/newsfirstlive-kannada/media/media_files/2025/12/24/45-movie-review_shivarajkumar_upendra_raj-b-shetty_arjun-janya_kannada-movie-review_newsfirstkannada_rosiy-dog-2025-12-24-14-32-01.png)
Photograph: (freepik)
ಬೆಂಗಳೂರಲ್ಲಿ ನೀವೆನಾದ್ರೂ ಮನೆಯಲ್ಲಿ ಶ್ವಾನ ಸಾಕ್ತಾ ಇದ್ದೀರಾ ಜೊತೆಗೆ ಒಂದೇ ಮನೆಯಲ್ಲಿ 3 ಕ್ಕಿಂತ ಹೆಚ್ಚು ಶ್ವಾನಗಳನ್ನ ಸಾಕುತ್ತಿದ್ದರೆ ಮಿಸ್ ಮಾಡ್ದೆ ಈ ಓದಿ. ಯಾಕಂದ್ರೆ ಇನ್ಮುಂದೆ ಮನೆಯಲ್ಲಿ ಶ್ವಾನ ಸಾಕೋದಕ್ಕೆ ಕೆಲವೊಂದಿಷ್ಟು ರೂಲ್ಸ್ ಜಾರಿ ಮಾಡಲು ಜಿಬಿಎ ಚಿಂತನೆ ನಡೆಸುತ್ತಿದೆ.
ಸಾಕು ನಾಯಿಗಳಿಗೂ ಇನ್ಮುಂದೆ ಲೈಸನ್ಸ್..!
ಮನೆಯಲ್ಲಿ ಮಕ್ಕಳಂತೆ ಅದೆಷ್ಟೋ ಜನ್ರು ಶ್ವಾನಗಳನ್ನ ಬಹಳ ಪ್ರೀತಿಯಿಂದ, ಮುದ್ದಾಗಿ ಸಾಕ್ತಾರೆ. ಆದ್ರೆ ಮನೆಯಲ್ಲಿ ಶ್ವಾನ ಸಾಕೋರಿಗೆ ಹೊಸ ರೂಲ್ಸ್ ಅನ್ನ ಜಾರಿ ಮಾಡಲು ಜಿಬಿಎ ಚಿಂತನೆ ನಡೆಸುತ್ತಿದೆ. ಅದುವೇ ಸಾಕು ನಾಯಿಗಳಿಗೆ ಕಡ್ಡಾಯವಾಗಿ ಲೈಸನ್ಸ್ ಅನ್ನ ನೀಡೋದಕ್ಕೆ ಪ್ಲ್ಯಾನ್ ನಡೆಸುತ್ತಿದೆ. ಕೇವಲ ಲೈಸನ್ಸ್ ನೀಡೋದು ಅಷ್ಟೇ ಅಲ್ಲದೇ ಕೆಲವೊಂದು ಮಾನದಂಡವನ್ನ ಕೂಡ ಜಾರಿಗೆ ತರಲು ಪ್ಲ್ಯಾನ್ ನಡೆದಿದ್ದು, ಅದರಲ್ಲಿ ಪ್ರಮುಖವಾಗಿ ಮನೆಗಳಲ್ಲಿ ಮೂರಕ್ಕಿಂತ ಹೆಚ್ಚು ನಾಯಿಗಳನ್ನ ಸಾಕುವುದಕ್ಕೆ ನಿರ್ಬಂದ ಹೇರಲು ಮುಂದಾಗಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್ ನಲ್ಲೂ ಶಾಸಕ ಭೈರತಿ ಬಸವರಾಜುಗೆ ಹಿನ್ನಡೆ : ಸುಪ್ರೀಂಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಈಗಾಗಲೇ ಬೆಂಗಳೂರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬೀದಿ ನಾಯಿಗಳಿಗೆ ಶೆಲ್ಟರ್ ಅನ್ನ ಜಿಬಿಎ ರೂಪಿಸುತ್ತಿದೆ. ಇತ್ತೀಚಿಗೆ ಕೇವಲ ಬೀದಿನಾಯಿಗಳು ಅಷ್ಟೇ ಅಲ್ಲದೇ ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗ್ತಿದೆ. ಹೀಗಾಗಿ ಇದಕ್ಕೆ ಕಣಡಿವಾಣ ಹಾಕಲು ಜಿಬಿಎ ಮುಂದಾಗಿದೆ. ಕಳೆದ ವರ್ಷ ಜಿಬಿಎಯ ಪಶುಪಾಲನೆ ಇಲಾಖೆಯಿಂದ ನಡೆಸಿದ ಸರ್ವೆಯಲ್ಲಿ ಸುಮಾರು ಒಂದು ಲಕ್ಷ 15 ಸಾವಿರ ಸಾಕು ನಾಯಿಗಳ ಮಾಹಿತಿ ಸಿಕ್ಕಿದೆ. ಸಂಗ್ರಹಿಸಲಾಗಿತ್ತು, ಇದೀಗ ಮನೆಯಲ್ಲಿ ನಾಯಿ ಸಾಕೋದಕ್ಕೆ ಲೈಸನ್ಸ್ ಪಡೆಯಬೇಕು ಜೊತೆಗೆ ವಾರ್ಷಿಕವಾಗಿ ಅದನ್ನ ನವೀಕರಣಗೊಳಿಸಬೇಕು. ಶ್ವಾನದ ತಳಿಗಳ ಮೇಲೆ ಅವುಗಳ ಲೈಸನ್ಸ್ ಫೀಸ್ ಅನ್ನು ನಿರ್ಧರಿಸಲಾಗುತ್ತದೆ. ಜೊತೆಗೆ ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಾಗಿ ಶ್ವಾನಗಳನ್ನ ಸಾಕಲು ಆವಕಾಶವಿಲ್ಲ.. ಒಂದು ಹೆಚ್ಚು ನಾಯಿಗಳು ಮನೆಯಲ್ಲಿದ್ದರೇ ಅವುಗಳನ್ನ ಜಿಬಿಎಗೆ ಒಪ್ಪಿಸಬೇಕು. ನಂತರ ಅವುಗಳನ್ನ ಎನ್‌ಜಿಓಗಳಿಗೆ ಜಿಬಿಎ ಹಸ್ತಾಂತರಿಸುತ್ತದೆ.
ಈ ಹೊಸ ರೂಲ್ಸ್‌ನಲ್ಲಿ ಏನಿದೆ..?
- ಸಾಕು ನಾಯಿಗಳನ್ನು ಸಾಕೋದಕ್ಕೆ ಜಿಬಿಎಯಿಂದ ಪರವಾನಗಿ ಪಡೆಯಬೇಕು.
- ಪ್ರತಿ ವರ್ಷ ಪರವಾನಗಿ ನವೀಕರಣಕ್ಕೆ ಜಿಬಿಎಗೆ ಇಂತ್ತಿಷ್ಟು ಹಣ ಪಾವತಿ ಮಾಡಬೇಕು.
- ನಾಯಿಗಳ ವರ್ಗದ ( ತಳಿ) ಅಧಾರದ ಮೇಲೆ ಪರವಾನಗೆ ಶುಲ್ಕ ನಿಗದಿ
- ಜಿಬಿಎ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ದೃಢೀಕರಣ ಪಡೆಯಬೇಕು
- ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಸಬೇಕು
- ಪ್ರತಿ ಸಾಕು ನಾಯಿ ಮಾಲೀಕರು ನಾಯಿಗೆ ರೆಬೀಸ್ ಲಸಿಕೆ ಹಾಕಿಸಬೇಕು
- ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶು ವೈದ್ಯರಿಂದ ದೃಢೀಕರಣ ಪಡೆಯಬೇಕು
- ಪ್ರತಿ ಸಾಕು ನಾಯಿ ಮಾಲೀಕರು 12 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ನಾಯಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಬೇಕು
- ಇನ್ನೂ ಸಾಕು ನಾಯಿಗಳ ಆವರಣವನ್ನು ಸ್ವಚ್ಚತೆ ಕಾಪಾಡಬೇಕು
- ನೆರೆಹೊರೆಯವರಿಗೆ ತೊಂದರೆ ಆಗದಂತೆ ನಾಯಿ ಸಾಕಬೇಕು
- ಮನೆಗಳಲ್ಲಿ ಮೂರು ನಾಯಿಗಳಿಗಿಂತ ಹೆಚ್ಚಿನ ನಾಯಿ ಸಾಕೋದಕ್ಕೆ ಅವಕಾಶ ಇಲ್ಲ
- ಮೂರು ನಾಯಿಗಳಿಗಿಂತ ಹೆಚ್ಚಾಗಿ ಸಾಕಿದರೆ ಅಂತಹ ನಾಯಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು ಪ್ರಾಣೆ ಕೇಂದ್ರ ಕ್ಕೆ ಕಳುಹಿಸಲಾಗುತ್ತದೆ
- ನಗರಪಾಲಿಕೆ ಬೈಲ್ ಗಳ ಪ್ರಕಾರ ನಾಯಿಗಳನ್ನು ಸಾಕಬೇಕು
- ಒಂದು ವೇಳೆ ಬೈಲ್ ನಿಯಮ ಉಲ್ಲಂಘನೆ ಮಾಡುದ್ರೆ ಕಾನೂನು ರೀತಿಯ ಕ್ರಮ
- ಸಾಕು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೊದಗ ನಾಯಿಯ ಕತ್ತಿಗೆ ಹಗ್ಗ ಅಥವಾ ಚೈನ್ ಅಳವಡಿಕೆ ಮಾಡಿರಬೇಕು
- ವಾಕಿಂಗ್ ವೇಳೆಯಲ್ಲಿ ನಾಯಿ ರಸ್ತೆಯಲ್ಲಿ ಗಲೀಜು ಮಾಡಿದ್ರೆ ಅದನ್ನು ಮಾಲೀಕರು ತೆಗೆಯಬೇಕು
- ಸಾಕು ನಾಯಿ ತಪ್ಪಿಸಿಕೊಂಡು ನಗರಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದರೆ ಅದಕ್ಕೆ ಇಂತ್ತಿಷ್ಟು ಅಂತ ದಂಡ ಪಾವತಿ ಮಾಡಿ ನಾಯಿ ಬಿಡಿಸಿಕೊಳ್ಳಬೇಕು
- 72 ಗಂಟೆಯೊಳಗೆ ಬಿಡಿಸಿಕೊಂಡರೆ ಒಂದು ಸಾವಿರ ದಂಡ ಪಾವತಿ ಮಾಡಬೇಕು
- 72 ಗಂಟೆಯ ನಂತರ ಬಿಡಿಸಿಕೊಳ್ಳದಿದರೆ ಪ್ರತಿ ದಿನ 200 ರೂ ದಂಡ ಪಾವತಿಸಬೇಕು
- ಒಂದು ವೇಳೆ ಬಿಡಿಸಿಕೊಳ್ಳದೆ ಹೋದರೆ ನಾಯಿಯನ್ನು ಪ್ರಾಣೆ ದಾಯಸಂಘಕ್ಕೆ ನೀಡಲಾಗಿದೆ
- ಅಪಾರ್ಟ್‌ಮೆಂಟ್​ಗಳಲ್ಲಿ ಉಗ್ರ ಸ್ವರೂಪದ ನಾಯಿಗಳ ಸಾಕುವಿಕೆಗೆ ನಿಷೇಧ
ಜಿಬಿಎ ಸಾಕು ನಾಯಿಗಳಿಗೂ ಲೈಸನ್ಸ್ ತರಲು ಮುಂದಾಗಿದ್ದು, ಸಾಕು ನಾಯಿ ಮಾಲೀಕರು ಎಷ್ಟರ ಮಟ್ಟಿಗೆ ಇದನ್ಮ ಅನುಸರಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ವರದಿ: ಚಂದನ ಶೆಟ್ಟಿ, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us