/newsfirstlive-kannada/media/media_files/2025/10/28/rashika-shetty-2025-10-28-22-24-00.jpg)
ಬಿಗ್​ಬಾಸ್​ ಮನೆಯ ಬಿಬಿ ಕಾಲೇಜು ಕ್ಯಾಂಪಸ್​ನಲ್ಲಿ ಚರ್ಚಾ ಸ್ಪರ್ಧೆ ನಡೆದಿತ್ತು. ಬಿಗ್​ಬಾಸ್ ಮನೆಯಲ್ಲಿ ಮುಂದುವರಿಯಲು ನಾನ್ಯಾಕೆ ಅರ್ಹ ಎಂಬ ವಿಷಯದ ಕುರಿತ ಚರ್ಚೆಯ ಫಲಿತಾಂಶ ಇವತ್ತು ಸ್ಪರ್ಧಿಗಳ ಮುಂದೆ ಪ್ರಕಟವಾಗಿದೆ.
ಈ ಫಲಿತಾಂಶ ಇಟ್ಟುಕೊಂಡು ಪ್ರಿನ್ಸಿಪಾಲ್, ಸೋತ ಅಭ್ಯರ್ಥಿಗಳ ಮನೆಯವರ ಜೊತೆ ಮಾತನ್ನಾಡಲು ಫೋನ್ ಕಾಲ್ ತೆಗೆದುಕೊಂಡಿದ್ದರು. ಈ ವೇಳೆ ಸೋತ ಅಭ್ಯರ್ಥಿಗಳಿಗೆ ಸ್ಫೂರ್ತಿ ತುಂಬುವ ಪ್ರಯತ್ನ ನಡೆದಿತ್ತು. ಅಂತೆಯೇ ಸೋತ ಸ್ಪರ್ಧಿ ರಾಶಿಕಾ ಶೆಟ್ಟಿ ಅವರ ತಮ್ಮನಿಗೆ ಪ್ರಿನ್ಸಿ ರಘು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದರು. ಈ ವೇಳೆ ರಾಶಿಕಾ ಶೆಟ್ಟಿ ಅವರ ತಮ್ಮ ಲಿಖಿತ್ ಕೊಟ್ಟ ಕೌಂಟರ್​ಗೆ ರಘು ಗಪ್​ಚುಪ್ ಆದರು.
ಏನ್ ಹೇಳಿದರು ಲಿಖಿತ್..?
ನೀವು (ರಘು) ಹೇಳಿದ ಪ್ರಕಾರ ವೈಯಕ್ತಿಕವಾಗಿ ಪ್ರದರ್ಶನ ನೀಡಿಲ್ಲ ಅಂತಾ. ಹಾಗೆ ನೋಡಿದ್ರೆ ಕಳೆದ ವಾರ ಫೈನಲಿಸ್ಟ್ ಆಗಿರೋದು ಆಕೆ ಒಬ್ಬಳೇ ಆಡಿ. ಅದು ವೈಯಕ್ತಿಕ ಪ್ರದರ್ಶನ ಅಲ್ಲವಾ? ಮನೆಯಲ್ಲಿ ಇರೋರಲ್ಲಿ ಪ್ರತಿಯೊಬ್ಬರು ಅವರಿಗೆ ಹತ್ತಿರ ಆಗಿರೋರ ಜೊತೆ ಮಾತುಕತೆ ಆಡುತ್ತಾರೆ. ಅದು ಅವರ ವಯಕ್ತಿಕ. ಹಾಗಂದ ಮಾತ್ರಕ್ಕೆ ನನ್ನ ಅಕ್ಕ ಎಲ್ಲಿಯೂ ಕಳೆದು ಹೋಗಿಲ್ಲ. ಅದಕ್ಕೆ ನೀವು ಬೇರೆ ಅರ್ಥ ಕಲ್ಪಿಸೋದು ಬೇಕಾಗಿಲ್ಲ. ಅವಳು ತುಂಬಾನೇ ಚೆನ್ನಾಗಿ ಆಡುತ್ತಿದ್ದಾಳೆ. ಅವಳ ಬಗ್ಗೆ ನಮಗೆ ಖುಷಿ ಇದೆ. ಅವಳು ಎಲ್ಲಿ ಸ್ಟ್ಯಾಂಡ್ ತೆಗೆದುಕೊಳ್ಳಬೇಕೋ, ಅಲ್ಲಿ ತೆಗೆದುಕೊಂಡಿದ್ದಾಳೆ. ನಮಗೆ ತುಂಬಾ ಕಾನ್ಫಿಡೆಂಟ್ ಇದೆ. ಆಕೆ ಚೆನ್ನಾಗಿ ಆಡಿ ಗೆಲ್ಲುತ್ತಾಳೆ ಎಂದು ಅಂತಾ ಸಮರ್ಥಿಸಿಕೊಂಡಿದ್ದಾರೆ. ಲಿಖಿತ್ ಮಾತು ಕೇಳಿದ ಪ್ರಿನ್ಸಿಪಾಲ್ ಗಪ್​ಚುಪ್ ಆಗಿದ್ದಾರೆ.
ಇದನ್ನೂ ಓದಿ: ಪಾರು ಸುಂದರಿ ಮೋಕ್ಷಿ ಸಖತ್ ಕ್ಯೂಟ್.. ‘​ಅರ್ಥ ಆಯ್ತಾ..’ ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us