/newsfirstlive-kannada/media/media_files/2025/09/22/shravani-subbu-2025-09-22-12-51-42.jpg)
ಶ್ರಾವಣಿ ಸುಬ್ರಮಣ್ಯ ಗೆಳತನಕ್ಕೆ ಅದೆಷ್ಟು ಮಾರ್ಕ್ಸ್​ ಕೊಟ್ರು ಸಾಲದು. ಅಪ್ಪ-ಅಮ್ಮನ ಪ್ರೀತಿ ಕಳ್ಕೊಂಡಿದ್ದ ಶ್ರಾವಣಿಗೆ ಗೆಳೆಯ ಸುಬ್ಬು ಹೆಗಲು ಆ ಕೊರತೆನ ನಿಗಿಸಿತ್ತು. ನಿಧಾನಕ್ಕೆ ಈ ಸ್ನೇಹ ಗಾಢವಾಗಿ ಶ್ರಾವಣಿ ಮನಸ್ಸಲ್ಲಿ ಪ್ರೀತಿ ಅರಳಿತ್ತು. ಸಾಕಷ್ಟು ಅಡೆತಡೆಗಳ ನಡುವೆ ಕೊನೆಗೂ ಈ ಜೋಡಿ ಮದುವೆ ಆಗಿದೆ.
ಇಷ್ಟು ದಿನ ಮೇಡಮ್​ ಅಂತ ಹಿಂದೆ ಮುಂದೆ ಸುತ್ತುತ್ತಿದ್ದ ಸುಬ್ಬು, ಶ್ರಾವಣಿ ಪ್ರೀತಿಯಲ್ಲಿ ಬಂಧಿಯಾಗಿದ್ದಾನೆ. ಅದ್ರಲ್ಲೂ ಸ್ಪೆಷಲಿ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ್ದು, ಇದು ಕನಸು ಕಾಣೋ ದೃಶ್ಯ ಆದ್ರೂ ವೀಕ್ಷಕರ ಕಣ್​ತಂಪು ಮಾಡಿದೆ. ಈ ದೃಶ್ಯದ ತೆರೆ ಹಿಂದಿನ ಶೂಟಿಂಗ್​ ಝಲಕ್​ನ ಶ್ರಾವಣಿ ಪಾತ್ರಧಾರಿ ಆಸಿಯಾ ಹಂಚಿಕೊಂಡಿದ್ದು, ಹೇಗಿತ್ತು ಶ್ರಾವಣಿ ಸುಬ್ಬು ಹೃದಯ ಗೀತೆ ಎಂದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಸೂಪರೋ ಸೂಪರ್​ ಎಂದು ನಾಚಿ ನೀರಾಗಿದ್ದಾರೆ.
ಇದನ್ನೂ ಓದಿ: ಪಾಕ್​ ವಿರುದ್ಧ ಗೆದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾರ ಜೊತೆ, ಎಲ್ಲಿ, ಯಾವಾಗ?
ಇನ್ನೂ ಕಥೆಯಲ್ಲಿ ಮೇಜರ್​ ಟ್ವಿಸ್ಟ್​ ತೆರೆದುಕೊಳ್ತಿದೆ. ಶ್ರಾವಣಿ ತನ್ನ ಪ್ರೀತಿ ಹೇಳಿಕೊಂಡಿದ್ದಾಳೆ. ಆದರೆ ಸುಬ್ಬು ಇನ್ನು ತನ್ನ ಪ್ರೇಮ ನಿವೇದನೆಯನ್ನ ಶ್ರಾವಣಿಗೆ ಮಾಡಿಲ್ಲ. ಈ ನಡುವೆ ಇಬ್ಬರ ಬಗ್ಗೆ ಅಪಪ್ರಚಾರ ಹರಡಿದೆ. ಮಾವ, ಮಿನಿಸ್ಟರ್​ ವೀರು ಮರ್ಯಾದೆ ಕಾಪಾಡೋ ಭರದಲ್ಲಿ, ಯಜಮಾನ್ರು ಹೇಳಿದರು ಅಂತ ಮದುವೆ ಆಗಿದ್ದೀನಿ ಎಂದು ಅಬ್ಬರಿಸ್ತಾನೆ.
ಸುಬ್ಬು ನಿಜವಾಗಲೂ ತನ್ನ ಪ್ರೀತಿ ಒಪ್ಪಿಕೊಂಡು ಮನಸಾರೆ ಮದುವೆ ಆಗಿದ್ದಾನೆ ಎಂದು ತಿಳಿದಿದ್ದ ಶ್ರಾವಣಿಗೆ ಈ ಮಾತು ಘಾಸಿ ಮಾಡಿದೆ. ಸುಬ್ಬು ಬಗ್ಗೆ ತಪ್ಪು ತಿಳಿದುಕೊಳ್ತಾಳ ಶ್ರಾವಣಿ? ಪ್ರೀತಿ ಹೇಳಿಕೊಳ್ತಾನ ಸುಬ್ಬು? ಇಬ್ಬರ ನಡುವಿನ ಮತ್ತೆ ಅಡ್ಡಗೋಡೆ ಮೂಡುತ್ತಾ? ಈ ಎಲ್ಲಾ ಕೌತುಕಕ್ಕೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ ಮಿಸ್​ ಮಾಡ್ದೇ ನೋಡಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ