ಅಬ್ಬಬ್ಬಾ.. ತೆರೆಗೆ ಬಂದ ಕೆಲವೇ ವಾರಕ್ಕೆ ದಾಖಲೆ ಸೃಷ್ಟಿಸಿದ ಸೀರಿಯಲ್.. ಈ ವಾರದ TRP?

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ.

author-image
Veenashree Gangani
kannada serial
Advertisment

    ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರು ಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್​ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್​ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಸುಜಾತ ಭಟ್ ಬಗ್ಗೆ ಸೋದರನ ಶಾಕಿಂಗ್ ಹೇಳಿಕೆ, ಮಗಳು ಇರಲು ಸಾಧ್ಯವೇ ಇಲ್ಲ!

    annaya serial kannada(1)

    ಟಾಪ್​ 10 ಧಾರಾವಾಹಿಗಳನ್ನ ನೋಡೋದಾದ್ರೇ, ಮೊದಲ ಸ್ಥಾನದಲ್ಲಿ ಕರ್ಣ 9.2, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 8.7, ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8.4, ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ 8.3, ಐದನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 8.1, ಆರನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ 7.5, ಏಳನೇ ಸ್ಥಾನದಲ್ಲಿ ಬ್ರಹ್ಮಗಂಟು 6.5, ಏಂಟನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6.1, ಒಂಬತ್ತನೇ ಸ್ಥಾನದಲ್ಲಿ ಭಾರ್ಗವಿ LLB ಪ್ರತಿ ದಿನದ ಸಂಚಿಕೆ 5.7 ಹಾಗೂ ಮಹಾ ಸಂಚಿಕೆ 6.4, ಹತ್ತನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.5 ಟಿಆರ್​ಪಿ ಪಡೆದುಕೊಂಡಿದೆ.

    karnata

    ಇನ್ನೂ, ಉಳಿದಂತೆ ಟಿಆರ್​ಪಿಯಲ್ಲಿ ಕಳೆದ ವಾರಕ್ಕಿಂತ ಸುಧಾರಣೆ ಕಂಡಿರೋ ಧಾರಾವಾಹಿಗಳು ಅಂದ್ರೇ  ಮುದ್ದು ಸೊಸೆ 4.8 ಮಹಾ ಸಂಚಿಕೆ 5.1, ನಂದಗೋಕುಲ 5.1 ಹಾಗೂ ಭಾಗ್ಯ ಲಕ್ಷ್ಮೀ 5.3 ಟಿಆರ್​ಪಿ ಪಡೆದುಕೊಂಡಿವೆ. ಇನ್ನೂ ರಿಯಾಲಿಟಿ ಶೋಗಳಿಗೆ ಬರೋದಾದ್ರೇ ಮಹಾನಟಿ 7.5, ನಾವು ನಮ್ಮವರು 5.2 ಹಾಗೂ ಕ್ವಾಟ್ಲೇ ಕಿಚನ್​ 2.9 ಟಿಆರ್​ಪಿ ಪಡೆದುಕೊಂಡಿವೆ.

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    kiran raj, karna serial
    Advertisment