/newsfirstlive-kannada/media/media_files/2025/08/23/yash-gowda-2025-08-23-18-56-19.jpg)
ಕನ್ನಡ ಕಿರುತೆರೆಯ ಮೋಸ್ಟ್​ ಹ್ಯಾಂಡ್ಸಮ್ ನಟರಲ್ಲಿ ಕನ್ಯಾಕುಮಾರಿ ಧಾರಾವಾಹಿಯ ನಾಯಕ ನಟ ಕೂಡ ಒಬ್ಬರು. ಕನ್ಯಾಕುಮಾರಿ ಮೂಲಕ ಫೇಮಸ್​ ಆಗಿದ್ದ ನಟ ಯಶವಂತ್​ ಗೌಡ ಅವರು ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್​ಬಾಸ್​ ಖ್ಯಾತಿಯ ಧನರಾಜ್ ಆಚಾರ್ ದಂಪತಿ
/filters:format(webp)/newsfirstlive-kannada/media/media_files/2025/08/23/yash-gowda1-2025-08-23-19-39-49.jpg)
ಆದ್ರೆ, ಇದರ ಮಧ್ಯೆ ನಟ ಯಶವಂತ್​ ಗೌಡ ಅವರ ತಲೆಗೆ ಪೆಟ್ಟು ಬಿದ್ದಿದೆ. ಹೌದು, ವರಮಹಾಲಕ್ಷ್ಮಿ ಹಬ್ಬದ ದಿನವೇ ನಟ ಯಶವಂತ್​ ಗೌಡ ತಲೆಗೆ ಪೆಟ್ಟು ಬಿದ್ದಿದೆ. ನಟ ಯಶವಂತ್​ ಗೌಡ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಏಕಾಏಕಿ ಕೇಬಲ್​ ಟ್ರೈಸೆಪ್ಸ್ ಕಳಚಿ ತಲೆ ಮೇಲೆ ಬಿದ್ದಿದೆ. ಪರಿಣಾಮ ತಲೆಗೆ ನಾಲ್ಕು ಸುತ್ತು ಸ್ಟಿಚ್ ಹಾಕಲಾಗಿದೆ. ಈ ವಿಚಾರವನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್​ಯಲ್ಲಿ ವಿಡಿಯೋ ಸಮೇತ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವವರಿಗೆ ಸಲಹೆ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/yashwanth1.jpg)
ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡ ನಟ, ‘‘ದುರದೃಷ್ಟಕರ ಜಿಮ್‌ನಲ್ಲಿ ನನಗೆ ಗಾಯವಾಯಿತು. ನಮ್ಮ ಸುರಕ್ಷತೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಯವಿಟ್ಟು ಜಿಮ್​ನಲ್ಲಿ ಉಪಕರಣಗಳನ್ನು ಬಳಕೆ ಮಾಡುವಾಗ, ಸ್ಪಾಟರ್‌ಗಳ ಬಗ್ಗೆ ಜಾಗರೂಕರಾಗಿ ಇರಿ. ಇಲ್ಲವಾದರೇ ಅಪಘಾತಗಳು ಸಂಭವಿಸುತ್ತವೆ. ನಾವೆಲ್ಲರೂ ಸೆಟಪ್ ಅನ್ನು ಪರಿಶೀಲಿಸಿ ಜಿಮ್​​ ಮಾಡಬೇಕು’’ ಎಂದಿದ್ದಾರೆ.
/filters:format(webp)/newsfirstlive-kannada/media/media_files/2025/08/23/yash-gowda2-2025-08-23-20-09-15.jpg)
ಇನ್ನೂ, ಈ ವಿಚಾರ ತಿಳಿದ ಕೂಡಲೇ ನ್ಯೂಸ್​ ಫಸ್ಟ್​ ನಟ ಯಶವಂತ್​ ಗೌಡ ಅವರನ್ನು ಸಂಪರ್ಕಿಸಿದ್ದೇವೆ. ಆಗ ಮಾತಾಡಿದ ನಟ, ಈಗ ನಾನು ಆರಾಮವಾಗಿದ್ದೇನೆ. ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಈ ಘಟನೆ ನಡೆದಿದೆ ಎಂದು ವಿವರಿಸಿದ್ದಾರೆ. ಕನ್ಯಾಕುಮಾರಿ ಧಾರಾವಾಹಿಯ ಮುಕ್ತಾಯದ ಬಳಿಕ ಕನ್ನಡ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟ ಪರಭಾಷೆಗಳಲ್ಲಿ ಸಕ್ರೀಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us