ಟಾರ್ಗೆಟ್​ 300! ಟೀಂ ಇಂಡಿಯಾದ ಕನಸು ಇವತ್ತು ನನಸಾಗುತ್ತಾ..?

ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಮ್​ ಇಂಡಿಯಾದ ಬ್ಯಾಟರ್ಸ್​ ಇಂದು ಸಿಡಿದೇಳೋಕೆ ರೆಡಿಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಅಭ್ಯಾಸ ನಡೆಸಿರೋ ಇಂಡಿಯನ್​​ ಟೈಗರ್ಸ್​ ನಮಿಬೀಯಾದ ಬೌಲಿಂಗ್​ ದಾಳಿಯನ್ನ ಉಡಾಯಿಸೋಕೆ ಪಣತೊಟ್ಟಿದ್ದಾರೆ.

author-image
Ganesh Kerekuli
Surya Ajit agarkar
Advertisment
  • ರನ್​ ಅಭಿಷೇಕ್​ ಮಾಡೋಕೆ ಅಭಿಷೇಕ್​ ರೆಡಿ
  • ವಿಶ್ವಕಪ್​ನಲ್ಲಿ ಭಾರತ-ನಮೀಬಿಯಾ ಮುಖಾಮುಖಿ
  • ಸಿಕ್ಸರ್​​​ ಸುರಿಮಳೆ ಸುರಿಸ್ತಾರಾ ಇಶಾನ್​ ಕಿಶನ್​..?

ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಮ್​ ಇಂಡಿಯಾದ ಬ್ಯಾಟರ್ಸ್​ ಇಂದು ಸಿಡಿದೇಳೋಕೆ ರೆಡಿಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಅಭ್ಯಾಸ ನಡೆಸಿರೋ ಇಂಡಿಯನ್​​ ಟೈಗರ್ಸ್​ ನಮಿಬೀಯಾದ ಬೌಲಿಂಗ್​ ದಾಳಿಯನ್ನ ಉಡಾಯಿಸೋಕೆ ಪಣತೊಟ್ಟಿದ್ದಾರೆ. ಇವತ್ತು ಟೀಮ್​ ಇಂಡಿಯಾದ ಟಾರ್ಗೆಟ್​ ಗೆಲುವೊಂದೇ ಅಲ್ಲ. ಮತ್ತೊಂದು ಗುರಿಯನ್ನ ಸೂರ್ಯನ ಸೈನ್ಯ ಬೆನ್ನತ್ತಿದೆ. 

ಟಿ20 ವಿಶ್ವಕಪ್​ ಟೂರ್ನಿಯ 2ನೇ ಕದನಕ್ಕೆ ಟೀಮ್​ ಇಂಡಿಯಾ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಜಯ ಸಾಧಿಸಿದ ಮೆನ್​ ಇನ್​ ಬ್ಲ್ಯೂ ಪಡೆ ಇಂದು ನಮೀಬಿಯಾವನ್ನ ಬೇಟೆಯಾಡಲು ಸಜ್ಜಾಗಿದೆ. ಫಸ್ಟ್​ ಮ್ಯಾಚ್​​ನಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​​ ಫೇಲ್​ ಆದ್ರು. ಆದ್ರೂ ಕೂಡ ಕ್ಯಾಪ್ಟನ್​ ಸೂರ್ಯಕುಮಾರ್​ ನಾವು ಆಡೋದೆ ಅಗ್ರೆಸ್ಸಿವ್​ ಬ್ರ್ಯಾಂಡ್​ ಆಫ್​ ಕ್ರಿಕೆಟ್​ ಅಂತಾ ಮತ್ತೆ ಹೇಳಿದ್ದಾರೆ. ಇಂದು ನಮೀಬಿಯಾ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸೋಕೆ ಇಂಡಿಯನ್​ ಟೈಗರ್ಸ್ ರೆಡಿಯಾಗಿದ್ದಾರೆ. 

ಟಾರ್ಗೆಟ್​ 300! ನಮೀಬಿಯಾಗೆ ನರಕ ದರ್ಶನ?

ಕಳೆದ 2 ದಿನಗಳಿಂದ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಬೆವರಿಳಿಸಿರೋ ಟೀಮ್​ ಇಂಡಿಯಾ ಬ್ಯಾಟರ್ಸ್​ ತಪ್ಪುಗಳ ಮೇಲೆ ವರ್ಕೌಟ್​ ಮಾಡಿದ್ದಾರೆ. ಯುಎಸ್​​ಎ ವಿರುದ್ಧ ಫೇಲ್​ ಆದ ಇಂಡಿಯನ್​ ಬ್ಯಾಟಿಂಗ್​ ಲೈನ್​ಅಪ್​ ಇವತ್ತು ಸಿಡಿದೇಳೋಕೆ ರೆಡಿಯಾಗಿದೆ. ಇಂಡಿಯನ್ ಟೀಮ್​ ಇಂದು ಹೊಸ ಟಾರ್ಗೆಟ್​ನ ಬೆನ್ನು ಬಿದ್ದಿದೆ. 300 ರನ್​ಗಳಿಸೋ ಸ್ಪೆಷಲ್​ ರೆಕಾರ್ಡ್​ ಬೆನ್ನತ್ತಿರೋ ಇಂಡಿಯನ್ ಬ್ಯಾಟರ್ಸ್ ಬೌಂಡರಿ, ಸಿಕ್ಸರ್​ ಸುರಿಮಳೆ ಸುರಿಸಿ ನಮೀಬಿಯಾಗೆ ನರಕ ದರ್ಶನ ಮಾಡಿಸೋ ಪ್ಲಾನ್​​ನಲ್ಲಿದ್ದಾರೆ. 

ಇದನ್ನೂ ಓದಿ: ಆರ್​ಸಿಬಿಗೆ ಮುಂಬೈ ಇಂಡಿಯನ್ಸ್​ ಶಾಕ್.. ಫ್ರಾಂಚೈಸಿಗೆ ಮತ್ತೊಮ್ಮೆ ನಿರಾಸೆ..!

team india (21)

ಮೊದಲ ಪಂದ್ಯದಲ್ಲಿ ಗೋಲ್ಡನ್​ ಡಕೌಟ್​ ಆದ ಯುವ ಆಟಗಾರ ಅಭಿಷೇಕ್ ಶರ್ಮಾ, 2ನೇ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡೋಕೆ ರೆಡಿಯಾಗಿದ್ದಾರೆ. ಕಳೆದ 6 ಪಂದ್ಯಗಳನ್ನ ಗಮನಿಸಿದ್ರೆ, ಡಕೌಟ್​ ಆದ ನಂತರದ ಪಂದ್ಯಗಳಲ್ಲೆಲ್ಲಾ ಅಭಿಷೇಕ್​ ವಿಸ್ಪೋಟಕ ಆಟವಾಡಿದ್ದಾರೆ. ಇಂದಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿರೋ ಅಭಿಷೇಕ್​, ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ರನ್​ ಅಭಿಷೇಕ ಮಾಡೋಕೆ ರೆಡಿಯಾಗಿದ್ದಾರೆ. 

ಸಿಕ್ಸರ್​​​ ಸುರಿಮಳೆ ಸುರಿಸ್ತಾರಾ ಇಶಾನ್​ ಕಿಶನ್?

ಪ್ರಾಕ್ಟಿಸ್​ ಮ್ಯಾಚ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಇಶಾನ್​ ಕಿಶನ್​ ಅಮೇರಿಕಾ ವಿರುದ್ಧ ಬಿಗ್​ ಸ್ಕೋರ್​​ ಕಲೆ ಹಾಕುವಲ್ಲಿ ಫೇಲ್​ ಆದ್ರು. 20 ರನ್​ಗಳಿಗೆ ಔಟಾದ ಇಶಾನ್​ ಕಿಶನ್​, ನಮೀಬಿಯಾ ಎದುರು ಸಾಲಿಡ್​ ಇನ್ನಿಂಗ್ಸ್​ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಮೊದಲ ಓವರ್​ನಿಂದಲೇ ಅಟ್ಯಾಕಿಂಗ್​ ಆಟವಾಡಿ ಬೌಲರ್​ಗಳನ್ನ ಬೆಂಡೆತ್ತೋದೆ ಇಶಾನ್​ ಕಿಶನ್​ ಪ್ಲಾನ್​.! ಹೀಗಾಗಿ ನೆಟ್ಸ್​ನಲ್ಲೂ ಕೂಡ ಇಶಾನ್​ ಕಿಶನ್​ ಇದೇ ರೀತಿ ಅಭ್ಯಾಸ ನಡೆಸಿ ಸಜ್ಜಾಗಿದ್ದಾರೆ.  

ಇದನ್ನೂ ಓದಿ: ಸುಪ್ರೀಂಕೋರ್ಟ್ ನಲ್ಲೂ ಶಾಸಕ ಭೈರತಿ ಬಸವರಾಜುಗೆ ಹಿನ್ನಡೆ : ಸುಪ್ರೀಂಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Team india (8)

ಡೆಲ್ಲಿ ದಂಗಲ್​ಗೆ ತಿಲಕ್ ವರ್ಮಾ​ ಸ್ಪೆಷಲ್​ ಪ್ರಾಕ್ಟಿಸ್

ಇಂಜುರಿಯಿಂದ ಕಮ್​​ಬ್ಯಾಕ್​ ಮಾಡಿದ ಮೊದಲ ಪಂದ್ಯದಲ್ಲೇ ರಿಧಮ್​ ಕಂಡುಕೊಂಡಿರೋ ತಿಲಕ್​ ವರ್ಮಾ ಬ್ಯಾಟ್​ನಿಂದ ಇವತ್ತು ಬಿಗ್​ ಇನ್ನಿಂಗ್ಸ್​ನ ನಿರೀಕ್ಷೆಯಿದೆ. ಫಸ್ಟ್​ ಮ್ಯಾಚ್​​ನಲ್ಲಿ ಡಿಸೆಂಟ್​ ಆಟವಾಡಿದ ತಿಲಕ್​ ವರ್ಮಾ, ಡೆಲ್ಲಿ ದಂಗಲ್​ಗೆ ಸ್ಪೆಷಲ್​ ಪ್ರ್ಯಾಕ್ಟಿಸ್​ ನಡೆಸಿ ರೆಡಿಯಾಗಿದ್ದಾರೆ. ಗುಡ್​ ಸ್ಟಾರ್ಟ್​ ಪಡೆದ್ರೂ ಬಿಗ್ ಸ್ಕೋರ್​ಗೆ ಕನ್ವರ್ಟ್​ ಮಾಡದ ತಿಲಕ್​ ವರ್ಮಾ, ಮಿಸ್ಟೇಕ್​ ಮೇಲೆ ವರ್ಕೌಟ್​ ಮಾಡಿ ಕಣಕ್ಕಿಳಿಯೋಕೆ ತಯಾರಾಗಿದ್ದಾರೆ. 

ರಾಜಧಾನಿಯಲ್ಲಿ ನಾಯಕನಿಂದ 360 ಡಿಗ್ರಿ ಆಟ

ಬೊಂಬಾಟ್​ ಬ್ಯಾಟಿಂಗ್​ ನಡೆಸಿ ಅಮೆರಿಕಾವನ್ನ ಉಡಾಯಿಸಿದ ಸೂರ್ಯಕುಮಾರ್​ ಯಾದವ್​ ಟೀಮ್​ ಇಂಡಿಯಾದ ಕಾನ್ಫಿಡೆನ್ಸ್​ ಡಬಲ್​ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಸ್ಪೋಟಕ ಆಟವಾಡಿದ ಸೂರ್ಯ, ಇಂದೂ ಕೂಡ ಅದೇ ಅಬ್ಬರ ಮುಂದುವರೆಸೋಕೆ ಸಜ್ಜಾಗಿದ್ದಾರೆ. ಟಾಪ್​ ಆರ್ಡರ್​ ಬ್ಯಾಟರ್ಸ್​​ ಗುಡ್​ ಸ್ಟಾರ್ಟ್​ ನೀಡಿದ್ರೆ, ಸಾಲಿಡ್​​​ ಫಾರ್ಮ್​ನಲ್ಲಿರೋ ಇಂಡಿಯನ್​​ ಕ್ಯಾಪ್ಟನ್​ ರನ್​ ಹೊಳೆ ಹರಿಸೋದು ಪಕ್ಕಾ.!

ಹಾರ್ದಿಕ್​ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್​. ಮೂವರು ವಿಸ್ಪೋಟಕ ಬ್ಯಾಟರ್ಸ್​ ಟೀಮ್​ ಇಂಡಿಯಾದ ಲೋವರ್​ ಆರ್ಡರ್​ನಲ್ಲಿದ್ದಾರೆ. ಅಂತಿಮ ಹಂತದಲ್ಲಿ ಕಣಕ್ಕಿಳಿದ್ರೆ ಎದುರಾಳಿಯನ್ನ ಕಂಗಾಲ್ ಮಾಡೋ ತಾಕತ್ತು ಇವರಿಗಿದೆ. ವಿಶ್ವಕಪ್​ ಟೂರ್ನಿಯಲ್ಲಿ ಉಳಿದ ತಂಡಗಳಿಗೆ ಹೋಲಿಸಿದ್ರೆ, ಡೆಡ್ಲಿ & ಡೇಂಜರಸ್​ ಬ್ಯಾಟಿಂಗ್ ಲೈನ್​ಅಪ್​ ಟೀಮ್​ ಇಂಡಿಯಾದ್ದಾಗಿದೆ. ಡೆಲ್ಲಿಯ ಬ್ಯಾಟಿಂಗ್​ ಟ್ರ್ಯಾಕ್​ನಲ್ಲಿ, ನಮೀಬಿಯಾದ ಸಾಧಾರಣ ಬೌಲಿಂಗ್​ ಅಟ್ಯಾಕ್​ ಮೇಲೆ ಇಂಡಿಯನ್​ ಟೈಗರ್ಸ್​ ಮುಗಿಬಿದ್ರೆ ಟಾರ್ಗೆಟ್​ 300 ರೀಚ್​ ಆಗೋದು ಸವಾಲೇ ಅಲ್ಲ.

ಇದನ್ನೂ ಓದಿ: ಇನ್ಮುಂದೆ ಮನೆಯಲ್ಲಿ ಶ್ವಾನ ಸಾಕೋಕು ಬೇಕು ಲೈಸನ್ಸ್.. ಬೆಂಗಳೂರಲ್ಲಿ ಹೊಸ ನಿಯಮ ಏನು ಹೇಳುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News T20 world cup india vs namibia
Advertisment