/newsfirstlive-kannada/media/media_files/2025/10/31/gilli-and-kavya-2-2025-10-31-15-39-43.jpg)
ಬಿಗ್‌ಬಾಸ್ ಸೀಸನ್ 12 ಆರಂಭವಾದಾಗಿನಿಂದಲೂ ಸುದ್ದಿಯಲ್ಲಿರೋದು ಗಿಲ್ಲಿ ಕಾವ್ಯ ಜೋಡಿ. ಜಂಟಿಯಾಗಿ ಮನೆಗೆ ಆಗಮಿಸಿದ ಇವರು ಒಳ್ಳೆಯ ಆಟಗಾರರು, ಎಂಟರ್‌ಟೈನರ್ ಅನಿಸಿಕೊಂಡಿದ್ರು. ಇದೀಗ ಸೂಪರ್ ರೊಮ್ಯಾಂಟಿಕ್ ಜೋಡಿ ಅಂತಾನೂ ಅನಿಸಿಕೊಂಡಿದೆ.
ಕಳೆದ ಎಪಿಸೋಡ್‌ನಲ್ಲಿ ನಡೆದ ಬಿಬಿ ಫೆಸ್ಟ್‌ನಲ್ಲಿ ಸೂರಜ್ ಹಾಗೂ ಕಾವ್ಯ ಜೋಡಿ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ರು. ಇವರಿಬ್ಬರ ನಡುವಿನ ಕೆಮೆಸ್ಟ್ರಿ ಜಡ್ಜ್‌ಗಳಾಗಿ ಆಗಮಿಸಿದ್ದ ಭಾಗ್ಯ ಹಾಗೂ ಪ್ರೇಮರ ಮನಸ್ಸನ್ನೂ ಕದ್ದಿತ್ತು. ಎಲ್ಲರಿಗೂ ಖುಷಿಯಾಗಿದ್ರೆ ಒಬ್ಬರು ಮಾತ್ರ ಈ ಪರ್ಫಾಮೆನ್ಸ್ ನೋಡಿ ಉರಿದು ಹೋಗಿದ್ರು. ತಾನಿರಬೇಕಾದ ಜಾಗದಲ್ಲಿ ಸೂರಜ್ ಇದ್ದಾನಲ್ಲ ಎಂದು ಹೊಟ್ಟೆ ಉರ್ಕೊಂಡಿದ್ರು.
ಯಾವತ್ತೂ ಕಾವು ಕಾವು ಅಂತ ಕಾವ್ಯ ಹಿಂದೆ ಸುತ್ತುತ್ತಿದ್ದ ಗಿಲ್ಲಿ ಸೂರಜ್ ಹಾಗೂ ಕಾವ್ಯ ಡ್ಯಾನ್ಸ್ ನೋಡಿ ತಮ್ಮ ಚಾನ್ಸ್ ಮಿಸ್ಸಾಯ್ತಲ್ಲ ಅಂದುಕೊಂಡಿದ್ರೆ. ಇದೀಗ ಬಿಗ್‌ಬಾಸ್ ಅವರಿಗೂ ಒಂದು ಅವಕಾಶ ನೀಡಿದ್ದಾರೆ. ಕಾವ್ಯ ಜೊತೆಗೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡಿಗೆ ಡ್ಯಾನ್ಸ್ ಮಾಡೋ ಚಾನ್ಸ್‌ಕೊಟ್ಟಿದ್ದಾರೆ. ಇಂತದ್ದೊಂದು ಚಾನ್ಸ್‌ಗೆ ಕಾಯುತ್ತಲೇ ಇದ್ದ ಗಿಲ್ಲಿ ತಾನು ಕಾಮಿಡಿಯನ್ ಅನ್ನೋದನ್ನೂ ಮರೆತು ಸೂಪರ್ ಆಗಿ ಡ್ಯಾನ್ಸ್ ಮಾಡಿ ತಮ್ಮೊಳಗಿರುವ ಡ್ಯಾನ್ಸ್‌ನ್ನೂ ಹೊರಗೆ ತಂದಿದ್ದಾರೆ.
ಗಿಲ್ಲಿ –ಕಾವ್ಯ ಕೆಮೆಸ್ಟ್ರಿ ಇನ್ನೂ ಅದ್ಭುತವಾಗಿ ಕಾಣಿಸಿದ್ದು, ಈ ಫರ್ಫಾಮೆನ್ಸ್‌ನ್ನು ಇವತ್ತಿನ ಎಪಿಸೋಡ್‌ನಲ್ಲಿ ಮಿಸ್ ಮಾಡ್ಲೇಬೇಡಿ.
ಇದನ್ನೂ ಓದಿ:ಬಿಗ್ ಬಾಸ್ ನಲ್ಲಿ ಸ್ಟೂಡೆಂಟ್ ಆಫ್ ದಿ ವೀಕ್‌ಗೆ ಜಟಾಪಟಿ: ಟಾಸ್ಕ್ ನಲ್ಲಿ ಗೆಲ್ಲುವರಾರು?
ಅಂತೂ ಗಿಲ್ಲಿ ಆಸೆ ನೆರವೇರಿತು...🤭
— Colors Kannada (@ColorsKannada) October 31, 2025
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12#BBK12#ColorsKannada#AdeBeruHosaChiguru#ಕಲರ್ಫುಲ್ಕತೆ#colorfulstory#KicchaSudeep#ExpectTheUnexpected#CKSPpic.twitter.com/QRXDHreMhE
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


