/newsfirstlive-kannada/media/media_files/2025/08/25/gandada-gudi-2025-08-25-15-45-35.jpg)
ಪುಟ್ಟಕ್ಕನ ಮಗಳು ಸ್ನೇಹಾ ಹೊಸ ಪ್ರಾಜೆಕ್ಟ್ ಮಾಡ್ತಿದ್ದಾರೆ ಅಂತ ಮೊನ್ನೆಯಷ್ಟೇ ಸ್ಟೋರಿ ಬರೆದಿದ್ವಿ. ಸದ್ಯ ಆ ಸುದ್ದಿ ನಿಜ ಆಗಿದೆ. ಸ್ನೇಹನಾ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇನ್ಮುಂದೆ ಹಬ್ಬನೋ ಹಬ್ಬ.
ಇದನ್ನೂ ಓದಿ:ಶಾಲೆಯ ಹೋಮ್ ವರ್ಕ್ ಒತ್ತಡ.. ಜೀವ ಕಳೆದುಕೊಂಡ SSLC ವಿದ್ಯಾರ್ಥಿನಿ, ಅನುಮಾನ
ಪುಟ್ಟಕ್ಕನ ಮಗಳು ಅಧಿಕೃತವಾಗಿ ಶ್ರೀಗಂಧದ ಗುಡಿಗೆ ಸೊಸೆ ಆಗಿದ್ದಾರೆ. ಕಲರ್ಸ್ ಕನ್ನಡಕ್ಕೆ ಪಾದಾರ್ಪಣೆ ಮಾಡಿರೋ ಸಂಜನಾ ಬುರ್ಲಿ ಪ್ರೋಮೋ ರಿಲೀಸ್ ಆಗಿದೆ. ಸಂಜನಾ ಬುರ್ಲಿ ಕಲರ್ ಫುಲ್ ಎಂಟ್ರಿ ಕೊಡ್ತಿದ್ದಾರೆ ಅಂತ. ಆ ಸುದ್ದಿ ನಿಜ ಆಗಿದೆ.
ಶಿಶಿರ್, ಗಗನ್, ಜಯಂತ್ ಹಾಗೂ ಭವಿಷ್ಯ ನಾಯಕ ನಟರಾಗಿ ಅಭಿನಯಿಸ್ತಿರೋ ಶ್ರೀಗಂಧದ ಗುಡಿಗೆ ನಾಯಕಿ ಆಗಿದ್ದಾರೆ ನಟಿ ಸಂಜನಾ ಬುರ್ಲಿ. ಪುಟ್ಟಕ್ಕನ ಮಗಳು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಸಂಜನಾ ಬುರ್ಲಿ. ವಿದ್ಯಾಭ್ಯಾಸ ಮುಂದುವರೆಸುವ ಕಾರಣಕ್ಕೆ ಸೀರಿಯಲ್ನಿಂದ ಹೊರ ಬಂದಿದ್ರು.
ಬರೋಬ್ಬರಿ 10 ತಿಂಗಳ ಗ್ಯಾಪ್ನ ನಂತರ ಹೊಸ ಧಾರಾವಾಹಿ ಮೂಲಕ ವೀಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಅಂದ್ಹಾಗೆ, ಶಿಶಿರ್ ಸೇರಿದಂತೆ ನಾಲ್ಕು ಜನ ಅಣ್ಣ ತಮ್ಮಂದಿರಲ್ಲಿ ಎರಡನೇ ಸಹೋದರನ ಪಾತ್ರ ಮಾಡ್ತಿರೋ ಭವಿಷ್ಯಗೆ ಜೋಡಿ ಆಗಿದ್ದಾರೆ ನಟಿ. ಹೆಣ್ಣು ದಿಕ್ಕಿಲ್ಲದ ಮನೆ ಹಾಳು ಕೊಂಪೆ ಆಗಿರುತ್ತೆ. ಅದನ್ನು ಸುಂದರ ನಂದಗೋಕಲ ಮಾಡೋ ಜವಬ್ದಾರಿ ಸಂಜನಾ ಪಾತ್ರದ್ದು.
ತಮಿಳು ಭಾಷೆಯ ಅಯ್ಯನರ್ ತುನೈ ಧಾರಾವಾಹಿಯ ರಿಮೇಕ್ ಶ್ರೀಗಂಧದ ಗುಡಿ. ಈಗಾಲೇ ತಮಿಳು ಭಾಷೆಯಲ್ಲಿ ಈ ಸ್ಟೋರಿ ಜನಪ್ರಿಯತೆ ಪಡೆದಿದ್ದು, ಅದೇ ಕಥೆಯನ್ನ ಕನ್ನಡಕ್ಕೆ ತರಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ