ಜಾಹ್ನವಿಯನ್ನು ಸ್ವಿಮ್ಮಿಂಗ್​ ಪೂಲ್​ಗೆ ತಳ್ಳಿದ ಕಾಕ್ರೋಚ್.. ಮಾಡಿದ್ದೇ ನಿಯಮ, ಆಡಿದ್ದೇ ಆಟ..!

ವೀಕೆಂಡ್ ಮಸ್ತಿಯಲ್ಲಿದ್ದ ಬಿಗ್​ಬಾಸ್ ಮನೆಯಲ್ಲಿ ಇದೀಗ ಅಸುರಾಧಿಪತಿ ಕಿಚ್ಚು ಎದ್ದಿದೆ. ಫೈನಲಿಸ್ಟ್ ಕಂಟೆಸ್ಟೆಂಟ್ ಆಗಿರುವ ಕಾಕ್ರೋಚ್ ಬಿಗ್​ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಅದುವೇ ಅಸೂರ, ಸರ್ವೋಚ್ಛ, ಅಧಿಪತಿ ಆಗಿದ್ದಾರೆ.

author-image
Ganesh Kerekuli
janavi
Advertisment

ವೀಕೆಂಡ್ ಮಸ್ತಿಯಲ್ಲಿದ್ದ ಬಿಗ್​ಬಾಸ್ ಮನೆಯಲ್ಲಿ (Bigg Boss house) ಇದೀಗ ಅಸುರಾಧಿಪತಿ ಕಿಚ್ಚು ಎದ್ದಿದೆ. ಫೈನಲಿಸ್ಟ್ ಕಂಟೆಸ್ಟೆಂಟ್ ಆಗಿರುವ ಕಾಕ್ರೋಚ್ ಬಿಗ್​ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದಾರೆ. ಅದುವೇ ಅಸೂರ, ಸರ್ವೋಚ್ಛ, ಅಧಿಪತಿ ಆಗಿದ್ದಾರೆ. 

ಅಂತೆಯೇ ಸುಧಿ ಅವರು ಬಿಗ್​ಬಾಸ್​ನಲ್ಲಿ ರಕ್ಕಸ ರೂಪದ ದರ್ಬಾರ್​ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಪ್ರೊಮೋ ಒಂದನ್ನ ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ​ಈ ವಾರದ ಬಿಗ್​ ಬಾಸ್​ ಟಾಸ್ಕ್​​ ಏನಾಗಿರಲಿದೆ ಅನ್ನೋದನ್ನು ರಿವೀಲ್ ಮಾಡಿದೆ. ಬಿಗ್​ಬಾಸ್ ಆದೇಶದಂತೆ ಕಾಕ್ರೋಚ್​ ಶುರು ತಮ್ಮ ಅಸಲಿ ಆಟವನ್ನು ಹಚ್ಚಿಕೊಂಡಿದ್ದಾರೆ. 

ತಪ್ಪು ಮಾಡಿದವರಿಗೆ, ಕೆಲಸ ಮಾಡದ ಜನರಿಗೆ ಹಿಟ್ಲರ್ ಮಾದರಿಯಲ್ಲಿ ಅಸುರಾಧಿಪತಿ ಶಿಕ್ಷೆ ನೀಡ್ತಿದ್ದಾರೆ. ಅದರಂತೆಯೇ ಕಾವ್ಯಗೆ ಬಸ್ಕಿ ಹೊಡೆಸಿ ಹಿಂಸೆ ಇಟ್ಟಿದ್ದಾರೆ. ಇತ್ತ ತಾನೂ ರಾಜ್ಯದ ಮಹಾರಾಣಿ ಎಂದು ಪೋಸ್ ಕೊಟ್ಟಿದ್ದ ಜಾಹ್ನವಿಗೆ ಅಧಿಪತಿ ಸ್ಪೆಷಲ್ ಟ್ರೀಟ್​ ಮಾಡಿದ್ದಾರೆ. 

ಇದನ್ನೂ ಓದಿ: ಬಿಗ್​ಬಾಸ್​ ಶೋನಿಂದ ಹೊರಬಿದ್ದ ಇಬ್ಬರು ಸ್ಪರ್ಧಿಗಳು; ಒಂದೇ ವಾರಕ್ಕೆ ಜರ್ನಿ ಅಂತ್ಯ..!

ಆಕೆಯನ್ನು ಎಳ್ಕೊಂಡು ಹೋಗಿ ಸ್ವಿಮ್ಮಿಂಗ್ ಪೂಲ್​​ಗೆ ತಳ್ಳಿ ಎಂದು ಅಸುರಾಧಿಪತಿ ಆದೇಶ ನೀಡಿದ್ದಾರೆ. ಅದರಂತೆಯೇ ಡಾಗ್ ಸತೀಶ್, ಚಂದ್ರಪ್ರಭ ಹಾಗೂ ಧ್ರುವಂತೆ ಅವರನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ್ದಾರೆ. ನಂತರ ಎದ್ದು ಬಂದು ಅಶ್ವಿನ್ ಗೌಡ ಜೊತೆ ಪಣ ತೊಟ್ಟಿರುವ ರಾಜಮಾತೆಯರು, ರಕ್ಷಸರನ್ನು ಸಂಹಾರ ಮಾಡುವ ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಈ ವಾರದ ಎಪಿಸೋಡ್ ತುಂಬಾನೇ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ. 

ಇದನ್ನೂ ಓದಿ: ‘ಬೇಜಾರು ಏನೆಂದರೆ..’ ಮನೆಯಿಂದ ಆಚೆ ಬಂದು ಕಿಚ್ಚನ ಎದುರು RJ ಅಮಿತ್ ಮಾತು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 ಬಿಗ್​ಬಾಸ್ BBK12 bigg boss jahnavi
Advertisment