/newsfirstlive-kannada/media/media_files/2026/01/12/rashik-shetty-2026-01-12-08-22-23.jpg)
ಬಿಗ್​ ಬಾಸ್​ ಮನೆಯಿಂದ ರಾಶಿಕಾ ಶೆಟ್ಟಿ (Rashika Shetty) ಬೇಸರದಲ್ಲಿ ಹೊರಬಂದಿದ್ದಾರೆ. ಫಿನಾಲೆಗೂ ಒಂದು ವಾರವಷ್ಟೇ ಭಾಕಿ ಇರುವಾಗ ಮನೆಯಿಂದ ಹೊರ ಬಂದಿರೋದು ಅಭಿಮಾನಿಗಳಿಗೆ ಭಾರೀ ಬೇಸರ ಮೂಡಿಸಿದೆ.
ನಿನ್ನೆ ಬಿಗ್​​ಬಾಸ್ ಕನ್ನಡ ಸೀಸನ್ 12ರ ಕೊನೆಯ ವೀಕೆಂಡ್ ಎಪಿಸೋಡ್ ನಡೆಯಿತು. ನಿಯಮದಂತೆ ಮನೆಯಿಂದ ಒಬ್ಬರು ಹೊರಗೆ ಹೋಗಲೇ ಬೇಕಿತ್ತು. ಮನೆಯಲ್ಲಿದ್ದ 8 ಮಂದಿಯಲ್ಲಿ ಶನಿವಾರದ ಸಂಚಿಕೆಯಲ್ಲಿ ಕ್ಯಾಪ್ಟನ್ ಧನುಷ್ ಹೊರತುಪಡಿಸಿ, ಅಶ್ವಿನಿ ಗೌಡ ಸೇವ್ ಆಗಿದ್ದರು. ಉಳಿದ ಆರು ಸ್ಪರ್ಧಿಗಳಲ್ಲಿ ಕಿಚ್ಚ ಸುದೀಪ್ ಒಬ್ಬೊಬ್ಬರನ್ನೇ ಸೇವ್ ಮಾಡುತ್ತ ಬಂದರು. ಕೊನೆಯಲ್ಲಿ ರಘು ಮತ್ತು ರಾಶಿಕಾ ಶೆಟ್ಟಿ ಉಳಿದುಕೊಂಡಿದ್ದರು. ಅಂತಿಮವಾಗಿ ರಾಶಿಕಾ ಶೆಟ್ಟಿ ಎಲಿಮಿನೇಟ್ ಆದರು.
ಇದನ್ನೂ ಓದಿ:ಅಘನಾಶಿನಿ-ಬೇಡ್ತಿ ಪ್ರಾಜೆಕ್ಟ್ ಖಂಡಿಸಿ ಬೃಹತ್ ಪ್ರತಿಭಟನೆ.. ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್..!
/filters:format(webp)/newsfirstlive-kannada/media/media_files/2025/10/28/rashika-shetty-2025-10-28-22-24-00.jpg)
ರಾಶಿಕಾ ಶೆಟ್ಟಿ ಚೆನ್ನಾಗಿಯೇ ಆಡಿದ್ದರು. ಜೊತೆಗೆ ವೀಕ್ಷಕರನ್ನೂ ರಂಚಿಸುವಲ್ಲಿ ಯಶಸ್ವಿಯಾಗಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಬೆನ್ನಲ್ಲೇ ವೇದಿಕೆ ಮೇಲೆ ಸುದೀಪ್ ಜೊತೆ ಮಾತನ್ನಾಡಿರುವ ಅವರು, ಬಿಗ್​​ಬಾಸ್​ಗೆ ಬಂದಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಒಳ್ಳೆಯ ನಿರ್ಧಾರ. ನಾನು ಇಷ್ಟು ಧೈರ್ಯವಂತೆ ಎಂಬುದು ಇಲ್ಲಿಗೆ ಬರುವವರೆಗೆ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎನ್ನುವುದು ಗೊತ್ತಾಯಿತು. ಅಪ್ಪನ ಧ್ವನಿಯ ಬಳಿಕ ನಾನು ಹೆದರಿರುವುದು ಬಿಗ್​​ಬಾಸ್ ಧ್ವನಿಗೆ ಮಾತ್ರ ಎಂದರು.
ಸದ್ಯ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಉಳಿದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ಮಿಡ್​​ನೈಟ್​ ಎಲಿಮಿನೇಷನ್ ಮೂಲಕ ಹೊರ ಹೋಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ವೋಟಿಂಗ್ ಲೈನ್​​ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us