/newsfirstlive-kannada/media/media_files/2025/10/07/ashwini-and-rakshita-2025-10-07-11-18-09.jpg)
ಬಿಗ್​ಬಾಸ್​ ಶೋನಲ್ಲಿ ನಿನ್ನೆ ಪ್ರಸಾರವಾದ ಸಂಚಿಕೆಯು ಬರೀ ಗಲಾಟೆ, ಗದ್ದಲದಿಂದಲೇ ಮುಗಿದು ಹೋಗಿದೆ. ಈ ಮಧ್ಯೆ ಬಿಗ್​ಬಾಸ್ ಮನೆಗೆ ಕಂಬ್ಯಾಕ್ ಮಾಡಿರುವ ರಕ್ಷಿತಾ ಶೆಟ್ಟಿಯನ್ನು ಅಶ್ವಿನಿ ಗೌಡ ಕಾರ್ಟೂನ್ ಎಂದು ಕರೆದಿರೋದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಬಿಗ್​​ಬಾಸ್​ನಲ್ಲಿ ನಿನ್ನೆಯ ದಿನ ಒಂಟಿ ಮತ್ತು ಜಂಟಿ ನಡುವೆ ಭಾರೀ ದೊಡ್ಡ ಪ್ರಮಾಣದಲ್ಲಿ ಕಿತ್ತಾಟ ನಡೆಯಿತು. ಈ ಗಲಾಟೆ ಕಿತ್ತಾಟದ ಮಧ್ಯೆ ರಕ್ಷಿತಾ ಶೆಟ್ಟಿ ತಮ್ಮ ಪಾಡಿಗೆ ತಾವಿದ್ದು ಓಡಾಡಿಕೊಂಡು ಇದ್ದರು. ಇದನ್ನು ನೋಡಿದ ಅಶ್ವಿನಿ ಗೌಡ, ರೋಸಿ ಹೋಗಿದ್ದಾರೆ. ರಕ್ಷಿತಾ ಅವರತ್ತ ಕೈತೋರಿಸುತ್ತ ಈ ಕಾರ್ಟೂನ್ ಯಾವ ಕಡೆ ಎಂದು ಆವೇಶಭರಿತರಾಗಿ ಮಾತನ್ನಾಡಿದ್ದಾರೆ.
ನಂತರ ಒಂಟಿ ತಂಡಕ್ಕೆ ನೀಡಿರುವ ರೂಮ್​​ಗೆ ಮಲ್ಲಮ್ಮ ಮೂಲಕ ಕರೆಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಮನೆಗೆ ಒಂಟಿಯಾಗಿ ಬಂದಿದ್ದೀರೋ? ಇಲ್ಲ ಜಂಟಿಯಾಗಿ ಬಂದಿರೋ? ನೀವು ಯಾರ ಕಡೆ ಎಂದು ಕೇಳಿದ್ದಾರೆ. ಅದಕ್ಕೆ ನಾನು ಒಂಟಿಯಾಗಿ ಬಂದಿದ್ದೇನೆ ಎಂದು ರಕ್ಷಿತಾ ಹೇಳಿದ್ದಾರೆ. ಆಗ ನೀವು ನಮ್ಮ ಕಡೆ. ನೀವು ಹೀಗೆಲ್ಲ ಇದ್ದರೆ ಆಗೋದಿಲ್ಲ. ಮಾತನ್ನಾಡಬೇಕು. ಜಂಟಿಯಾಗಿರೋರ ಜೊತೆ ಹಾಯಾಗಿ ಇರೋದೆಲ್ಲ. ನಮ್ಮ ಮೇಲೆ ಅವರು ಬಂದಾಗ ಮುಗಿ ಬೀಳಬೇಕು ಅನ್ನೋ ರೀತಿಯಲ್ಲಿ ಗದರಿದ್ದಾರೆ. ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯನ್ನು ಕಾರ್ಟೂನ್ ಎಂದು ಗೇಲಿ ಮಾಡಿರೋದು ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಅಭಿಮಾನಿಗಳು, ಅಶ್ವಿನಿ ಗೌಡಗೆ ಧಿಮಾಕು ಅಂತೆಲ್ಲ ಮಾತನ್ನಾಡಿಕೊಳ್ತಿದ್ದಾರೆ.
ಇದನ್ನೂ ಓದಿ: ತನಿಷಾಗೆ ಕ್ಷಮೆ ಕೇಳಿದ ವರ್ತೂರು.. ಇವರಿಬ್ಬರ ಮಧ್ಯೆ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ