/newsfirstlive-kannada/media/media_files/2025/10/16/bb12-2025-10-16-11-02-22.jpg)
ಬಿಗ್​ಬಾಸ್​ 12 ಭಾರೀ ಕುತೂಹಲ ಮೂಡಿಸಿದೆ.. ಕಳೆದ ಸೀಸನ್​ಗಳಿಗಿಂತ ಈ ಸೀಸನ್ ವಿಭಿನ್ನವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.. ಆದ್ರೀಗ ಬಿಗ್​ಬಾಸ್ ಸ್ಪರ್ಧಿಗಳಿಗೆ ಬೆಳ್ಳಬೆಳಗ್ಗೆ ಶಾಕ್ ನೀಡಿದೆ.. ಗ್ರ್ಯಾಂಡ್ ಫಿನಾಲೆಗೂ ಮುಂಚೆಯೇ ಒಬ್ಬರ ಆಟ ಇಂದು ಕೊನೆಗೊಳ್ಳಲಿದೆ.
ಬೆಳ್ಳಂಬೆಳಗ್ಗೆ ಬಿಗ್​ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದೆ.. ಗ್ರ್ಯಾಂಡ್ ಫಿನಾಲೆಗೂ ಮುಂಚೆಯೇ ಇಂದು ಮಿಡ್​ ವೀಕ್ ಎಲಿಮಿನೇಷನ್ ನಡೆಯಲಿದೆ. ಗಾಢ ನಿದ್ರೆಯಲ್ಲಿದ್ದ ಸ್ಪರ್ಧಿಗಳಿಗೆ ಸೈರನ್ ಮೂಲಕ ಎಬ್ಬಿಸಿದ ಬಿಗ್​ಬಾಸ್, ಸ್ಪರ್ಧಿಗಳಿಗೆ ತಮಗೆ ಬೇಡವಾದ ಸ್ಪರ್ಧಿಯನ್ನು ಹೊರಕಾಕಲು ನಾಮಿನೇಷನ್ ಮಾಡಲು ಹೇಳಿದೆ. ಈ ಮೂಲಕ ಬಿಗ್​ಬಾಸ್ ಇಂದು ಒಬ್ಬ ಸ್ಪರ್ಧಿಗೆ ಗೇಟ್​ ಪಾಸ್ ಕೊಡಲು ನಿರ್ಧರಿಸಿದೆ.
ಯಾರು ಸೇಫ್..? ಯಾರು ಅನ್​ಸೇಫ್..?
ಈ ವಾರ ಹೊರಹೋಗಲು ನಾಮಿನೇಟ್​ ಆಗಿರುವ ಧ್ರುವಂತ್, ಅಭಿಷೇಕ್, ಅಶ್ವಿನಿ, ಎಸ್.ಎನ್, ಧನುಷ್, ಜಾನ್ವಿ, ಮಂಜು ಭಾಷಿಣಿ, ರಾಶಿಕಾ, ರಕ್ಷಿತಾ, ಗಿಲ್ಲಿ ನಟ, ಸತೀಶ್ ಕಡಬಮ್, ಚಂದ್ರಪ್ರಭ, ಮಲ್ಲಮ್ಮ, ಕಾವ್ಯ ಎಲಿಮಿನೇಷನ್ ನಡುಕ ಶುರುವಾಗಿದೆ ಇವರ ಪೈಕಿ ಒಬ್ಬರಿಗೆ ಇಂದು ಗೇಟ್​ಪಾಸ್​ ಸಿಗೋದು ಪಕ್ಕಾ ಆಗಿದೆ. ಡೈರೆಕ್ಟ್ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಕಾಕ್ರೋಚ್ ಸುಧಿ. ಅಶ್ವಿನಿ ಗೌಡ, ರಾಶಿಕ ಶೆಟ್ಟಿ ಹಾಗು ಮಾಳು ನಿಪನಾಳ ಸೇಫ್ ಆಗಿದ್ದು ನಿಟ್ಟುಸಿರು ಬಿಟ್ಟಿದ್ದಾರೆ.