಿದ್ದು, ನಾಲ್ವರು ನಾಯಕರ ಇಂಟ್ರೊಡಕ್ಷನ್​ ಆಗಿದೆ. ನಾಯಕಿ ಯಾರು ಎಂಬ ಪ್ರಶ್ನೆಗೆ ಹಲವು ಹೆಸರುಗಳು ಕೇಳಿ ಬರ್ತಿವೆ. ಅದರಲ್ಲಿ ಮುಖ್ಯವಾಗಿ ಮೋಕ್ಷಿತಾ ಪೈ ಹೆಸರು ಓಡಾಡ್ತಿದೆ. ಬಿಗ್​ಬಾಸ್​ ಸೀಸನ್ 11ರ ಬಳಿಕ ಮೋಕ್ಷಿತಾ "ಮಿಡಲ್ ಕ್ಲಾಸ್ ರಾಮಾಯಣ" ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಗಂಧದಗುಡಿ ಸೀರಿಯಲ್​ನಲ್ಲೂ ಅಭಿನಯಿಸುತ್ತಾರಾ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಹೆಣ್ಣು ದಿಕ್ಕಿಲ್ಲದಿರೋ ಮನೇನ ಗಂಧದಗುಡಿಯಾಗಿಸೋಕೆ ಆಧಾರವಾಗೋ ಆ ನಾಯಕಿ ಯಾರು ಎಂಬುವುದು ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us