/newsfirstlive-kannada/media/media_files/2025/10/06/amit-and-karibasappa-1-2025-10-06-07-18-13.jpg)
‘ಬಿಗ್ ಬಾಸ್ ಕನ್ನಡ 12’ ಶೋನ ಮೊದಲ ವಾರದಲ್ಲೇ ಎರಡು ವಿಕೆಟ್ ಪತನವಾಗಿದೆ. ಜಂಟಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ (RJ Amith and Karibasappa) ಔಟ್ ಆಗಿದ್ದಾರೆ.
ಸಿಂಗಲ್ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿ ನೀಡಿದ್ದ ಧನುಷ್ ಗೌಡ, ಮಲ್ಲಮ್ಮ ಹಾಗೂ ಜಂಟಿಯಾಗಿ ಪ್ರವೇಶ ಮಾಡಿರುವ ಅಭಿಷೇಕ್-ಅಶ್ವಿನಿ ಎಸ್​.ಎನ್, ಗಿಲ್ಲಿ ನಟ-ಕಾವ್ಯ, ಅಮಿತ್-ಕರಿಬಸಪ್ಪ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.
ಮಲ್ಲಮ್ಮ ಅವರು ಕಳೆದ ಶನಿವಾರದ ಎಪಿಸೋಡ್​ನಲ್ಲೇ ಸೇವ್ ಆಗಿರೋದನ್ನು ಸುದೀಪ್ ತಿಳಿಸಿದ್ದರು. ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿ ಒಬ್ಬೊಬ್ಬರನ್ನೇ ಕಿಚ್ಚ ಸುದೀಪ್ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ಅಮಿತ್ - ಕರಿಬಸಪ್ಪ ಮತ್ತು ಅಶ್ವಿನಿ - ಅಭಿಷೇಕ್ ಜೋಡಿ ಉಳಿದುಕೊಂಡಿತ್ತು. ಅವರಿಬ್ಬರಲ್ಲಿ ಅಮಿತ್ - ಕರಿಬಸಪ್ಪ ಅವರ ಆಟ ಒಂದೇ ವಾರಕ್ಕೆ ಮುಕ್ತಾಯವಾಗಿದೆ ಅನ್ನೋ ಮೂಲಕ ಸುದೀಪ್ ಔಟ್ ಆಗಿರುವ ಸ್ಪರ್ಧಿಗಳ ಹೆಸರನ್ನು ಘೋಷಿಸಿದರು.
ಜಂಟಿ ವರ್ಸಸ್ ಒಂಟಿ ಟಾಸ್ಕ್‌ನಲ್ಲಿ ಅಮಿತ್ ಮತ್ತು ಕರಿಬಸಪ್ಪ ಜಂಟಿಯಾಗಿ ಬಿಗ್​ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ವಾರಪೂರ್ತಿ ಇಬ್ಬರು ಒಟ್ಟಿಗೆ ಇದ್ದರು. ಅವರಿಬ್ಬರನ್ನು ದಾರದಿಂದ ಜಂಟಿ ಮಾಡಲಾಗಿತ್ತು. ಇದೀಗ ಅವರನ್ನು ಎಲಿಮಿನೇಟ್ ಮಾಡಲಾಗಿದ್ದು, ಇಬ್ಬರು ಆಚೆ ಬಂದಿದ್ದಾರೆ.
ಇದನ್ನೂ ಓದಿ:RJ ಅಮಿತ್​ಗೆ ಮಾತಲ್ಲೇ ಚಾಟಿ ಏಟು ಕೊಟ್ಟ ಕಿಚ್ಚ ಸುದೀಪ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ