/newsfirstlive-kannada/media/media_files/2025/10/06/bigg-boss-6-2025-10-06-13-24-50.jpg)
ಟೀಮ್​ ಇಂಡಿಯಾ ವೇಗಿ ದೀಪಕ್​ ಚಹರ್​, ಸಲ್ಮಾನ್​ ಖಾನ್ (Deepak Chahar and Salman Khan)​ ಜೊತೆಗೆ ಬಿಗ್​ ಬಾಸ್​ (Bigg Boss Hindi)​ ವೇದಿಕೆ ಹಂಚಿಕೊಂಡಿದ್ದಾರೆ. ಈ ವಾರದ ಹಿಂದಿ ಬಿಗ್​ಬಾಸ್​ನ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ದೀಪಕ್​​ ಚಹರ್​​ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ವೇದಿಕೆಯಲ್ಲಿ ಸಲ್ಮಾನ್​ ಖಾನ್​ ಜೊತೆಗೆ ಕ್ರಿಕೆಟ್​ ಕೂಡ ಆಡಿದ್ದಾರೆ. ದೀಪಕ್​ ಚಹರ್​ ಸಹೋದರಿ ಮಾಲತಿ ಚಹರ್​, ವೈಲ್ಡ್​ ಕಾರ್ಡ್​ ಎಂಟ್ರಿಯಾಗಿ ಬಿಗ್​ಬಾಸ್​ಗೆ ಪ್ರವೇಶ ಮಾಡಿದ್ದಾರೆ.
ತಮ್ಮ ಸಹೋದರಿ ಮಾಲತಿಯನ್ನು ಬಿಗ್​ಬಾಸ್ ವೀಕ್ಷಕರಿಗೆ ಪರಿಚಯ ಮಾಡಿಕೊಡಲು ಸ್ವತಃ ದೀಪಕ್ ಚಹಾರ್ ಅವರೇ ವೇದಿಕೆಗೆ ಎಂಟ್ರಿಕೊಟ್ಟರು. ಸಲ್ಮಾನ್ ಖಾನ್ ಜೊತೆ ವೇದಿಕೆ ಹಂಚಿಕೊಂಡ ಚಹರ್, ತಮ್ಮ ಸಹೋದರಿ ನಮ್ಮ ಮನೆಯ ರಿಯಲ್ ಫೈಟರ್ ಎಂದು ಬಣ್ಣಿಸಿದರು. ಮಾಲತಿ ಚಹರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಬಿಗ್​ ಬಾಸ್​ನಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಅಂತಾ ಕಾದು ನೋಡಬೇಕಿದೆ.
ಇದನ್ನೂ ಓದಿ:ಕರಿಬಸಪ್ಪ ಕೊಟ್ಟ ಕ್ವಾಟ್ಲೆಗೆ ಕಿಚ್ಚ ಸುಸ್ತು.. ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕ ಸುದೀಪ್ ಮತ್ತು ವೀಕ್ಷಕರು..!
ನವೆಂಬರ್ 15, 1990ರಲ್ಲಿ ಮಾಲತಿ ಚಹಾರ್​ ಆಗ್ರದಲ್ಲಿ ಜನಿಸಿದರು. ಇವರ ಕುಟುಂಬ ಕ್ರಿಕೆಟ್​​ ಜೊತೆ ನಂಟು ಹೊಂದಿದೆ. ಇವರ ಕುಟುಂಬಕ್ಕೆ ಕ್ರಿಕೆಟ್ ಕೇವಲ ಒಂದು ಆಟವಲ್ಲ. ಅದು ಅವರ ಜೀವನ ಶೈಲಿಯಾಗಿದೆ. ದೀಪಕ್ ಚಹಾರ್​​ನಂತೆ ಅವರ ಕಸಿನ್ ಸಹೋದರ ರಾಹುಲ್ ಚಹಾರ್ ಕೂಡ ಟೀಂ ಇಂಡಿಯಾದ ಆಟಗಾರ.
ಆದರೆ ಮಾಲತಿ ಅವರ ಬದುಕಿನ ಜರ್ನಿ ಸ್ವಲ್ಪ ಭಿನ್ನವಾಗಿದೆ. ಅವರು ಬದುಕಿಗೆ ತಮ್ಮದೇಯಾದ ದಾರಿಯನ್ನು ಕಂಡುಕೊಂಡಿದ್ದಾರೆ. ಮಾಡಲಿಂಗ್ ಹಾಗೂ ಸೌಂದರ್ಯ ಸ್ಪರ್ಧೆಗಳತ್ತೆ ಹೆಚ್ಚು ಒಲವು ನೀಡಿರುವ ಅವರು, 2009ರಲ್ಲಿ Miss India Earth ಸ್ಪರ್ಧೆಯಲ್ಲಿ ಗೆದ್ದು ಕಿರೀಟ ತೊಟ್ಟವರು. 2014ರಲ್ಲಿ ನಡೆದ Femina Miss India Delhi-2014 ಸ್ಪರ್ಧೆಯಲ್ಲೂ ಗೆದ್ದಿದ್ದಾರೆ. ಅಲ್ಲದೇ 2018ರಲ್ಲಿ ತೆರೆಕಂಡ ಬಾಲಿವುಡ್​ ಜೀನಿಯಸ್​ ಚಿತ್ರದಲ್ಲೂ ನಟಿಸಿದ್ದಾರೆ. ಇದು ಅವರ ಮೊದಲ ಚಿತ್ರವಾಗಿದೆ.
ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಜಾಹ್ನವಿ ಜೊತೆ ಕೈ ಜೋಡಿಸಿದ ಅಶ್ವಿನಿ..! VIDEO
DEEPAK CHAHAR IN BIG BOSS. 🤯
— Mufaddal Vohra (@mufaddal_vohra) October 5, 2025
pic.twitter.com/fp0WSzr8CK
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ