Advertisment

ಆರ್​ಸಿಬಿಗೆ ಮುಂಬೈ ಇಂಡಿಯನ್ಸ್​ ಶಾಕ್.. ಫ್ರಾಂಚೈಸಿಗೆ ಮತ್ತೊಮ್ಮೆ ನಿರಾಸೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿ ಬಿಗ್ ಶಾಕ್ ನೀಡಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ (DY Patil Stadium) ತಮ್ಮ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದ್ದ ಆರ್​ಸಿಬಿಗೆ, ಮುಂಬೈ ಫ್ರಾಂಚೈಸಿ ನಿರಾಕ್ಷೇಪಣಾ ಪತ್ರ (NOC) ನೀಡಲು ನಿರಾಕರಿಸಿದೆ.

author-image
Ganesh Kerekuli
rcb cares
Advertisment

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿ ಬಿಗ್ ಶಾಕ್ ನೀಡಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ (DY Patil Stadium) ತಮ್ಮ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದ್ದ ಆರ್​ಸಿಬಿಗೆ, ಮುಂಬೈ ಫ್ರಾಂಚೈಸಿ ನಿರಾಕ್ಷೇಪಣಾ ಪತ್ರ (NOC) ನೀಡಲು ನಿರಾಕರಿಸಿದೆ.

Advertisment

ಆರ್‌ಸಿಬಿ ಪ್ಲಾನ್ ಏನಿತ್ತು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈನ ಪ್ರತಿಷ್ಠಿತ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಆಸಕ್ತಿ ತೋರಿಸಿತ್ತು. ಇದಕ್ಕಾಗಿ ಅನುಮತಿ ಕೋರಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ಸಂಪರ್ಕಿಸಿತ್ತು. ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಆರ್​ಸಿಬಿಯ ಈ ಪ್ರಸ್ತಾಪವನ್ನು ತಳ್ಳಿಹಾಕಿದೆ.

ಇದನ್ನೂ ಓದಿ:‘ರಾಜಕಾರಣ ಮಾಡೋಕೆ ಬಂದಿದ್ದೀನಿ, ಗಾಳಿ ಕುಡಿಯೋಕಲ್ಲ : ಸೋನಿಯಾ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಹೇಳಿಕೆ!

ಆರ್​ಸಿಬಿಗೆ ಮೈದಾನ ನೀಡಲು ನಿರಾಕರಿಸಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಕೆಲವೊಂದು ಪ್ರಬಲ ಪ್ರಶ್ನೆಗಳನ್ನು ಮುಂದಿಟ್ಟಿದೆ. ‘ದೇಶದಲ್ಲಿ ವೈಝಾಗ್, ಪುಣೆ, ಇಂದೋರ್, ರಾಯ್ಪುರ್​​​ನಂತಹ ಅತ್ಯುತ್ತಮ ಸ್ಟೇಡಿಯಮ್​ಗಳು ಲಭ್ಯವಿರುವಾಗ, ಆರ್​ಸಿಬಿಗೆ ಡಿವೈ ಪಾಟೀಲ್ ಮೈದಾನವೇ ಏಕೆ ಬೇಕು?’ ಎಂದು ಪ್ರಶ್ನಿಸಿದೆ.

Advertisment

ಒಮ್ಮೆ ಆರ್​ಸಿಬಿಗೆ ಇಲ್ಲಿ ಆಡಲು ಅವಕಾಶ ನೀಡಿದರೆ, ಮುಂದಿನ ದಿನಗಳಲ್ಲಿ ಅದು ಬೇರೆ ತಂಡಗಳಿಗೂ ಹಾದಿ ಮಾಡಿಕೊಟ್ಟಂತಾಗುತ್ತದೆ ಎಂಬುದು ಮುಂಬೈ ಇಂಡಿಯನ್ಸ್ ಲೆಕ್ಕಾಚಾರ. ‘ಇವತ್ತು ಆರ್​ಸಿಬಿ ಡಿವೈ ಪಾಟೀಲ್ ಆತಿಥ್ಯ ಕೇಳಿದೆ, ನಾಳೆ ಮತ್ತೊಂದು ತಂಡ ಬಂದು ಮುಂಬೈನ ಬ್ರೆಬೋರ್ನ್​​​​​ (Brabourne Stadium) ಸ್ಟೇಡಿಯಂನಲ್ಲಿ ಆಡಲು ಕೇಳಬಹುದು. ನಮ್ಮ ತವರು ನೆಲದಲ್ಲಿ ಬೇರೆ ತಂಡಗಳಿಗೆ ಪಾರುಪತ್ಯ ಮೆರೆಯಲು ಅವಕಾಶ ನೀಡಲ್ಲ ಎಂದು ಮುಂಬೈ ಫ್ರಾಂಚೈಸಿ ಖಡಕ್ ಆಗಿ ಸಂದೇಶ ರವಾನಿಸಿದೆ. ಹೀಗಾಗಿ, ಡಿವೈ ಪಾಟೀಲ್‌ನಲ್ಲಿ ಪಂದ್ಯ ಆಡುವ ಆರ್​ಸಿಬಿಯ ಲೆಕ್ಕಾಚಾರ ಉಲ್ಟಾ ಆಗಿದ್ದು, ಬ್ರೇಕಿಂಗ್ ನ್ಯೂಸ್ ಆಗಿ ಹೊರಬಿದ್ದಿದೆ.

ಇದನ್ನೂ ಓದಿ: ಅಮೆರಿಕ ಅಧಿಕಾರಿಯಿಂದ ಪ್ರಾಣ ಕಳ್ಕೊಂಡಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋಟಿ ಸೆಟಲ್​ಮೆಂಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Chinnaswamy Stadium RCB
Advertisment
Advertisment
Advertisment