Advertisment

ಕರಿಬಸಪ್ಪ ಕೊಟ್ಟ ಕ್ವಾಟ್ಲೆಗೆ ಕಿಚ್ಚ ಸುಸ್ತು.. ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕ ಸುದೀಪ್ ಮತ್ತು ವೀಕ್ಷಕರು..!

‘ಬಿಗ್ ಬಾಸ್ ಕನ್ನಡ 12’ (Bigg Boss) ಶೋನ ಮೊದಲ ವಾರದಲ್ಲೇ ಎರಡು ವಿಕೆಟ್ ಪತನವಾಗಿದೆ. ಜಂಟಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ (RJ Amith and Karibasappa)ಔಟ್ ಆಗಿದ್ದಾರೆ.

author-image
Ganesh Kerekuli
Kiccha sudeep (2)
Advertisment

‘ಬಿಗ್ ಬಾಸ್ ಕನ್ನಡ 12’ (Bigg Boss) ಶೋನ ಮೊದಲ ವಾರದಲ್ಲೇ ಎರಡು ವಿಕೆಟ್ ಪತನವಾಗಿದೆ. ಜಂಟಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ  (RJ Amith and Karibasappa)ಔಟ್ ಆಗಿದ್ದಾರೆ. 

Advertisment

ಬಿಗ್​ಬಾಸ್​ ಮನೆಯಿಂದ ಔಟ್ ಆಗ್ತಿದ್ದಂತೆ ಕಿಚ್ಚ ಸುದೀಪ್ (Kiccha Sudeep), ಅವರನ್ನ ವೇದಿಕೆಗೆ ಕರೆದರು. ಈ ವೇಳೆ ಕರಿಬಸಪ್ಪಗೆ ಏನಾಯ್ತು ಎಂದು ಪ್ರಶ್ನೆ ಮಾಡಿದರು. ನಾನು ಬಾಡಿ ಬಿಲ್ಡಿಂಗ್, ಫಿಸಿಕಲ್ ಟಾಸ್ಕ್ ಇರತ್ತೆ ಅಂದ್ಕೊಂಡಿದ್ದೆ. ಒಳಗೆ ಹೋದ ಮೇಲೆ ಇದು ಮೆಂಟಲಿ ಆಡೋ ಆಟ. ಅದೇ ಇಲ್ಲಿ ತುಂಬಾ ಇಂಪಾರ್ಟೆಂಟ್ ಅಂತ ಗೊತ್ತಾಯ್ತು. ಇಲ್ಲಿ ಕ್ಷಣ ಕ್ಷಣವೂ ಯೋಚನೆ ಮಾಡಿ ಆಡಬೇಕಾಗುತ್ತದೆ ಎಂದು ಗೊತ್ತಾಯ್ತು.

ಇದನ್ನೂ ಓದಿ: ಜಾಹ್ನವಿಯನ್ನು ಸ್ವಿಮ್ಮಿಂಗ್​ ಪೂಲ್​ಗೆ ತಳ್ಳಿದ ಕಾಕ್ರೋಚ್.. ಮಾಡಿದ್ದೇ ನಿಯಮ, ಆಡಿದ್ದೇ ಆಟ..!

ಊಟ, ನಿದ್ದೆ ಇಲ್ಲದೇ ಇರುವುದು ಹೇಗೆ ಎಂದು ಬಿಗ್ ಬಾಸ್ ಕಲಿಸಿಕೊಟ್ಟಿದೆ. ನಾನು ಜೀವ ಇರೋ ತನಕ ಕಲರ್ಸ್ ಕನ್ನಡ ವಾಹಿನಿಯನ್ನು ಮರೆಯಲ್ಲ. ಇನ್ಮುಂದೆ ನಾನು ಬಿಗ್ ಬಾಸ್ ಕರಿಬಸಪ್ಪ ಅಂತ ಕರೆಸಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ. ಈ ವೇದಿಕೆ ಮೇಲೆ ಮಾತನಾಡುತ್ತಿರುವುದೇ ನನ್ನ ಪುಣ್ಯ. ನಾನು ಸುದೀಪ್ ಸರ್ ಅವರ ಪೈಲ್ವಾನ್ ಅವರ ಸಿನಿಮಾ ನೋಡಿ ಇನ್​ಸ್ಪೈರ್ ಆದೆ. ಅದೇ ಕಾರಣಕ್ಕೆ ಅವತ್ತು ನನ್ನ ಚೆಸ್ಟ್​ ಶೇಕ್ ಮಾಡುತ್ತ ಬಂದೆ ಎಂದರು. 

Advertisment

ಕರಿಬಸಪ್ಪ ಮಾತಿಗೆ ಸುಸ್ತಾದ ಕಿಚ್ಚ..!

ವೇದಿಕೆ ಮೇಲೆ ಸಿಕ್ಕದ್ದೇ ಚಾನ್ಸು ಅಂತಾ ಕರಿಬಸಪ್ಪ ಒಂದೇ ಸಮನೆ ಮಾತನಾಡಲು ಶುರು ಮಾಡಿದರು. ಸುದೀಪ್ ಅವರನ್ನು ಹೊಗಳುತ್ತಿದ್ದಾಗ ನೋಡುವಷ್ಟು ನೋಡಿದ ಕಿಚ್ಚ, ವೇದಿಕೆ ಮೇಲೆಯೇ ಕೂತರು. ಇದನ್ನು ನೋಡಿದ ಔಟಾದ ಸಹಸ್ಪರ್ಧಿ ಅಮಿತ್ ಕೂಡ ನೆಲಕ್ಕೆ ಕೂತರು. ಆದರೂ ಕೂಡ ಕರಿಬಸಪ್ಪ ಮಾತು ನಿಲ್ಲಿಸಲಿಲ್ಲ. ಮಾತನ್ನಾಡುತ್ತಲೇ ಹೋದರು. ಕೊನೆಗೆ ಅಮಿತ್, ವೇದಿಕೆ ಮೇಲೆಯೇ ಮಲಗಿದಂತೆ ಮಾಡಿದರು. ಅದಕ್ಕೆ ಮತ್ತಷ್ಟು ನಕ್ಕ ಸುದೀಪ್ ಕೊನೆಗೆ ಕರಿಬಸಪ್ಪ ಅವರಿಗೇ ಅಂತಾ ಘೋಷಣೆ ಕೂಗಿದ್ದಾರೆ. ‘ಕರಿಬಸಪ್ಪ ಅವರಿಗೇ..’ ಎಂದು ಕೂಗುತ್ತಿದ್ದಂತೆಯೇ ವೀಕ್ಷಕರು, ‘ಜೈ’ ಎಂದು ಕೂಗಿದರು.  ‘ನಿಮ್ಮ ಮತ ಕರಿಬಸಪ್ಪ ಅವರಿಗೆ..’ ಅಂತಾ ಕಿಚ್ಚ ಜೋರಾಗಿ ಕೂಗಿದರೂ ಮಾತು ನಿಲ್ಲಿಸಿರಲಿಲ್ಲ. ರಾಜಕೀಯ ನಾಯಕರ ಭಾಷಣದಂತೆ ಇತ್ತು. 

ಇದನ್ನೂ ಓದಿ: ‘ಬೇಜಾರು ಏನೆಂದರೆ..’ ಮನೆಯಿಂದ ಆಚೆ ಬಂದು ಕಿಚ್ಚನ ಎದುರು RJ ಅಮಿತ್ ಮಾತು..!

ಆಗ ಕರಿಬಸಪ್ಪ ಬಳಿಗೆ ಬಂದ ಸುದೀಪ್, ಅವರ ಬಾಯಿ ಮುಚ್ಚಿಸಿ ಸುಮ್ಮನಾಗುವಂತೆ ತಿಳಿಸಿದ್ದಾರೆ. ಕೊನೆಗೆ ಅಮಿತ್ ನೋಡಿದ್ರಾ ಸರ್..? ಅವರು ಎಷ್ಟೊಂದು ಮಾತನ್ನಾಡುತ್ತಾರೆ ಎನ್ನುತ್ತಾರೆ. ಕೊನೆಗೆ ‘ಎಲ್ಲಿಂದ ಬರುತ್ತೆ ನಿಮಗೆ ಇಷ್ಟೊಂದು ಎನರ್ಜಿ..? ಬಿಗ್​ಬಾಸ್ ಮನೆಯಲ್ಲಿ ಹೀಗೆ ಮಾತನ್ನಾಡಿದ್ರೆ ಔಟ್ ಆಗ್ತಿರಲಿಲ್ಲ..’ ಎಂದು ಸುದೀಪ್ ಹೇಳಿದರು. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 kiccha sudeep
Advertisment
Advertisment
Advertisment