/newsfirstlive-kannada/media/media_files/2025/10/05/rj-amit-2025-10-05-13-39-38.jpg)
ಕಿಚ್ಚನ ಪಂಚಾಯ್ತಿಯಲ್ಲಿ RJ ಅಮಿತ್​​ಗೆ ಸುದೀಪ್ ಅವರು ಮಾತಿನ ಬಾಣ ಎಸೆದಿದ್ದಾರೆ. ಈ ಹಿಂದೆ ಬಿಗ್​ಬಾಸ್ ಶೋ ಟೀಕಿಸಿದ್ದ ಅಮಿತ್, ಬಿಗ್ ಬಾಸ್ ಎನ್ನೋದು cringe show ಎಂದಿದ್ದರು. ಅಮಿತ್ ಹೇಳಿಕೆಯನ್ನು ಸುದೀಪ್ ಮತ್ತೆ ಪ್ರಸ್ತಾಪಿಸಿ, ಟಾಂಗ್ ನೀಡಿದ್ದಾರೆ.
ಸುದೀಪ್ ಮತ್ತು ಅಮಿತ್ ನಡುವಿನ ಸಂಭಾಷಣೆ
ಸುದೀಪ್ ಅವರು ಆರಂಭದಲ್ಲಿ ಚಂದ್ರಪ್ರಭ ಮತ್ತು ಡಾಗ್ ಸತೀಶ್​ಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು. ನಂತರ ಆರ್​ಜೆ ಅಮಿತ್​ ಬಳಿಗೆ ಬರುತ್ತಾರೆ. ಈ ವೇಳೆ ಅಮಿತ್.. ಹುಡುಗಿ ಚೆನ್ನಾಗಿದ್ದಾಳೆ, ಈ ಹುಡುಗಿ ಕ್ಯೂಟ್ ಇದ್ದಾಳೆ ಅಂತ ಅನಿಸುತ್ತೆ ಅಂದರೆ ಆಮೇಲೆ ನೀತಿ ಪಾಠ ಹೇಳ್ತಾರೆ. ಐದು ನಿಮಿಷಕ್ಕೆ ನನಗೆ ಮೋಟಿವೇಶನಲ್ ಪಾಠ ಸಿಗತ್ತದೆ ಎನ್ನುತ್ತ ನಕ್ಕರು.
ಅದಕ್ಕೆ ತಿರುಗೇಟು ಕೊಟ್ಟ ಸುದೀಪ್, ಕಳ್ಳ ಬಯಸಿದ್ದು ಸಿಗುತ್ತೆ. Cringe show with least IQ. ನಾನು ನಿಮಗೆ ಇನ್‌ಸ್ಟಾ ಕರ್ಮ, ಇನ್‌ಸ್ಟಂಟ್ ಕರ್ಮ ಅಂತ ಅಂದು ವೇದಿಕೆ ಮೇಲೆ ಹೇಳಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸುವ ಅಮಿತ್, ನನಗೆ ಬಿತ್ತು, ಅರ್ಥ ಆಯ್ತು ಸರ್ ಎನ್ನುತ್ತಾರೆ.
ಇದನ್ನೂ ಓದಿ:ಸ್ಪರ್ಧಿಗಳ ಕಿವಿ ಹಿಂಡುತ್ತಲೇ ಕನ್ನಡಿಗರಿಗೆ ಕಿಚ್ಚನ ಚಪ್ಪಾಳೆ.. ಸುದೀಪ್ ಕೊಟ್ಟ ಕಾರಣ ಏನು?
ಅದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟ ಸುದೀಪ್, ಬಿಗ್​ಬಾಸ್​ ಮನೆಯಲ್ಲಿ ನೀವು ಅರ್ಥ ಮಾಡಿಸೋದು ತುಂಬ ಇದೆ. ನನಗಂತೂ ತುಂಬ ಖುಷಿ ಆಯ್ತು. ವೇದಿಕೆ ಮೇಲಿದ್ದಾಗ ನಾನು ದೇವರಿದ್ದರೆ ತೋರಿಸು ಅಂತ ಹೇಳುತ್ತಿದ್ದೆ. ಅದೀಗ ನಿಜವಾಯ್ತು. ವೆಲ್​​ಕಮ್ ಟು ಕ್ರಿಂಜ್ ಶೋ ವಿಥ್ ಲೀಸ್ಟ್ ಐಕ್ಯೂ ಕಾಲ್ಡ್​ ಬಿಗ್​ಬಾಸ್ ಅಂದ್ರು.
ಆಗ ಅಮಿತ್, ನಾನು ಬಿಗ್​ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದೀನಿ, ನಾನು ಕೂಡ ಕ್ರಿಂಜ್ ಅಭ್ಯರ್ಥಿ ಎಂದಾಗ ನೀವು ಈಗ ಬಿಗ್ ಬಾಸ್ ಅಭ್ಯರ್ಥಿ ಅಂತಾ ಸುದೀಪ್ ಹೇಳಿದ್ದಾರೆ. ಬಿಗ್​ಬಾಸ್​ ಗ್ರ್ಯಾಂಡ್ ಓಪನಿಂಗ್ ದಿನ ಅಮಿತ್ ಹೇಳಿಕೆಯನ್ನು ಸುದೀಪ್ ಪ್ರಸ್ತಾಪ ಮಾಡಿದ್ದರು. ಆಗ ಅಮಿತ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಡ್ರಾಮಾ ಮಾಡೋದು ಸೀರಿಯಲ್‌ನವರ ಕೆಲಸ ಎನ್ನುತ್ತಲೇ ಬಿಗ್​ಬಾಸ್ ಮನೆಯೊಳಗೆ ಕಾಲಿಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ