‘LOVE YOU ಬಂಗಾರ’.. ವೇದಿಕೆ ಮೇಲೆ ಸೋನಲ್​ಗೆ ಸರ್​ಪ್ರೈಸ್​ ಕೊಟ್ಟ ತರುಣ್ ಸುಧೀರ್.. ಏನದು?

ಮಹಾನಟಿ ವೇದಿಕೆ ಮೇಲೆ ತರುಣ್ ಸುಧೀರ್ ಪತ್ನಿ ಸೋನಲ್ ಮೊಂತೆರೋ ಅವರಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಪತಿಯ ಕ್ಯೂಟ್​ ಸರ್​ಪ್ರೈಸ್​ ನೋಡಿ ಸೋನಲ್ ಫುಲ್​ ಖುಷಿಯಲ್ಲಿ ಲವ್​ ಯೂ ಬಂಗಾರ ಅಂತ ಹೇಳಿದ್ದಾರೆ.

author-image
Veenashree Gangani
tharun sudhir
Advertisment
  • ವೇದಿಕೆ ಮೇಲೆ ಪತ್ನಿಗೆ ಸರ್​ಪ್ರೈಸ್​ ಕೊಟ್ಟ ತರುಣ್​ ಸುಧೀರ್
  • ಪತಿಯ ಸರ್​ಪ್ರೈಸ್​ ಕಂಡು ಸೋನಲ್​ ಫುಲ್ ಖುಷ್
  • ಹಣೆಗೆ ಮುತ್ತಿಕ್ಕಿ ಲವ್​ ಯೂ ಬಂಗಾರ ಎಂದ ಪತ್ನಿ

ಮಹಾನಟಿ ವೇದಿಕೆ ಮೇಲೆ ತರುಣ್ ಸುಧೀರ್ ಪತ್ನಿ ಸೋನಲ್ ಮೊಂತೆರೋ ಅವರಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಪತಿಯ ಕ್ಯೂಟ್​ ಸರ್​ಪ್ರೈಸ್​ ನೋಡಿ ಸೋನಲ್ ಫುಲ್​ ಖುಷಿಯಲ್ಲಿ ಲವ್​ ಯೂ ಬಂಗಾರ ಅಂತ ಹೇಳಿದ್ದಾರೆ.

ಇದನ್ನೂ ಓದಿ:ಧರ್ಮಸ್ಥಳ ಕೇಸ್​ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!

tharun sudhir(2)

ಇದೇ ಪ್ರೋಮೋವನ್ನು ಜೀ ಕನ್ನಡ ತನ್ನ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದೆ. ಪ್ರೋಮೋ ಕೊನೆಯಲ್ಲಿ ತುರುಣ್​ ಸುಧೀರ್​ ಪತ್ನಿ ಸೋನಲ್​ಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಸರ್​ಪ್ರೈಸ್​ ನೀಡಿದ್ದಾರೆ.

tharun sudhir(1)

ವೇದಿಕೆ ಮೇಲೆ ತರುಣ್​ ಸುಧೀರ್​ ಹಾಗೂ ಸೋನಲ್​ ಅವರ ಮದುವೆ ಫೋಟೋದ ಫ್ರೇಮ್​ ಅದರ ಸುತ್ತ ಬಲೂನ್​ಗಳನ್ನು ಅಂಟಿಸಲಾಗಿತ್ತು. ಇದನ್ನೇ ನೋಡಿದ ಸೋನಲ್​ ಸಖತ್ ಖುಷ್​ ಆಗಿದ್ದಾರೆ. ಲವ್​ ಯೂ ಬಂಗಾರ ಅಂತ ಗಂಡನ ಹಣೆಗೆ ಮುತ್ತಿಕ್ಕಿದ್ದಾರೆ. ಒಂದು ವಾರದ ಮುಂಚಿತವಾಗಿ ಈ ಜೋಡಿ ತಮ್ಮ ಮದುವೆ ವಾರ್ಷಿಕೋತ್ಸವನ್ನು ಗ್ರ್ಯಾಂಡ್​ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

ಇನ್ನು, ಸ್ಟಾರ್​ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೊ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಬರ್ತಿ ಆಗುತ್ತಿದೆ. 2024 ಆಗಸ್ಟ್ 11ರಂದು ಸಿಲಿಕಾನ್ ಸಿಟಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಯ ಮದುವೆಗೆ ಸ್ಟಾರ್ ನಟ ನಟಿಯರು ಎಂಟ್ರಿ ಕೊಟ್ಟು ಶುಭ ಹಾರೈಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

tharun sudhir
Advertisment