/newsfirstlive-kannada/media/media_files/2025/08/04/gicchi-giligili-raghavendra-2025-08-04-18-32-13.jpg)
ವಿಭಿನ್ನ ಮ್ಯಾನರಿಸಂ​ನಿಂದ ವಿಶೇಷವಾಗಿ ಕಾಮಿಡಿ ಶೋಗಳನ್ನ ಮಾಡೋ ಕಲಾವಿದ ರಾಘವೇಂದ್ರ. ರಾಘು ಅನ್ನೋದಿಕ್ಕಿಂತ ರಾಗಿಣಿ ಅಂತಾನೇ ಇವರು ಸಖತ್​ ಫೇಮಸ್ ಆಗಿದ್ದರು.​
ಇದನ್ನೂ ಓದಿ:ಅನ್ನದಾತರಿಗೆ ಶಾಕಿಂಗ್ ನ್ಯೂಸ್​.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ
/filters:format(webp)/newsfirstlive-kannada/media/media_files/2025/08/04/gicchi-giligili-raghavendra2-2025-08-04-18-36-01.jpg)
ರಾಗಿಣಿ ಎಂದ ಕೂಡಲೇ ಥಟ್​ ಅಂತಾ ಕಣ್ಮುಂದೆ ಬರೋದು ಸುಂದರವಾದ ಚಲುವೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾದ ಸಾಗರ ಮೂಲದ ಹಾಸ್ಯ ನಟ ರಾಘವೇಂದ್ರಗೆ ತರುಣ್​ ಸುಧೀರ್​ ಅವರು ಆಫರ್​ ಕೊಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/08/04/gicchi-giligili-raghavendra1-2025-08-04-18-36-02.jpg)
ಮಹಾನಟಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ರಾಘುಗೆ ಅಡ್ವಾನ್ಸ್​ ಕೊಟ್ಟಿದ್ದಾರೆ. ಅಂದರೆ ತರುಣ್ ಸುಧೀರ್ ಅವರ ಮುಂದಿನ ಪ್ರಾಜಕ್ಟ್​ನಲ್ಲಿ ರಾಘು ಅವರಿಗೆ ಚಾನ್ಸ್​ ನೀಡಿತ್ತೇನೆ ಅಂತ ಅರ್ಥ. ಹೌದು, ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರೋ ಯುವನಟ ರಾಘವೇಂದ್ರ ಮುಂದಿನ ದಿನಗಳಲ್ಲಿ ಹೀರೋ ಆಗಿ ಮಿಂಚಲಿದ್ದಾರೆ.
ಇನ್ನೂ, ವೇದಿಕೆ ಮೇಲೆ ಪುಟ್ನಂಜ, ಕುರಿಗಳು ಸಾರ್ ಕುರಿಗಳು ಸಿನಿಮಾದಲ್ಲಿ ನಟಿ ಉಮಾಶ್ರೀ ಅವರು ಡೈಲಾಂಗ್​ ಅನ್ನು ಹೇಳಿದ್ದಾರೆ. ರಾಘು ಅವರ ಡೈಲಾಂಗ್​ ಹಾಗೂ ಌಕ್ಟಿಂಗ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಈ ಮೂಲಕ ಎಲ್ಲರ ಮನಸ್ಸನ್ನು ರಾಘು ಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us