/newsfirstlive-kannada/media/media_files/2025/08/05/dharmasthala-case-2025-08-05-14-49-49.jpg)
ಮಂಗಳೂರು: ಕಳೆದ 6 ದಿನಗಳಿಂದ ಅನಾಮಿಕ ತೋರಿಸಿದ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಧರ್ಮಸ್ಥಳ ಕೇಸ್ಗೆ ಅತಿದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?
6ನೇ ದಿನದ ಸ್ಥಳ ಪರಿಶೋಧನೆ ವೇಳೆ ಸಿಕ್ಕಿದ್ದು ಒಂದಲ್ಲ ಎರಡಲ್ಲಾ ಮೂರು ಅಸ್ಥಿಪಂಜರ ಸಿಕ್ಕಿವೆ ಎಂದು ದೂರುದಾರೆ ಸುಜಾತ ಭಟ್ ಪರ ವಕೀಲ ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ವಕೀಲ ಮಂಜುನಾಥ್ ಅವರು, ಪಾಯಿಂಟ್ 11ರ ನೂರು ಮೀಟರ್ ದೂರದಲ್ಲಿ 3 ಮಾನವ ಅಸ್ಥಿಪಂಜರ ಅವಶೇಷಗಳು ಲಭ್ಯವಾಗಿದೆ.
ಈ ಪೈಕಿ ಒಂದು ಅವಶೇಷ ಮಹಿಳೆಗೆ ಸೇರಿದ್ದಾಗಿದೆ. ಇದರೊಂದಿಗೆ ಮಹಿಳೆಯ ಸೀರೆಯೂ ಪತ್ತೆಯಾಗಿದೆ. ನಿನ್ನೆ ಪಾಯಿಂಟ್ ನಂ. 11ರ ಬದಲು ಹೊಸ ಜಾಗದಲ್ಲಿ ಪರಿಶೋಧನೆ ನಡೆದಿತ್ತು. ಎಸ್ಐಟಿ ಅನಾಮಿಕ ದೂರುದಾರನಿಗೆ ಹೊಸ ಜಾಗ ತೋರಿಸಲು ಅವಕಾಶ ನೀಡಿದೆ. ಇದರಿಂದ ನಿನ್ನೆಯ ಅಸ್ಥಿಪಂಜರ ಅಗೆಯುವ ಕಾರ್ಯ ಯಶಸ್ವಿಯಾಗಿತ್ತು. ಎಸ್ಐಟಿ ಸಹಿತ ಶೋಧ ನಡೆಸುತ್ತಿರುವ ತಂಡದ ಕಾರ್ಯಾಚರಣೆ ಶ್ಲಾಘನೀಯ ಅಂತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ