ಸೀರಿಯಲ್​ಗೆ ಸೂರಜ್ ಸಿಂಗ್ ಆಯ್ಕೆ ಆಗಿದ್ದು ಹೇಗೆ? ಡೈರೆಕ್ಟರ್ ಏನಂದ್ರು? VIDEO

ಬಿಗ್​ ಬಾಸ್​ನಲ್ಲಿ ಮಿಂಚಿದ ಸೂರಜ್​​ ಸಿಂಗ್​​ಗೆ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅದೃಷ್ಟದ ಬಾಗಿಲು ತೆರೆದಿತ್ತು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದರುವ ‘ಪವಿತ್ರ ಬಂಧನ’ ಸೀರಿಯಲ್​​ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.

author-image
Ganesh Kerekuli
Advertisment

ಬಿಗ್​ ಬಾಸ್​ನಲ್ಲಿ ಮಿಂಚಿದ ಸೂರಜ್​​ ಸಿಂಗ್​​ಗೆ ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅದೃಷ್ಟದ ಬಾಗಿಲು ತೆರೆದಿತ್ತು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದರುವ ‘ಪವಿತ್ರ ಬಂಧನ’ ಸೀರಿಯಲ್​​ನಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. 

ಇನ್ನು ಈ ಸೀರಿಯಲ್​​ಗೆ ಸೂರಜ್ ಸಿಂಗ್ ಹೇಗೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ನಿರ್ದೇಶಕ ಮಧು ಉತ್ತರ ನೀಡಿದ್ದಾರೆ. ಸೀರಿಯಲ್​​ಗೆ ದೊಡ್ಡ ದೊಡ್ಡ ಹೀರೋ ಆಗಬೇಕು ಅನ್ಕೊಂಡಿದ್ವಿ. ಆದರೆ ಅವರು ಯಾರಿಗೂ ಅದೃಷ್ಟ ಒಲಿಯಲಿಲ್ಲ. ನಾವು ಹುಡುಕುತ್ತಿದ್ದ ಟೈಮ್​​ಗೆ, ಗಳಿಗೆಗೆ ಸೂರಜ್ ಸಿಂಗ್​​ ಸಿಕ್ಕರು. ಅವರು ಒಳಗೆ ಬಂದಿದ್ದಾರೆ. 

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಏರಿಕೆಗೆ ಹತ್ತಾರು ಕಾರಣಗಳು: ಟ್ರಂಪ್ ಹುಚ್ಚಾಟದಿಂದ ಚಿನ್ನದ ಬೆಲೆ ಏರಿಕೆಯೇ?

ಇದೇ ವೇಳೆ ಸೀರಿಯಲ್ ಸ್ಟೋರಿ ಬಗ್ಗೆ ಮಾತನ್ನಾಡಿ.. ಪವಿತ್ರ ತನ್ನ ತಂದೆಗೋಸ್ಕರ ಹಠವಾದಿ ಹೆಣ್ಣು ಆಗಿರುತ್ತಾಳೆ. ಜೊತೆಗೆ ಅಣ್ಣ, ತಮ್ಮಂದಿರ ಬಂಧನ ಕುರಿತ ಕತೆಯೂ ಇದರಲ್ಲಿದೆ. ನಮ್ಮೊಳಗೆ ನಡೆಯುತ್ತಿರುವ ವಿಚಾರಗಳು ಬಗ್ಗೆಯೇ ಕತೆ ಇದೆ. 

ಇನ್ನು ಹೀರೋ ಸೂರಜ್ ಸಿಂಗ್ ಮಾತನ್ನಾಡಿ.. ಸೀರಿಯಲ್ ಆಯ್ಕೆಗೆ ನನಗೆ ಹೆಚ್ಚು ಸಮಯ ನೀಡಿರಲಿಲ್ಲ. ನಾನು ಕತೆ ಕೇಳಿದಾಗ ತುಂಬಾ ಕನೆಕ್ಟ್ ಮಾಡಿಕೊಂಡೆ. ನನಗೆ ಸ್ಟೋರಿಯ ಕತೆ ತುಂಬಾ ರಿಲೇಟ್ ಆಯಿತು. ನನಗೆ ಈ ರೋಲ್ ಶೂಟ್ ಆಗುತ್ತೆ ಅನ್ಕೊಂಡೆ. ಸೀರಿಯಲ್​​ಗಾಗಿ ತುಂಬಾ ಎಫೆಕ್ಟ್​ ಹಾಕುತ್ತಿದ್ದೇವೆ. ನಾನು ಸಿರೀಯಲ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಸ್ಟೋರಿ ಲೈನ್ ಎಂದಿದ್ದಾರೆ. 

ನಾನು ಬೇಸಿಕಲಿ ಆ್ಯಕ್ಟರ್ ಅಲ್ಲ. ಇಲ್ಲಿ ತುಂಬಾ ಹಿರಿಯ ಕಲಾವಿದರು ಇದ್ದಾರೆ. ಅವರ ಜೊತೆ ಕಲಿಯೋಕೆ ನನಗೆ ಅವಕಾಶ ಸಿಕ್ಕಿದೆ. ಇಲ್ಲಿ ತುಂಬಾ ಕಲಿಯೋಕೆ ಇದೆ. ನಾನು ಕಲಿಯುತ್ತ ಎಂಜಾಯ್ ಮಾಡ್ತಿದ್ದೀನಿ. 

ಸೂರಜ್ ಸಿಂಗ್, ನಟ 

‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಸೂರಜ್ ಸಿಂಗ್ ಅವರು ದೇವದತ್ ದೇಶ್​ಮುಖ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ತಿಲಕ್ ಗೌಡ ಪಾತ್ರದಲ್ಲಿ ಯಶಸ್ ಗೌಡ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಕಥೆಯ ನಾಯಕಿ. ದೇವದತ್ ಹಾಗೂ ತಿಲಕ್ ಅಣ್ಣ-ತಮ್ಮ. ಇಬ್ಬರೂ ತುಂಬಾನೇ ಕ್ಲೋಸ್. ತಿಲಕ್ ಹಾಗೂ ಕಥಾ ನಾಯಕಿ ಪವಿತ್ರಾ ಪ್ರೀತಿಸುತ್ತಿರುತ್ತಾರೆ. ಆಕೆ ದೇವದತ್​​ನ ಮದುವೆ ಆಗೋ ಪರಿಸ್ಥಿತಿ ಬರುತ್ತದೆ. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಕಂಡರೇ ಆಗೋದಿಲ್ಲ. ಆದಾರೂ ಮದುವೆ ಆಗುತ್ತಾರೆ. ಇದು ಧಾರಾವಾಹಿಯ ಕಥೆ ಆಗಿದೆ. 

ಇದನ್ನೂ ಓದಿ:ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ -ಗಿಲ್ಲಿ ಮುಂದೆ ಬಿಗ್​ ಪ್ಲಾನ್ VIDEO  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Suraj Singh Pavitra Bandhana,
Advertisment