/newsfirstlive-kannada/media/media_files/2026/02/23/rudra-master-12-2026-02-23-15-02-26.jpg)
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ರಿಯಾಲಿಟಿ ಶೋನಲ್ಲಿ ಕೊರಿಯೋಗ್ರಾಫರ್ ಆಗಿ ತಮ್ಮ ವಿಶಿಷ್ಟ ಸ್ಟೈಲ್‌ನಲ್ಲಿ ಮನೆ ಮಾತಾಗಿರೋದು ಅಂದ್ರೆ ರುದ್ರ ಮಾಸ್ಟರ್. ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದ ರುದ್ರ ಮಾಸ್ಟರ್​, ಇದೀಗ ನಿರೀಕ್ಷಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2026/02/18/rudra-master-6-2026-02-18-15-38-43.jpg)
ರುದ್ರ ಮಾಸ್ಟರ್ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕೊರಿಯೋಗ್ರಾಫರ್ ಆಗಿ ರುದ್ರ ಮಾಸ್ಟರ್​ ವೀಕ್ಷಕರ ಮನೆ ಮಾತಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಹಲವಾರು ಜೋಡಿಗಳ ಗೆಲುವಿಗೆ ಕಾರಣವಾಗಿದ್ದವರು ರುದ್ರ ಮಾಸ್ಟರ್.. ಪ್ರತಿಯೊಂದು ಮಾತಿಗೂ ಸಂಕೋಚದಿಂದ ಉತ್ತರ ಕೊಡುವ ರುದ್ರ ಮಾಸ್ಟರ್ ಅಂದ್ರೆ ಎಲ್ಲರಿಗೂ ಫೇವ್​ರೆಟ್​. ಹಲವು ಹೆಣ್ಣು ಮಕ್ಕಳ ಕ್ರಷ್​.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ನೇಹಿತನಿಗೆ ಬ್ಯಾಂಕ್ ಖಾತೆ ಡೀಟೈಲ್ಸ್ ಕೊಟ್ಟ ಯಾಮಾರಿದ ಸ್ನೇಹಿತ: 7 ಕೋಟಿ ರೂ. ಸೈಬರ್ ವಂಚನೆ ಪತ್ತೆ!
/filters:format(webp)/newsfirstlive-kannada/media/media_files/2026/02/23/rudra-master-8-2026-02-23-15-04-18.jpg)
ನಾವು ನಿಮಗೆ ಈ ಹಿಂದೆ ರುದ್ರ ಮಾಸ್ಟರ್ ಹಳದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮದ ಬಗ್ಗೆ ಹೇಳಿದ್ವಿ. ಈ ವೇಳೆ ಮದುವೆ ಯಾವಾಗ ಅನ್ನೋ ಪ್ರಶ್ನೆ ಕಾಡಿತ್ತು. ರುದ್ರ ಮಾಸ್ಟರ್​ ನಿರೀಕ್ಷಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2026/02/23/rudra-master-10-2026-02-23-15-04-31.jpg)
ರುದ್ರ ಮಾಸ್ಟರ್-ನಿರೀಕ್ಷಾ ಜೋಡಿಯ ಆರತಕ್ಷತೆ ಸಖತ್ ಗ್ರ್ಯಾಂಡ್ ಆಗಿ ನಡೆದಿದೆ. ರಿಸೆಪ್ಷನ್‌ನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ಸ್, ಬಿಗ್​ ಬಾಸ್​ ಸೀಸನ್​ 12 ರ ವಿನ್ನರ್​ ಗಿಲ್ಲಿ ನಟ, ಕಾವ್ಯ ಶೈವ, ನಟಿ ರಕ್ಷಿತಾ, ಪ್ರೇಮ್ ಸೇರಿ ಹಲವು ಕಲಾವಿದರು ಹಾಜರಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ.
/filters:format(webp)/newsfirstlive-kannada/media/media_files/2026/02/23/rudra-master-9-2026-02-23-15-04-47.jpg)
ಒಟ್ನಲ್ಲಿ ಸದಾ ಕೆಲಸದಲ್ಲಿ ಬ್ಯುಸಿಯಾಗಿ ಇರ್ತಿದ್ದ ರುದ್ರಾ ಮಾಸ್ಟರ್​ ಈಗ ರಿಯಲ್​ ಲೈಫ್​ನಲ್ಲೂ ಬ್ಯುಸಿ ಆಗಿದ್ದಾರೆ.. ಸೋಶಿಯಲ್​ ಮಿಡಿಯಾದಲ್ಲಿ ಮದುವೆ ವಿಡಿಯೋಗಳು ಸಖತ್​ ವೈರಲ್​ ಆಗ್ತಿದೆ. ಈ ನವಜೋಡಿಗೆ ಒಳ್ಳೆಯದಾಗ್ಲಿ ಅಂತ ಎಲ್ಲರು ವಿಶ್​ ಮಾಡಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 1 ರಿಂದ ಎಚ್‌ಆರ್‌ಎ, ಶಿಕ್ಷಣ ಭತ್ಯೆ, ಹಾಸ್ಟೆಲ್ ಭತ್ಯೆ, ಸಾರಿಗೆ ಭತ್ಯೆ ಹೆಚ್ಚಳ : ಹೊಸ ನಿಯಮ ಜಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us