/newsfirstlive-kannada/media/media_files/2026/02/12/tejaswini-and-virat-marriage-2026-02-12-15-55-43.jpg)
ನಂದಗೋಕುಲದ ರಕ್ಷಾ ಮದ್ವೆಯಾಗಿರೋ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಈಗ ಮತ್ತೊರ್ವ ನಟಿ ಸಪ್ತಪದಿ ತುಳಿದಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ವರ್ಷ ನಟಿಸಿರುವ, ತೇಜಸ್ವಿನಿ ಆಚಾರ್ ಅವರು ಮನ ಮೆಚ್ಚಿದ ಹುಡುಗನ ಕೈ ಹಿಡಿದಿದ್ದಾರೆ. ಅಷ್ಟಕ್ಕೂ ಯಾರು ಇವರ ಹುಡುಗ?
ಸೀರಿಯಲ್‌ನಲ್ಲಿ ಹೀರೋ ಹೀರೋಯಿನ್ ಆಗಿ ನಟಿಸಿ, ಸೀರಿಯಲ್‌ನಲ್ಲಿ ಮದ್ವೆಯೂ ಆಗಿ, ರಿಯಲ್ ಲೈಫ್‌ನಲ್ಲೂ ಮದ್ವೆಯಾಗಿರೋ ಯಾವುದಾದ್ರೂ ಜೋಡಿ ಇದ್ರೆ, ಅದು ಇವರೇ ನೋಡಿ. ವಿರಾಟ್ ಮತ್ತು ತೇಜಸ್ವಿನಿ ಇಬ್ಬರು ರಾಧಿಕಾ ಸೀರಿಯಲ್‌ನಲ್ಲಿ ಫೇರ್ ಆಗಿ ಅಭಿನಯಿಸಿದ್ದರು. ಅಲ್ಲೂ ಕೂಡ ಮದ್ವೆಯಾಗಿದ್ದರು. ವಿಶೇಷ ಅಂದ್ರೆ, ರಿಯಲ್ ಲೈಫ್‌ನಲ್ಲಿ ಫೆಬ್ರವರಿ 10ನೇ ತಾರೀಖು ಮದುವೆಯಾಗಿದ್ದಾರೆ.
ಇದನ್ನೂ ಓದಿ:ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಉದ್ದೇಶಪೂರ್ವಕ ಕೃತ್ಯ!! ತನಿಖಾ ವರದಿ ಆಧರಿಸಿ ಇಟಲಿ ಪತ್ರಿಕೆಯ ವರದಿ
/filters:format(webp)/newsfirstlive-kannada/media/media_files/2026/02/12/tejaswini-and-virat-marriage-1-2026-02-12-15-56-01.jpg)
ತೇಜಸ್ವಿನಿ ಮತ್ತು ವಿರಾಟ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಇಬ್ಬರು ಸುವರ್ಣದಲ್ಲಿ ಪ್ರಸಾರವಾಗಿದ್ದ ಸಂಘರ್ಷ ಧಾರವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಅಂದಿನಿಂದ ಶುರುವಾದ ಇವರ ಸ್ನೇಹ, ಉದಯದಲ್ಲಿ ಪ್ರಸಾರವಾದ ರಾಧಿಕಾ ಸೀರಿಯಲ್‌ವರೆಗೂ ಬಂದಿತು. ಈಗ ಇಬ್ಬರು ಒಬ್ಬರನೊಬ್ಬರನ್ನ ಮೆಚ್ಚಿ ವಿವಾಹವಾಗಿದ್ದಾರೆ.
ವಿರಾಟ್ ಸಂಘರ್ಷ, ನನ್ನದೇವರು ಮತ್ತು ರಾಧಿಕಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. ತೇಜಸ್ವಿನಿ ಅವರು ಕೂಡ ಸಂಘರ್ಷ ಸೇರಿದಂತೆ ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟಿರುವ ತೇಜಸ್ವಿನಿ ಮತ್ತು ವಿರಾಟ್ ಅವರಿಗೆ ನಮ್ಮ ಕಡೆಯಿಂದ, ಹ್ಯಾಪಿ ಮ್ಯಾರೀಡ್ ಲೈಫ್.
ಇದನ್ನೂ ಓದಿ:ಟಾರ್ಗೆಟ್​ 300! ಟೀಂ ಇಂಡಿಯಾದ ಕನಸು ಇವತ್ತು ನನಸಾಗುತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us