ಜೈಲು ಸೇರಿದ ಧ್ರುವಂತ್.. ಹೊಸ ಕ್ಯಾಪ್ಟನ್ ಯಾರೆಂದು ಊಹಿಸಿದ ವೀಕ್ಷಕರು..! VIDEO

ಇವತ್ತು ಶುಕ್ರವಾರ.. ಬಿಗ್​ಬಾಸ್​ ಮನೆಯಲ್ಲಿ ಉತ್ತಮ ಮತ್ತು ಕಳಪೆ ಸ್ಪರ್ಧಿಗಳ ಆಯ್ಕೆ ಮಾಡಿಯಾಗಿದೆ. ಬಹುತೇಕ ಸ್ಪರ್ಧಿಗಳು ಧ್ರುವಂತ್ ಹೆಸರನ್ನು ಕಳಪೆಗೆ ಸೂಚಿಸಿದ್ದರಿಂದ ಜೈಲು ಸೇರಿದ್ದಾರೆ.

author-image
Ganesh Kerekuli
Dhruvant
Advertisment

ಇವತ್ತು ಶುಕ್ರವಾರ.. ಬಿಗ್​ಬಾಸ್​ ಮನೆಯಲ್ಲಿ ಉತ್ತಮ ಮತ್ತು ಕಳಪೆ ಸ್ಪರ್ಧಿಗಳ ಆಯ್ಕೆ ಮಾಡಿಯಾಗಿದೆ. ಬಹುತೇಕ ಸ್ಪರ್ಧಿಗಳು ಧ್ರುವಂತ್ ಹೆಸರನ್ನು ಕಳಪೆಗೆ ಸೂಚಿಸಿದ್ದರಿಂದ ಜೈಲು ಸೇರಿದ್ದಾರೆ. 

ಕಳೆದ ವಾರ ಧ್ರುವಂತ್ ಉತ್ತಮ ಸ್ಪರ್ಧಿ ಸ್ಥಾನಕ್ಕೆ ಆಯ್ಕೆ ಆಗಿದ್ದರು. ಈ ವೇಳೆ ಧ್ರುವಂತ್​​ಗೆ ಕ್ಯಾಪ್ಟನ್ ರಘು ಅವರು ಬಿಗ್​ಬಾಸ್ ಕಡೆಯಿಂದ ನೀಡುವ ಮೆಡಲ್ ನೀಡಿದ್ದರು. ಆದರೆ ಧ್ರುವಂತ್, ಆ ಮೆಡಲ್ ಇಟ್ಟುಕೊಳ್ಳಲಿಲ್ಲ. ಕೆಲವು ಬೆಳವಣಿಗೆಗಳಿಗೆ ಬೇಸತ್ತ ಅವರು, ಮೆಡಲ್ ವಾಪಸ್ ರಘುಗೆ ತಂದುಕೊಟ್ಟಿದ್ದರು. ಇದು ಅನೇಕ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ನೀಡಿದ್ದ ಗೌರವಕ್ಕೆ ನೀವು ಅಗೌರವ ಸೂಚಿಸಿದ್ದೀರಿ ಎಂದು ಈ ವಾರ ಕಳಪೆಗೆ ಆಯ್ಕೆ ಮಾಡಲಾಗಿದೆ. 

ಇದರ ಜೊತೆಗೆ ಕೆಲವು ಸ್ಪರ್ಧಿಗಳು, ಧ್ರುವಂತ್ ಅನಗತ್ಯವಾಗಿ ಹೆಚ್ಚು ಮಾತನ್ನಾಡುತ್ತಾರೆ ಎಂದು ಆರೋಪಿಸಿ ಕಳಪೆ ನೀಡಿದ್ದಾರೆ. ಈಗಾಗಲೇ ಪ್ರೊಮೋದಲ್ಲಿ ಧ್ರುವಂತ್ ಜೈಲು ಸೇರಿರೋದನ್ನು ತೋರಿಸಲಾಗಿದೆ. ಜೈಲಿನ ಬೀಗದ ಕೈ ಧನುಷ್ ಜೊತೆಗಿದ್ದು, ಅವರೇ ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿದ್ದಾರೆ ಎಂದು ವೀಕ್ಷಕರು ಊಹಿಸಿದ್ದಾರೆ.  

ಇದನ್ನೂ ಓದಿ:  ‘ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..’ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಗಿಲ್ಲಿ-ಕಾವ್ಯ..

ಇದನ್ನೂ ಓದಿ:ದರ್ಶನ್ ಪವಿತ್ರಗೌಡಗೆ ಸಂಬಂಧಿಸಿದ ಹಳೆಯ ಫೋಟೋಗಳು ವೈರಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Big boss dhanush gowda Bigg boss bigg boss dhruvanth
Advertisment