/newsfirstlive-kannada/media/media_files/2025/10/06/bigg-boss-4-2025-10-06-12-42-51.jpg)
ಬಿಗ್​ಬಾಸ್ ಮನೆಯಲ್ಲಿ ಇವತ್ತಿನಿಂದ ಆಟದ ವರಸೆ ಬದಲಾಗಿದೆ. ಮೊದಲ ಫೈನಲಿಸ್ಟ್ ಅಭ್ಯರ್ಥಿ ಆಗಿರುವ ಕಾಕ್ರೋಚ್ ಸುಧಿಗೆ ಬಿಗ್​ಬಾಸ್​ ಸ್ಪೆಷಲ್ ಪವರ್ ನೀಡಿದ್ದಾರೆ. ಅದುವೇ ಅಸೂರ, ಸರ್ವೋಚ್ಛ, ಅಧಿಪತಿ ಆಗಿದ್ದಾರೆ.
ಅಸೂರಾಧಿಪತಿ ಆಗಿರುವ ಕಾಕ್ರೋಚ್​, ದರ್ಬಾರ್​ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಪ್ರೊಮೋ ಒಂದನ್ನ ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ​ಈ ವಾರದ ಬಿಗ್​ ಬಾಸ್​ ಟಾಸ್ಕ್​​ ಏನಾಗಿರಲಿದೆ ಅನ್ನೋದನ್ನು ರಿವೀಲ್ ಮಾಡಿದೆ. ಬಿಗ್​ಬಾಸ್ ಆದೇಶದಂತೆ ಕಾಕ್ರೋಚ್​ ಶುರು ತಮ್ಮ ಅಸಲಿ ಆಟವನ್ನು ಹಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ಕರಿಬಸಪ್ಪ ಕೊಟ್ಟ ಕ್ವಾಟ್ಲೆಗೆ ಕಿಚ್ಚ ಸುಸ್ತು.. ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕ ಸುದೀಪ್ ಮತ್ತು ವೀಕ್ಷಕರು..!
ಪ್ರಮೋದಲ್ಲಿ ಹೇಳುವಂತೆ.. ಅಸುರ ಮಹಾರಾಜ ಆಗಿರುವ ಕಾಕ್ರೋಚ್, ತನ್ನ ಸಾಮ್ರಾಜ್ಯದಲ್ಲಿ ಆಡಿದ್ದೇ ಆಟ. ಮಾಡಿದ್ದೇ ರೂಲ್ಸ್​​ ಆಗಿದೆ. ಇದರ ಮಧ್ಯೆ ಆತನ ಚೇಲಾಗಳು ಹೊಗಳಿ ಅಟ್ಟಕ್ಕೆ ಕೂರಿಸುತ್ತಿದ್ದಾರೆ. ಮತ್ತೊಂದು ಕಡೆ, ಅಸುರನ ಕಠಿಣ ಶಿಕ್ಷೆಗಳಿಗೆ ಪ್ರಜೆಗಳು ಮುನಿಸಿಕೊಂಡಿದ್ದಾರೆ. ಅಸುರ ಕಾಕ್ರೋಚ್ ಅಂದರೆ ಉರಿದು, ಉರಿದು ಬೀಳುತ್ತಿದ್ದಾರೆ. ಸೇಡು ತೀರಿಸಿಕೊಳ್ಳಲು ಕತ್ತಿ ಮಸೆಯುತ್ತಿದ್ದಾರೆ.
ಕೆಲಸ ಮಾಡಿಲ್ಲ ಅಂದ್ರೆ ಬಸ್ಕಿ ಹೊಡೀಬೇಕು. ಜಾಸ್ತಿ ಹಾರಾಡಿದ್ರೆ ಸ್ವಿಮ್ಮಿಂಗ್ ಪೂಲ್​ಗೆ ತಳ್ಳುವ ಶಿಕ್ಷೆ, ಇನ್ನು ಅಸುರ ಬಂದ ಅಂದ್ರೆ ಆತನ ಎದುರಿಗೆ ಯಾರೊಬ್ಬರೂ ಕೂತುಕೊಳ್ಳುವಂತಿಲ್ಲ. ಎಲ್ಲರೂ ಎದ್ದು ನಿಂತುಕೊಳ್ಳಬೇಕು. ಇಂಥ ಹಿಟ್ಲರ್ ವ್ಯವಸ್ಥೆಗೆ ದಿಕ್ಕೆಟ್ಟ ಜಾಹ್ನವಿ ಮತ್ತು ಅಶ್ವಿನಿ ಗೌಡ, ನಾವು ರಕ್ಕಸರನ್ನು ಸಂಹಾರ ಮಾಡ್ತೀವಿ ಎಂದು ಶಪಥ ಗೈದಿದ್ದಾರೆ. ಇಂದು ರಾತ್ರಿ ಅಸುರಾಧಿಪತಿಯ ರಿಯಲ್ ಕಹಾನಿ ಪ್ರಸಾರವಾಗಲಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.
ಅಸುರಾಧಿಪತಿ ಕಾಕ್ರೋಚ್ ಮಾಡಿದ್ದೇ ನಿಯಮ, ಆಡಿದ್ದೇ ಆಟ
— Colors Kannada (@ColorsKannada) October 6, 2025
ಬಿಗ್ ಬಾಸ್ ಕನ್ನಡ ಸೀಸನ್ 12 | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/7i9XoYuX4a
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ