Advertisment

ಪುಟ್ಟಕ್ಕನ ಮಕ್ಕಳು ಬೆನ್ನಲ್ಲೇ ಹೊಸ ಧಾರಾವಾಹಿಗೆ ನಾಯಕಿಯಾಗಿ ಸಂಜನಾ ಬುರ್ಲಿ ಎಂಟ್ರಿ.. ಯಾವುದು?

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಸ್ನೇಹಾ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ನಟಿ ಸಂಜನಾ ಬುರ್ಲಿ. ಪುಟ್ಟಕ್ಕನ ಮಕ್ಕಳು ತಂಡದಿಂದ ಆಚೆ ಬಂದಿದ್ದ ನಟಿ ಸಂಜನಾ ಬುರ್ಲಿ ಈಗ ಮತ್ತೆ ಹೊಸ ಧಾರಾವಾಹಿಯಲ್ಲಿ ನಟಿಸೋದಕ್ಕೆ ಸಜ್ಜಾಗಿದ್ದಾರೆ.

author-image
NewsFirst Digital
ಸಖತ್​ ಜಾಲಿ ಮೂಡ್​ನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ; ನಟಿ ಸಂಜನಾ ಬುರ್ಲಿ ಹೋಗಿದೆಲ್ಲಿಗೆ?
Advertisment

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ ಸಂಜನಾ ಬುರ್ಲಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ನಟಿ ಸಂಜನಾ ಬುರ್ಲಿ.

Advertisment

ಇದನ್ನೂ ಓದಿ:ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಸುಜಾತ, ಅನನ್ಯಾ ಭಟ್ ಕುಟುಂಬದ ಬಗ್ಗೆ ಎಸ್‌ಐಟಿ ತನಿಖೆ, ಸಿಕ್ಕ ಮಾಹಿತಿ ಏನು ಗೊತ್ತಾ?

sanjana

ಪುಟ್ಟಕ್ಕನ ಮಕ್ಕಳು ತಂಡದಿಂದ ಆಚೆ ಬಂದಿದ್ದ ನಟಿ ಸಂಜನಾ ಬುರ್ಲಿ ಈಗ ಮತ್ತೆ ಹೊಸ ಧಾರಾವಾಹಿಯಲ್ಲಿ ನಟಿಸೋದಕ್ಕೆ ಸಜ್ಜಾಗಿದ್ದಾರೆ. ಹೌದು, ಕಲರ್ಸ್​ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರೋದಕ್ಕೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ನಾಲ್ಕು ಹೀರೋಗಳನ್ನು ಇಟ್ಟುಕೊಂಡು ಸ್ಟೋರಿ ಮಾಡಿದೆ ತಂಡ. ಶ್ರೀಗಂಧ ಗುಡಿ ಟೈಟಲ್​ನೊಂದಿಗೆ ಸದ್ಯದಲ್ಲೇ ಹೊಸ ಧಾರಾವಾಹಿ ಲಾಂಚ್​ ಆಗ್ತಿದೆ.

ShreeGandhadagudi

ಬಿಗ್​ಬಾಸ್​ ಖ್ಯಾತಿಯ ಶಿಶಿರ್, ಪಾರು ಖ್ಯಾತಿಯ ಗಗನ್​, ನಮ್ಮನೆ ಯುವರಾಣಿ ಹಾಗೂ ಶ್ರೀರೇಣುಕಾ ಯಲ್ಲಮ್ಮ ಖ್ಯಾತಿಯ ಜಯಂತ್​ ಹಾಗೂ ಲಕ್ಷ್ಮೀ ನಿವಾಸ ಖ್ಯಾತಿಯ ಭವಿಷ್ಯ್​ ಅಭಿನಯಿಸ್ತಿರೋ ನಾಲ್ವರು ಅಣ್ಣ ತಮ್ಮನ ಕಥೆ. ತಂದೆ ಕುಡುಕ, ತಾಯಿ ಇಲ್ಲದ ಮನೆಯಲ್ಲಿ ಪ್ರತಿ ದಿನ ರಣರಂಗ. ಈ ಮನೆಗೆ ಒಂದು ಹೆಣ್ಣು ಬಂದ್ರೇ ಎಲ್ಲಾ ಸರಿ ಹೋಗುತ್ತೆ ಅನ್ನೋ ನಂಬಿಕೆ. ಆದ್ರೇ, ಆ ಹೆಣ್ಣು ಯಾರು? ಇಂತಹ ಮನೆಗೆ ಸೊಸೆಯಾಗಿ ಬರ್ತಾಳಾ? ಇದು ಸ್ಟೋರಿ ಲೈನ್​ ಆಗಿತ್ತು.

Advertisment

ಇದೀಗ ಶ್ರೀಗಂಧ ಗುಡಿ ಸೀರಿಯಲ್​ಗೆ ನಾಯಕಿಯಾಗಿ ಸಂಜನಾ ಬುರ್ಲಿ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್​ ಕನ್ನಡ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಘ್ನ ನಿವಾರಕನಿಗೆ ಮೂರು ಗಂಟೆಗಳ ಮನರಂಜನೆಯ ಮಹಾಭಿಷೇಕ ಪ್ರೋಮೋ ರಿಲೀಸ್ ಮಾಡಿದೆ. ಇದೇ ಪ್ರೋಮೋದಲ್ಲಿ ಸಂಜನಾ ಬುರ್ಲಿ ಅವರ ಆಗಮನವಾಗಿದೆ. ಸದ್ಯ ನಟಿ ಸಂಜನಾ ಬುರ್ಲಿ ಅವರು ಮತ್ತೆ ಕಮ್​ ಬ್ಯಾಕ್​ ಮಾಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sanjana Burli, puttakkana makkalu
Advertisment
Advertisment
Advertisment