ಅನ್ನದಾತರಿಗೆ ಶಾಕಿಂಗ್ ನ್ಯೂಸ್​.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ

ಮುಂಗಾರು ಎರಡನೇ ಅವಧಿಯಲ್ಲಿ ಶೇಕಡಾ 80ವರೆಗೂ ಮಳೆ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಅವಧಿಯ ಮೊದಲಾರ್ಧ ಜುಲೈ ಅಂತ್ಯಕ್ಕೆ ಮುಗಿದಿದ್ದು, ದ್ವಿತೀಯಾರ್ಧ ಆಗಸ್ಟ್​, ಸೆಪ್ಟೆಂಬರ್ ತಿಂಗಳಿನ ಮಳೆ ಮುನ್ಸೂಚನೆಯನ್ನ ಬಿಡುಗಡೆ ಮಾಡಿದೆ.

author-image
Ganesh
monsoon rain
Advertisment

ಮುಂಗಾರು ಎರಡನೇ ಅವಧಿಯಲ್ಲಿ ಶೇಕಡಾ 80ವರೆಗೂ ಮಳೆ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಅವಧಿಯ ಮೊದಲಾರ್ಧ ಜುಲೈ ಅಂತ್ಯಕ್ಕೆ ಮುಗಿದಿದ್ದು, ದ್ವಿತೀಯಾರ್ಧ ಆಗಸ್ಟ್​, ಸೆಪ್ಟೆಂಬರ್ ತಿಂಗಳಿನ ಮಳೆ ಮುನ್ಸೂಚನೆಯನ್ನ ಬಿಡುಗಡೆ ಮಾಡಿದೆ. 

ಹವಾಮಾನ ಇಲಾಖೆ ಪ್ರಕಾರ.. ಮುಂಗಾರು ಮಳೆಯು ಜುಲೈ ಅಂತ್ಯಕ್ಕೆ ಮುಗಿದ್ದಿದ್ದು, ಈ ಅವಧಿಯಲ್ಲಿ  ವಾಡಿಕೆಗಿಂತ ಶೇ.11 ರಷ್ಟು ಮಳೆಯಾಗಿದೆ. ಆಗಸ್ಟ್​ನಿಂದ 2ನೇ ಅವಧಿ ಶುರುವಾಗಿದೆ. ಆದರೆ ರಾಜ್ಯದಲ್ಲಿ ಮಳೆಯ ಕೊರತೆ ಎದ್ದು ಕಾಣ್ತಿದೆ. 

ಇದನ್ನೂ ಓದಿ: ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ್ದು ಯಾರು..? ಪೊಲೀಸರ ತನಿಖೆಯಿಂದ ಹೊರ ಬಿತ್ತು ಮಾಹಿತಿ

ಆಗಸ್ಟ್​ನಲ್ಲಿ ರಾಜ್ಯದಲ್ಲಿ ಶೇಕಡಾ 50 ರಷ್ಟು ಮಳೆಯ ಕೊರತೆ ಕಾಣಲಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಶೇಕಡಾ 80 ರಷ್ಟು ಅಭಾವ ಸೃಷ್ಟಿಯಾಗಲಿದೆ. ಇನ್ನು, ಸೆಪ್ಟೆಂಬರ್​ನಲ್ಲಿ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಈ ಮಾಹಿತಿ ರಾಜ್ಯದ ರೈತರಿಗೆ ಆತಂಕವನ್ನು ಮಾಡಿದೆ. ರೈತರ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಬಿತ್ತನೆ ಕಾರ್ಯಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಬೆಳೆಗಳಿಗೆ ಮಳೆಯ ಅಗತ್ಯ ಇದೆ. 

ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ ವಾಡಿಕೆಗಿಂತ ಕರಾವಳಿಯಲ್ಲಿ ಶೇಕಡಾ 18 ರಷ್ಟು, ಉತ್ತರ ಒಳನಾಡಿನಲ್ಲಿ ಶೇಕಡಾ 22 ರಷ್ಟು ಹೆಚ್ಚಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶೇಕಡಾ 1 ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಹೆಚ್ಚು ಶೇಕಡಾ 58 ರಷ್ಟು ಮಳೆಯ ಕೊರತೆ ಉಂಟಾಗಿದೆ. ರಾಮನಗರ ಶೇಕಡಾ 49, ಬೆಂಗಳೂರು ನಗರ ಶೇಕಾಡ 36, ಕೋಲಾರ ಶೇ. 34, ತುಮಕೂರು ಶೇ. 28, ಶಿವಮೊಗ್ಗ ಶೇಕಡಾ 22 ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೇಕಡಾ 18 ರಷ್ಟು ಮಳೆಯ ಕೊರತೆ ಉಂಟಾಗಿದೆ ಎಂದು ವರದಿ ಹೇಳಿದೆ. 

ಇದನ್ನೂ ಓದಿ:ಒಳ ಮೀಸಲು ಸಮೀಕ್ಷೆಯ ಬಿಗ್​ ಅಪ್​ಡೇಟ್ಸ್​.. ನ್ಯಾ.ನಾಗಮೋಹನದಾಸ್‌ ಆಯೋಗದಿಂದ ವರದಿ ಸಲ್ಲಿಕೆ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಗಾರು ಮಳೆ
Advertisment