/newsfirstlive-kannada/media/media_files/2025/10/05/kiccha-sudeep-1-2025-10-05-10-38-24.jpg)
ಹಾಗೂ ಡಾಗ್ ಸತೀಶ್ ಜೋಡಿ ವೀಕ್ಷಕರನ್ನ ಸಖತ್ ರಂಜಿಸ್ತಿದೆ. ನಿನ್ನೆ ಪ್ರಸಾರವಾದ ಕಿಚ್ಚನ ಪಂಚಾಯ್ತಿಯಲ್ಲಿ ಈ ಜೋಡಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡಿದೆ.
ಆರಂಭದಲ್ಲೇ ಕಿಚ್ಚ ಸುದೀಪ್ ಅವರು ಸತೀಶರ್​ರನ್ನು ಮಾತನ್ನಾಡಿಸಿದರು. ಈ ವೇಳೆ ತಮ್ಮ ಪಾರ್ಟ್ನರ್​ ಚಂದ್ರಪ್ರಭ ನನಗೆ ತುಂಬಾ ಇಷ್ಟ. ಆದರೆ ಅವರಿಗೆ ನಾನು ಇಷ್ಟ ಆಗ್ತಿಲ್ಲ ಎಂದರು. ಆಗ ಮಾತಿಗಿಳಿದ ಚಂದ್ರಪ್ರಭ. ಹೌದು, ಸರ್ ನನಗೆ ಸ್ವಲ್ಪ ಕಷ್ಟ ಆಗ್ತಿದೆ. ಒಂದು ವಾರ ಬಾತ್​ ರೂಮ್​ನಲ್ಲೇ ಕಳೆದುಬಿಟ್ಟೆ. ಬೆಳಗ್ಗೆ ಎದ್ದಾಗ ಸುಮಾರು 2.5 ಗಂಟೆ ಕಾಲ ಬಾತ್​ರೂಮ್​ನಲ್ಲೇ ಇರುತ್ತಾರೆ. ತಲೆಗೆ ಮೂರು ರೀತಿಯ ಶಾಂಪೂಗಳನ್ನು ಬಳಸ್ತಾರೆ. ಮುಖಕ್ಕೆ ಮೂರು ಫೇಸ್​ವಾಷ್ ಹಾಕ್ತಾರೆ. ಹಲ್ಲುಗಳನ್ನು ಉಜ್ಜೋದು ಕೂಡ ಅಷ್ಟೇ. ನಾಲಿಗೆಗೆ ಏನೋ ಹಾಕಿ ತಿಕ್ಕುತ್ತಾರೆ. ಅದೆಲ್ಲ ಆದ್ಮೇಲೆ ಮುಖಕ್ಕೆ ಏನೇನೋ ಹಚ್ಚುತ್ತಾರೆ. ನಂತರ ಅಲ್ಲಿಂದ ಕೈತೊಳೆಯಲು ಓಡಬೇಕು. ಪುನಃ ಬಂದು ಲಿಪ್​ಸ್ಟಿಕ್ ಹಚ್ಚುತ್ತಾರೆ. ಮೇಲಿನ ತುಟಿಗೊಂದು, ಕೆಳಗಿನ ತುಟಿಗೊಂದು ಲಿಪ್​ಸ್ಟಿಕ್ ಅಂಟಿಸಿಕೊಳ್ತಾರೆ. ಅದಕ್ಕೂ ಅವರ ಬಳಿ ಕಾಸ್ಟ್ಯೂಮ್​ಗೆ ಒಂದೊಂದು ಕಲರ್ ಇದೆ ಎಂದಿದ್ದಾರೆ.
ಇದನ್ನೂ ಓದಿ:ಸ್ಪರ್ಧಿಗಳ ಕಿವಿ ಹಿಂಡುತ್ತಲೇ ಕನ್ನಡಿಗರಿಗೆ ಕಿಚ್ಚನ ಚಪ್ಪಾಳೆ.. ಸುದೀಪ್ ಕೊಟ್ಟ ಕಾರಣ ಏನು?
ಅದಕ್ಕೆ ಪ್ರತಿಕ್ರಿಯಿಸುವ ಸುದೀಪ್, ಹಾಗಿದ್ದರೆ ನೀವು ಒಂದು ವಾರ ಸತೀಶ್ ಸುತ್ತ ಕಳೆದ್ರಿ ಅಂತಾ ಪ್ರಶ್ನೆ ಮಾಡ್ತಾರೆ. ಅದಕ್ಕೆ ಚಂದ್ರಪ್ರಭ, ಹೌದು, ಸತೀಶ್ ಸುತ್ತ, ಬಾತ್​ ರೂಮ್ ಸುತ್ತ ಕಳೆದುಬಿಟ್ಟೆ ಅಂತಾ ಸಾಲು ಸಾಲು ದೂರು ನೀಡ್ತಾರೆ.
ಆಗ ಕಿಚ್ಚ ಸುದೀಪ್.. ಅವರು ನಿಮಗೆ ಜಂಟಿಯಾಗಿ ಸಿಗೋದಕ್ಕೆ ಕಾರಣ ನೀವೇ. ಆವತ್ತು ಜಂಟಿಯಾಗೋದಕ್ಕೆ ಒಂದು ಅವಕಾಶ ಕೊಟ್ಟೆ. ನಿಮಗೆ ಅವತ್ತೇ ನಾನು ಹೇಳಿದೆ. ಈ ಅಮೀರ್ ಖಾನ್ ಓಕೆನಾ ಎಂದು. ಯಾರಾದರೂ ಮುಂದೆ ಬರುತ್ತಾರೆ, ಬೇಕಿದ್ದರೆ ವೇಟ್ ಮಾಡಿ ಎಂದೆ. ನಿಮಗೆ ಕಾಯಲು ತಾಳ್ಮೆ ಇರಲಿಲ್ಲ. ಅದಕ್ಕೆ ನೀವು ಹೇಳಿದ್ರಿ ನಾನು ಶಾರೂಖ್ ಖಾನ್, ನನಗೆ ಅಮೀರ್ ಖಾನ್ ಓಕೆ ಎಂದ್ರಿ. ನೀವೇ ಇಷ್ಟಪಟ್ಟು ಅವರನ್ನು ಸ್ವೀಕರಿಸಿದ್ದೀರಿ. ಅವತ್ತು ನಿಮಗೆ ಮೂರು ಕಾಸು ಟೈಂ ಇರಲಿಲ್ಲ. ಇವತ್ತು ನೀವೇ ನೋಡ್ಕೊಳ್ಳಿ ಎಂದಿದ್ದಾರೆ. ಸತೀಶ್ ಅವರೇ ನಿಮಗೆ ಇಷ್ಟ ಬಂದ ಹಾಗೆ ಮನೆಯಲ್ಲಿ ಇರಿ ಎಂದು ಸುದೀಪ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವ ಸತೀಶ್, ಇಲ್ಲ ಸರ್. ಅವರು ನನಗೆ ಬೈಯ್ತಾರೆ ಎಂದಿದ್ದಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಅವರು ನಿಮಗೆ ಇಷ್ಟಪಟ್ಟು ತಾಳಿ ಕಟ್ಟಿದ್ದಾರೆ ಎಂದು ಸುದೀಪ್ ಕಾಲೆಳೆದಿದ್ದಾರೆ.
ಇದನ್ನೂ ಓದಿ: BBK12; ಅಭಿಷೇಕ್‌ಗೆ ಆಯ್ಕೆ ಇಲ್ಲ, ಆಂಟಿ ಲವರ್.. ಜಾಹ್ನವಿ ಹೇಳಿರುವುದು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ