/newsfirstlive-kannada/media/media_files/2025/10/05/kiccha-sudeep-2025-10-05-08-11-03.jpg)
ಬಿಗ್​ಬಾಸ್​ ಕನ್ನಡ ಸೀಸನ್​​ 12ರ ಮೊದಲ ಕಿಚ್ಚನ ಪಂಚಾಯ್ತಿ ನಿನ್ನೆ ನಡೆಯಿತು. ಈ ವೇಳೆ ಸುದೀಪ್, ವಾರದ ಕಿಚ್ಚನ ಚಪ್ಪಾಳೆಯನ್ನು ಕನ್ನಡಿಗರಿಗೆ ನೀಡಿದರು.
ಮೊದಲ ವಾರದ ಮೊದಲ ಕಿಚ್ಚನ ಚಪ್ಪಾಳೆಯನ್ನು ಸ್ಪರ್ಧಿಗಳಿಗೆ ನೀಡಲು ಸುದೀಪ್ ನಿರಾಕರಿಸಿದರು. ಅದಕ್ಕೆ ಕಾರಣವನ್ನೂ ನೀಡಿದ ಅವರು, ಬಿಗ್​​ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಕಾರ್ಯಕ್ರಮದ ವೀಕ್ಷಣೆಗೆ ರಾಜ್ಯದ ವಿವಿಧ ಮೂಲೆಗಳಿಂದ ಕೆಲವು ಸದಸ್ಯರನ್ನು ಆಯ್ಕೆ ಮಾಡಿ ಕರೆಸಲಾಗಿತ್ತು. ಹೀಗೆ ಆಯ್ಕೆ ಆದ ಸದಸ್ಯರುಗಳು ಯಾವ ಸ್ಪರ್ಧಿ ಒಂಟಿಯಾಗಿ ಹೋಗಬೇಕು, ಯಾರು ಜಂಟಿಯಾಗಿ ಹೋಗಬೇಕು ಎಂದು ಓಟು ಹಾಕಿದ್ದರು. ಅವರು ಪ್ರತಿಯೊಬ್ಬ ಸ್ಪರ್ಧಿಯ ಮಾತು ಕೇಳಿ, ವರ್ತನೆ ನೋಡಿ ಅವರುಗಳು ಒಂಟಿ-ಜಂಟಿ ಎಂದು ಮತ ಹಾಕಿದ್ದರು. ಅಂದು ಓಟು ಹಾಕಿದವರು, ಸರಿಯಾಗಿ ಅಳೆದು-ತೂಗಿ ಮತ ಹಾಕಿದ್ದರು. ಅಂದು ಮತ ಹಾಕಿದವರಿಗೆ ಅಂದರೆ ಕರ್ನಾಟಕವನ್ನು ಪ್ರತಿನಿಧಿಸಿದವರಿಗೆ ನನ್ನ ಚಪ್ಪಾಳೆ ಎಂದಿದ್ದಾರೆ.
ಚಪ್ಪಾಳೆ ನೀಡುವ ವೇಳೆ ಸ್ಪರ್ಧಿಗಳ ಕಿವಿ ಹಿಂಡೋದನ್ನೂ ಸುದೀಪ್ ಮರೆಯಲಿಲ್ಲ. ಅವತ್ತು ಇಲ್ಲಿ 12 ಜನರನ್ನು ಒಂಟಿಯಾಗಿರೋಕ್ಕೆ ಲಾಯಕ್ಕಲ್ಲ ಎಂದು ಆಯ್ಕೆ ಮಾಡಿದ್ದಾರೆ. ಈ ವಾರವೆಲ್ಲ ನೋಡಿದ ಮೇಲೆ ನನಗೆ ಅನಿಸಿದ್ದು, ಅವರ ತೀರ್ಪು ಎಷ್ಟು ಕರೆಕ್ಟ್ ಇದೆ ಅಂತಾ. ಈ ವಾರ ಕಿಚ್ಚನ ಚಪ್ಪಾಳೆ ಅವತ್ತು ಇಲ್ಲಿಗೆ ಬಂದವರಿಗೆ ನಿಮ್ಮ ಕಿಚ್ಚನ ಚಪ್ಪಾಳೆ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ! ಒಂದೇ ವಾರದಲ್ಲಿ ಮತ್ತೆ ರೀಎಂಟ್ರಿ!
ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
— Colors Kannada (@ColorsKannada) October 4, 2025
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKPromopic.twitter.com/IqPrftcYHM
ಬಿಗ್​ಬಾಸ್​ ಮನೆಯಲ್ಲಿ ಯಾರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಾರೋ, ಯಾರು ಒಳ್ಳೆಯ ವ್ಯಕ್ತಿತ್ವ ಪ್ರದರ್ಶಿಸುತ್ತಾರೆಯೋ, ಯಾರು ಚೆನ್ನಾಗಿ ಆಡಿರುತ್ತಾರೋ ಅಂದರೆ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಯ ನಡವಳಿಕೆ, ಕೆಲಸ, ಆಟ, ತೆಗೆದುಕೊಳ್ಳುವ ನಿರ್ಧಾರ, ವ್ಯಕ್ತಿತ್ವ ಎಲ್ಲವನ್ನೂ ಅಳೆದು ತೂಗಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡುತ್ತಾರೆ. ಕಿಚ್ಚನ ಚಪ್ಪಾಳೆ ಪಡೆದವರ ಫೋಟೊವನ್ನು ಗೋಡೆಯ ಮೇಲೆ ಹಾಕಲಾಗುತ್ತದೆ.
ಇದನ್ನೂ ಓದಿ:BBK12; ಅಭಿಷೇಕ್‌ಗೆ ಆಯ್ಕೆ ಇಲ್ಲ, ಆಂಟಿ ಲವರ್.. ಜಾಹ್ನವಿ ಹೇಳಿರುವುದು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ