/newsfirstlive-kannada/media/media_files/2025/08/20/vidya-raj-2025-08-20-21-41-29.jpg)
ಪುಟ್ಟಕ್ಕನ ಮಕ್ಕಳು ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಎಕ್ಸ್ಪೆಕ್ಟೆಶನ್ ಜಾಸ್ತಿಯಾಗಿದೆ. ಟಾಪ್ ಲಿಸ್ಟ್ನಲ್ಲಿದ್ದ ಸೀರಿಯಲ್ಗೆ ಡಿಸಿ ಸ್ನೇಹಾ ಸಾವು ಹೊಡೆತ ಕೊಟ್ಟಿತು. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟೇಕ್ ಆಫ್ ಆಗುತ್ತಿದೆ.
ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್ನ್ಯೂಸ್.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ಗೆ ಮುಹೂರ್ತ ಫಿಕ್ಸ್
ಇದರ ಮಧ್ಯೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಫೇಮಸ್ ಆಗಿರೋ ನಟಿ ಸಿಂಪಲ್ ಸೀರೆಯಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಈ ಹಿಂದೆ ರಾಮಾಚಾರಿ ಸೀರಿಯಲ್‌ನಲ್ಲಿ ರುಕ್ಕು ಪಾತ್ರದಲ್ಲಿ ನಟಿಸಿದ್ದ ನಟಿ ವಿದ್ಯಾ ರಾಜ್ ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ನಟಿ ವಿದ್ಯಾ ರಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ನಟಿ ಇದೀಗ ರೌಡಿ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇ್ವ ಮಾಡಿಕೊಂಡಿದ್ದಾರೆ.
ನಟಿ ವಿದ್ಯಾ ರಾಜ್ ಅವರು ಕನ್ನಡ ಹಾಗೂ ತೆಲುಗಿನ ಸೀರಿಯಲ್‌ಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಕನ್ನಡದ 'ಕನ್ಯಾದಾನ' ಸೀರಿಯಲ್‌ನಲ್ಲಿ ನಟಿ ವಿದ್ಯಾ ರಾಜ್ ಅಭಿನಯಿಸಿದ್ದರು. ಕನ್ನಡದ ನಮಸ್ತೆ ಘೋಸ್ಟ್, ಬಹದ್ದೂರ್ ಗಂಡು ಚಿತ್ರಗಳಲ್ಲಿ ವಿದ್ಯಾ ರಾಜ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ