/newsfirstlive-kannada/media/media_files/2025/10/07/varthuru-and-tansha-2025-10-07-10-58-37.jpg)
ಬಿಗ್ ಬಾಸ್ ಮನೆ ಮಾಯೆ. ಅಲ್ಲಿದ್ದಾಗ ಕಾಣಿಸುವ ಸ್ನೇಹ, ಪ್ರೀತಿ, ಆತ್ಮೀಯತೆ ಕುಚಿಕು-ಕುಚಿಕು ಗೆಳೆತನ ಹೊರಗಡೆ ಬಂದ ನಂತರ ಕಾಣಿಸುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಬಾಂಧವ್ಯನ ಮುಂದುವರೆಸ್ತಾರೆ. ಉಳಿದಂತೆ ಆಯಾ ಪರಿಸ್ಥಿತಿಗೆ ತಕ್ಕಂತೆ ಎಲ್ಲವೂ ಮಾಯ. ಆದರೆ ವರ್ತೂರ್ ಸಂತೋಷ್ ಮತ್ತು ತನಿಷಾ ಜೋಡಿ ಹಂಗಲ್ಲ. ಹೊರಗಡೆ ಬರೋವಾಗ, ಬಂದ್ಮೇಲೂ ಆತ್ಮೀಯರಾಗಿಯೇ ಇದ್ರು. ಈಗ ವರ್ತೂರು ಸಂತೋಷ್​, ತನಿಷಾ ಅವರಿಗೆ ಕ್ಷಮೆ ಕೇಳಿರೋ ಘಟನೆ ನಡೆದಿದೆ.
ಇದನ್ನೂ ಓದಿ: ತಾಕತ್ತಿದ್ರೆ ಟಚ್ ಮಾಡು ಎಂದ ಅಶ್ವಿನಿ ಗೌಡ.. ನಡೆದೇ ಹೋಯ್ತು ಡಿಶುಂ ಡಿಶುಂ..? VIDEO
ತನಿಷಾ ಹಾಗೂ ವರ್ತೂರು ಸಂತೋಷ ಅವರ ಸ್ನೇಹ, ಒಡನಾಟ ಕಂಡು ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ್ದ ಬಾಂಧವ್ಯ ಇದೆ ಎಂದು ಮಾತ್ನಾಡಿಕೊಳ್ತಿದ್ರು. ಇವ್ರು ಕಂಡ್ರೆ ಅವ್ರ ಬಗ್ಗೆ, ಅವ್ರು ಕಂಡ್ರೆ ಇವ್ರ ಬಗ್ಗೆ ವಿಚಾರಿಸೋದು, ಘೋಷಣೆ ಕೂಗೋದು ಜೋರಾಗಿತ್ತು. ಈ ಜೋಡಿ ಮದುವೆ ಸುದ್ದಿ ಆಗಾಗ ಸದ್ದು ಮಾಡ್ತಿತ್ತು. ಈ ಸುದ್ದಿನ ಅಲ್ಲಗಳೆಯುತ್ತಾ ಬಂದಿದ್ರು ಜೋಡಿ. ನಮ್ಮಿಬ್ಬರದ್ದು ಗೆಳೆತನ ಅಷ್ಟೇ ಎಂದಿದ್ದರು. ವರ್ತೂರು ಮದುವೆ ಕುರಿತು ತನಿಷಾಗೆ ಪ್ರಶ್ನೆ ಎದುರಾದಾಗ ಖಾರವಾಗಿಯೇ ಪ್ರತಿಕ್ರಿಯೇ ನೀಡಿದ್ರು. ಅವ್ರ ಮದುವೆ ಬಗ್ಗೆ ನನ್ನ ಹತ್ರ ಯಾಕೆ ಕೇಳ್ತೀರಾ? ಬೇರೆಯವರ ಲೈಫ್ ಬಗ್ಗೆ ಹಾಗೆಲ್ಲ ನನ್ನ ಪ್ರಶ್ನೆ ಮಾಡಬೇಡಿ ಎಂದಿದ್ದರು. ಇದಕ್ಕೆ ಸದ್ಯ ವರ್ತೂರು ಸಂತೋಷ್​ ಪ್ರತಿಕ್ರಿಯೆ ನೀಡಿ, ಕ್ಷಮೆ ಕೇಳಿದ್ದು, ನನ್ನ ಅಕ್ಕಾ ಅವರು ಎಂದು ಸಹೋದರತ್ವದ ಭಾವ ಹೊರ ಹಾಕಿದ್ದಾರೆ.
ಶೋನಲ್ಲಿ ತನಿಷಾ ಅವ್ರು ನನ್ನ ಸಹ ಸ್ಫರ್ಧಿ ಆಗಿದ್ದರು. ಅವರು ನನ್ನ ಅಕ್ಕ ಇದ್ದಂತೆ. ಅವರಿಗೆ ನಾನು ಅಕ್ಕನ ಸ್ಥಾನ ನೀಡಿದ್ದೇನೆ ಎಂದಿದ್ದಾರೆ. ನಮ್ಮಿಬ್ಬರ ಕುರಿತು ಹಲವು ವಿಚಾರಗಳನ್ನು ಕೇಳಿ ನಮಗೂ ಸಾಕಾಗಿದೆ ಎಂದು ಹೇಳಿರುವ ವರ್ತೂರು ಸಂತೋಷ್, ಇದರಿಂದ ಅವರಿಗೂ ಕೂಡ ಮುಜುಗರ ಆಗಿದೆ, ನಾನು ಬಿಗ್ ಬಾಸ್‌ನಲ್ಲಿದ್ದಾಗಲೇ ಅವರನ್ನು ಅಕ್ಕ ಎಂದು ಕರೆದಿದ್ದೆ. ಬೇಕಿದ್ದರೆ ಕೆಂಪು ಸೀರೆ ಅವರು ಹಾಕಿಕೊಂಡ ಬಂದಿದ್ದ ವಿಡಿಯೋವನ್ನು ಈಗಲೂ ಬೇಕಿದ್ದರೆ ನೀವು ನೋಡಬಹುದು ಎಂದು ಹೇಳಿದ್ದಾರೆ. ನನ್ನಿಂದ ಬೇಸರ ಆಗಿದ್ದರೆ ತನಿಷಾ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ವರ್ತೂರು ಸಂತೋಷ್ ಯೂಟ್ಯೂಬ್​ ಚಾನಲ್​ ಸಂದರ್ಶನ್​ ಒಂದರಲ್ಲಿ ಕ್ಷಮೆ ಕೇಳಿದ್ದಾರೆ.
ಒಟ್ನಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್​ ನಾವಿಬ್ಬರೂ ಜೋಡಿ ಅಲ್ಲ. ಇನ್ಮುಂದೆ ನಮ್ಮ ಮದುವೆ ಬಗ್ಗೆ ಕೇಳ್ಬೇಡಿ ಎಂದು ನೇರಾನೇರವಾಗಿ ಅಕ್ಕ-ತಮ್ಮ ಎಂದು ಸಾರಿದ್ದಾರೆ. ಇಬ್ಬರ ಅಭಿಮಾನಿಗಳು ಈ ವಿಚಾರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡೆಸಿದ್ದಾರೆ.
ಇದನ್ನೂ ಓದಿ:ಸೇಡು ತೀರಿಸಿಕೊಳ್ಳಲು ಜಾಹ್ನವಿ ಜೊತೆ ಕೈ ಜೋಡಿಸಿದ ಅಶ್ವಿನಿ..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ