/newsfirstlive-kannada/media/media_files/2025/10/06/rj-amith-2025-10-06-08-43-36.jpg)
‘ಬಿಗ್ ಬಾಸ್ ಕನ್ನಡ 12’ (Bigg Boss) ಶೋನ ಮೊದಲ ವಾರದಲ್ಲೇ ಎರಡು ವಿಕೆಟ್ ಪತನವಾಗಿದೆ. ಜಂಟಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ (RJ Amith and Karibasappa)ಔಟ್ ಆಗಿದ್ದಾರೆ.
ಬಿಗ್​ಬಾಸ್​ ಮನೆಯಿಂದ ಔಟ್ ಆಗ್ತಿದ್ದಂತೆ ಕಿಚ್ಚ ಸುದೀಪ್ (kiccha sudeep), ಅವರನ್ನ ವೇದಿಕೆಗೆ ಕರೆದರು. ಈ ವೇಳೆ ಆರ್​ಜೆ ಅಮಿತ್​ಗೆ ಏನಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್.. ಈ ಒಂದು ಮಿಂಚಿನ ಓಟದಲ್ಲಿ ನಾನಿನ್ನೂ ರೆಡಿಯಾಗಿರಲಿಲ್ಲ. ಯಾವುದೇ ಹೊಸ ಜಾಗಕ್ಕೆ ಹೋದರೆ ಅಡ್ಜಸ್ಟ್ ಆಗಲು 2 -3 ದಿನ ಟೈಮ್ ತಗೋತಿನಿ. ನಾನು ಈಗ ತಾನೇ ಎಲ್ಲರೊಂದಿಗೆ ಬೆರೆಯುವುದಕ್ಕೆ ಶುರು ಮಾಡಿದ್ದೆ. ಸದ್ಯ ನನಗೆ ಹೆಮ್ಮೆಯ ವಿಚಾರ ಏನೆಂದರೆ, ಸುದೀಪ್ ಅವರೊಂದಿಗೆ ಈ ವೇದಿಕೆಯನ್ನು ಶೇರ್ ಮಾಡುವ ಅವಕಾಶ ಸಿಕ್ಕಿರುವುದು ಎಂದರು.
ಇದನ್ನೂ ಓದಿ: RJ ಅಮಿತ್​ಗೆ ಮಾತಲ್ಲೇ ಚಾಟಿ ಏಟು ಕೊಟ್ಟ ಕಿಚ್ಚ ಸುದೀಪ್..!
ಬೇಜಾರು ಏನೆಂದರೆ unexplored potential ತುಂಬಾನೇ ಇತ್ತು. ನಾನಿನ್ನೂ ಕೊಡಲು ಇತ್ತು. ಸ್ಟಾರ್ಟಿಂಗ್ ಅಬ್ಸರ್ವೇಶನ್, ಆಮೇಲೆ ಎಕ್ಸ್​ಪೆರಿಮೆಂಟಲ್. ಅಲ್ಲಿ ಆಗಿರುವ ವಿಳಂಬದಿಂದಾಗಿ ನಾನು ಮನೆಯಿಂದ ಔಟ್ ಆಗಿರಬಹುದು ಅನಿಸುತ್ತದೆ. ಸಿಕ್ಕಾಪಟ್ಟೆ ಹೆಮ್ಮೆಯ ವಿಷಯ ಏನೆಂದರೆ ನಿಮ್ಮ ಜೊತೆ ದೊಡ್ಡ ವೇದಿಕೆ ಶೇರ್ ಮಾಡುವ ಅವಕಾಶ ಸಿಕ್ಕಿರೋದು ಎಂದರು.
ಇದನ್ನೂ ಓದಿ: ಬಿಗ್​ಬಾಸ್​ ಶೋನಿಂದ ಹೊರಬಿದ್ದ ಇಬ್ಬರು ಸ್ಪರ್ಧಿಗಳು; ಒಂದೇ ವಾರಕ್ಕೆ ಜರ್ನಿ ಅಂತ್ಯ..!
ಆಗ ಸುದೀಪ್ ಮಾತನ್ನಾಡಿ.. ನನಗೆ ವೈಯಕ್ತಿಕವಾಗಿ ಗೊತ್ತಿರೋ ಪ್ರಕಾರ, ನಿಮ್ಮಲ್ಲಿ ಇನ್ನೂ ಸಾಮರ್ಥ್ಯ ಇದೆ. ನಾನು ನಿಮ್ಮನ್ನು ಬರೀ ಬಿಗ್​ಬಾಸ್​ನಲ್ಲಿ ಮಾತ್ರ ಬೆರೆತಿಲ್ಲ. ಹೊರಗಡೆಯೂ ನೋಡಿದ್ದೀನಿ. ನಿಮ್ಮಲ್ಲಿ ಕೆಲವು ಹ್ಯೂಮರ್ ಇದೆ. ಯೋಚನಾ ಶಕ್ತಿ ಇದೆ. ಅದನ್ನೆಲ್ಲ ಡೆವಲಪ್ ಮಾಡಿಕೊಳ್ಳಿ ಎಂದು ಹಾರೈಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ