/newsfirstlive-kannada/media/media_files/2025/08/10/shravani-subramanya-serial3-2025-08-10-19-19-08.jpg)
ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಟಿಆರ್ಪಿಯಲ್ಲೂ ಒಳ್ಳೆಯ ಸ್ಥಾನ ಪಡೆದುಕೊಂಡು ಮುನ್ನುಗ್ಗುತ್ತಿದೆ. ಮೊದ ಮೊದಲು ವೀಕ್ಷಕರಿಗೆ ಅಪ್ಪ ಮತ್ತು ಮಗಳ ಸಂಬಂಧದ ಬಗ್ಗೆ ಎಳೆ ಎಳೆಯಾಗಿ ತೋರಿಸಲಾಗಿತ್ತು.
ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?
ಈಗ ಶ್ರಾವಣಿ ತನ್ನ ಹೆತ್ತ ತಾಯಿಯ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಅಲ್ಲದೇ ಅಮ್ಮ ಇನ್ನೂ ಜೀವಂತವಾಗಿ ಇದ್ದಾಳೆ ಅನ್ನೋದಕ್ಕೆ ಒಂದು ಪತ್ರ ಕೂಡ ಶ್ರಾವಣಿ ಕೈಗೆ ಸೇರಿದೆ. ಇದು ಸದ್ಯದ ಕಥೆ.
ಇದರ ಹಿಂದೆ ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿರೋ ಆಸಿಯಾ ಫಿರ್ದೋಸ್ ಶೂಟಿಂಗ್ ಸೆಟ್ನಲ್ಲೇ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾರಣವೇ ಆ ಒಂದು ಪೇಪರ್. ಹೌದು, ನಟಿ ಆಸಿಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ನಟಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಡೈರೆಕ್ಟರ್ ಕೊಟ್ಟಿರೋ ಸೀನ್ ಪೇಪರ್ ನೋಡಿ ಕಣ್ಣೀರಿಟ್ಟಿದ್ದಾರೆ.
ಏಕೆಂದರೆ ಆ ಸೀನ್ ಪೇಪರ್ನಲ್ಲಿ ತಾಯಿಯ ಬಗ್ಗೆ ಬರೆಯಲಾಗಿತ್ತು. ಆ ಪೇಪರ್ನಲ್ಲಿ ಬರೆದ ಪದಗಳನ್ನು ಓದುತ್ತಿದ್ದಂತೆ ನಟಿ ಕಣ್ಣೀರು ಹಾಕಿದ್ದಾರೆ. ತಾಯಿ ಅನ್ನೋ ಪದನೇ ಹಾಗೇ ಅಲ್ವಾ. ಎಂಥವರ ಕಣ್ಣಲ್ಲೂ ನೀರು ತರಿಸಿ ಬಿಡುತ್ತದೆ. ಹಾಗೇ ನಟಿ ಆಸಿಯಾಗೂ ಅಮ್ಮ ಎಂದರೆ ಪಂಚಪ್ರಾಣ. ಹೀಗಾಗಿ ತಾಯಿಯ ಸೀನ್ ಸ್ಕಿಟ್ ಓದುತ್ತಿದ್ದಾಗ ಅವರಿಗೆ ಗೊತ್ತಿಲ್ಲದೇ ಕಣ್ಣಲ್ಲಿ ನೀರು ಬಂದು ಬಿಟ್ಟಿದೆ. ಹೀಗಾಗಿಯೇ ಈ ಸೀರಿಯಲ್ ವೀಕ್ಷಕರಿಗೆ ಇಷ್ಟವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ